ಗರುಡ ಪುರಾಣ: ಈ ವಸ್ತುಗಳ ದರ್ಶನ ಮಾತ್ರದಿಂದಲೇ ಜೀವನ ಸುಧಾರಿಸಿ, ಶಾಂತಿ ನೆಲೆಸುತ್ತದೆ.

Entertainment Featured-Articles News ಜೋತಿಷ್ಯ

ಗರುಡ ಪುರಾಣದಲ್ಲಿ ಜನನದಿಂದ ಮರಣದವರೆಗೆ ಎಲ್ಲಾ ನೀತಿಗಳನ್ನು ಸಹಾ ವಿವರಿಸಲಾಗಿದೆ. ಇದರಲ್ಲಿ ಮನುಷ್ಯನ ಪ್ರತಿಯೊಂದು ಕ್ರಿಯೆಯ ಬಗೆಯೂ ಸಹಾ ವಿವರಣೆಯನ್ನು ನೀಡಲಾಗಿದೆ. ಅವನ ಕಾರ್ಯಗಳೇ ಆತನ ಪುಣ್ಯ ಮತ್ತು ಪಾಪಗಳನ್ನು ನಿರ್ಧಾರ ಮಾಡುತ್ತದೆ. ಗರುಣ ಪುರಾಣದಲ್ಲಿ ಸಾವಿನ ನಂತರ ಮಾನವನು ಜೀವನ ಕಾಲದಲ್ಲಿ ಮಾಡಿದ ಪಾಪಗಳಿಗೆ ಪಡೆಯುವ ಶಿಕ್ಷೆ, ಪುನರ್ಜನ್ಮದ ಬಗ್ಗೆಯೂ ಸಹಾ ಹೇಳಲಾಗಿದೆ. ಗರುಡ ಪುರಾಣದಲ್ಲಿ ಅನೇಕ ಉತ್ತಮ ವಿಚಾರಗಳನ್ನು ಸಹಾ ಹೇಳಲಾಗಿದ್ದು, ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನವನ್ನು ಉತ್ತಮ ಪಡಿಸಿಕೊಳ್ಳಬಹುದು.

ಗರುಡ ಪುರಾಣದಲ್ಲಿ ಕೆಲವು ವಿಶೇಷವಾದ ವಸ್ತುಗಳ ಬಗ್ಗೆ ಸಹಾ ತಿಳಿಸಲಾಗಿದ್ದು, ಇವುಗಳನ್ನು ಮನುಷ್ಯ ನೋಡುವುದರಿಂದ ಮಾತ್ರವೇ ಮನುಷ್ಯನ ಜೀವನದ ಹಲವು ಸಮಸ್ಯೆಗಳು ನಿವಾರಣೆ ಆಗುತ್ತವೆ ಎಂದು ಹೇಳಲಾಗಿದೆ‌. ಅಲ್ಲದೇ ಅವುಗಳನ್ನು ನೋಡುವ ವ್ಯಕ್ತಿಗೆ ಪುಣ್ಯ ಪ್ರಾಪ್ತಿ ಸಹಾ ಆಗುತ್ತದೆ ಎನ್ನಲಾಗಿದೆ. ಹಾಗಾದರೆ ಬನ್ನಿ ನಾವಿಂದು ಗರುಡ ಪುರಾಣದ ಪ್ರಕಾರ ನಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ನೀಡುವ ಆ ವಿಶೇಷಗಳ ಬಗ್ಗೆ ತಿಳಿಯೋಣ.

ಗೋಶಾಲೆ : ಹಿಂದೂ ಧರ್ಮದಲ್ಲಿ ಗೋಶಾಲೆಗಳ ನಿರ್ಮಾಣ ಹಾಗೂ ಗೋವಿನ ಆರೈಕೆ ಮಾಡುವುದನ್ನು ಬಹಳ ಪುಣ್ಯವಾದ ಕಾರ್ಯ ಎನ್ನಲಾಗಿದೆ. ಗರುಡ ಪುರಾಣದಲ್ಲಿ ಸಹಾ ಗೋಶಾಲೆಯ ನಿರ್ಮಾಣ ಮತ್ತು ಗೋವಿನ ಪಾಲನೆ ಪೋಷಣೆ ಪುಣ್ಯ ಕಾರ್ಯ ಎನ್ನಲಾಗಿದೆ‌. ಅದು ಮಾತ್ರವೇ ಅಲ್ಲ ವ್ಯಕ್ತಿಯು ಗೋಶಾಲೆಯನ್ನು ನೋಡುವುದರಿಂದಲೂ ಸಹಾ ಆತನಿಗೆ ಶುಭ ಫಲ ದೊರೆಯುತ್ತದೆ ಎನ್ನಲಾಗಿದೆ.

ಹಸುವಿನ ಹಾಲು : ಹಸುವಿನ ಹಾಲನ್ನು ಹಿಂದೂ ಧರ್ಮದಲ್ಲಿ ಪೂಜನೀಯ ಮತ್ತು ಮಾತೃ ಸಮಾನ ಎನ್ನಲಾಗಿದೆ. ಹಸುವಿನ ಹಾಲು ಅಮೃತ ಸಮಾನ ಎನ್ನಲಾಗಿದ್ದು, ಇಂತಹ ಅಮೃತ ಸಮಾನವಾದ ಹಾಲಿನ ದರ್ಶನ ಮಾಡುವುದು ಸಹಾ ಪುಣ್ಯ ಫಲವನ್ನು ನೀಡುತ್ತದೆ ಎನ್ನಲಾಗಿದೆ.

ಹಸುವಿನ ಗೊರಸು – ಪಾದಗಳು : ಹಸುವಿನ ಪಾದಗಳಿಗೆ ನಮಸ್ಕರಿಸುವುದು ತೀರ್ಥ ಕ್ಷೇತ್ರ ದರ್ಶನ ಮಾಡಿದಷ್ಟೇ ಶ್ರೇಷ್ಠ ಎನ್ನಲಾಗಿದೆ‌. ಅದೇ ರೀತಿ ಅವುಗಳ ಗೊರಸು ಕಂಡರೂ ಸಹಾ ಪುಣ್ಯ ಫಲವನ್ನು ನೀಡುತ್ತದೆ ಎಂದು ಹೇಳಲಾಗಿದೆ. ಆದ್ದರಿಂದಲೇ ಹಸುವಿನ ಪಾದಗಳ, ಗೊರಸನ್ನು ಕಂಡರೆ ಶುಭವಾಗುತ್ತದೆ ಎನ್ನಲಾಗಿದೆ.

ಗೋಧೂಳಿ: ಹಸುಗಳು ಸಾಮಾನ್ಯವಾಗಿ ತಾವು ನಿಂತಿರುವ ಕಡೆ ಗೊರಸುಗಳಿಂದ ನೆಲವನ್ನು ಕೆರೆಯುವಾಗ ಅಲ್ಲಿಂದ ಧೂಳು ಬರುವುದನ್ನು ಗಮನಿಸರಬಹುದು. ಹೀಗೆ ನೆಲವನ್ನು ತನ್ನ ಗೊರಸಿನಿಂದ ಕೆರೆಯುತ್ತಿರುವ ಹಸು ಕಂಡರೂ ಅದು ಶುಭ ಫಲಗಳನ್ನು ನೀಡುತ್ತದೆ ಎಂದು ಹೇಳಲಾಗಿದೆ.

Leave a Reply

Your email address will not be published.