ಗರುಡ ಗಮನ ವೃಷಭ ವಾಹನಕ್ಕೆ ಸಿಕ್ತು ಬಾಲಿವುಡ್ ನಿರ್ದೇಶಕನ ದೊಡ್ಡ ಮೆಚ್ಚುಗೆ: ಕೊಟ್ಟ ರೇಟಿಂಗ್ ಎಷ್ಟು ಗೊತ್ತಾ?
ರಾಜ್ ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಜೊತೆಯಾಗಿ ನಟಿಸಿರುವ ಸಿನಿಮಾ ಗರುಡ ಗಮನ ವೃಷಭ ವಾಹನ ಸಿನಿಮಾ ತೆರೆಕಂಡಿದ್ದು, ಮಂಗಳೂರಿನ ಸೊಗಡಿನ ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದುಕೊಂಡು ಮುಂದೆ ಸಾಗಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲೇ ಸಿನಿಮಾ ಕುರಿತಾಗಿ ಉತ್ತಮವಾದ ಪ್ರತಿಕ್ರಿಯೆಗಳು ಹರಿದು ಬರುತ್ತಿದೆ. ಶನಿವಾರ ಹಾಗೂ ಭಾನುವಾರಗಳಂದು ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್ ನಲ್ಲಿ ಹೌಸ್ ಫುಲ್ ಪ್ರದರ್ಶನವನ್ನು ಕಂಡಿದ್ದು, ಸಿನಿಮಾ ನಿರ್ದೇಶಕ ರಾಜ್ ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಅವರು ಸಹಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಾಕಿ ಸಂಭ್ರಮ ಹಂಚಿಕೊಂಡಿದ್ದಾರೆ.
ಈಗ ಈ ಸಿನಿಮಾದ ಬಗ್ಗೆ ಒಂದು ಲೇಟೆಸ್ಟ್ ಹಾಗೂ ಬಹಳ ಆಸಕ್ತಿಕರವಾದ ಅಪ್ಡೇಟ್ ಒಂದು ಎಲ್ಲರ ಗಮನವನ್ನು ಸೆಳೆದಿದೆ. ಹೌದು ಶೆಟ್ಟರ ಜೋಡಿಯ ಈ ಸಿನಿಮಾವನ್ನು ನೋಡಿದ ಬಾಲಿವುಡ್ ನಿರ್ದೇಶಕರೊಬ್ಬರು, ಸಿನಿಮಾವನ್ನು ಮೆಚ್ಚಿಕೊಂಡಿರುವುದು ಮಾತ್ರವೇ ಅಲ್ಲದೇ ಅದಕ್ಕೆ ರೇಟಿಂಗ್ ಕೂಡಾ ನೀಡುವ ಮೂಲಕ ಸಿನಿಮಾಕ್ಕೆ ತಮ್ಮ ಪ್ರೋತ್ಸಾಹವನ್ನು ನೀಡಿದ್ದಾರೆ, ಸಿನಿಮಾ ತಂಡಕ್ಕೆ ಭೇಷ್ ಎಂದಿದ್ದಾರೆ. ಹಾಗಾದ್ರೆ ಯಾರು ಆ ನಿರ್ದೇಶಕ ತಿಳಿಯೋಣ ಬನ್ನಿ.
ಬಾಲಿವುಡ್ ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ, ದೊಡ್ಡ ಮಾರುಕಟ್ಟೆ ಹೊಂದಿರುವ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಗರುಡ ಗಮನ ವೃಷಭ ವಾಹನ ಸಿನಿಮಾವನ್ನು ನೋಡಿದ್ದು, ಈ ಸಿನಿಮಾಕ್ಕೆ ಅವರು ಐದಕ್ಕೆ ಬರೋಬ್ಬರಿ 4.5 ಸ್ಟಾರ್ ರೇಟಿಂಗ್ ಅನ್ನು ನೀಡಿದ್ದಾರೆ. ಕನ್ನಡ ಸಿನಿಮಾವೊಂದು ಕನ್ನಡಿಗರ ಮೆಚ್ಚುಗೆಯನ್ನು ನೀಡುವುದು ಒಂದು ಮಾತಾದರೆ, ಈಗ ಬಾಲಿವುಡ್ ನಿರ್ದೇಶಕರೊಬ್ಬರು ಕನ್ನಡ ಸಿನಿಮಾಕ್ಕೆ ಮೆಚ್ಚುಗೆಯನ್ನು ನೀಡಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ.
ಈ ಸಿನಿಮಾದಲ್ಲಿ ನಿರ್ದೇಶಕ ಹಾಗೂ ನಾಯಕ ಎರಡೂ ಪಾತ್ರವನ್ನು ದಕ್ಷ ವಾಗಿ ನಿರ್ವಹಣೆ ಮಾಡಿರುವ ರಾಜ್ ಬಿ ಶೆಟ್ಟಿ ಹಾಗೂ ನಟ, ನಿರ್ದೇಶಕ ರಿಷಬ್ ಶೆಟ್ಟಿ ಇಬ್ಬರೂ ಸೇರಿ ಸಿನಿಮಾ ಥಿಯೇಟರ್ ಗಳಿಗೆ ಭೇಟಿ ನೀಡಿದ್ದು, ಹೌಸ್ ಫುಲ್ ಬೋರ್ಡ್ ನೋಡಿ ಬಹಳ ಖುಷಿ ಪಟ್ಟಿದ್ದು, ಅದರ ಜೊತೆ ತೆಗೆದುಕೊಂಡ ಫೋಟೋವನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ರಿಷಭ್ ಶೆಟ್ಟಿಯವರು ತಮ್ಮ ಖಾತೆಯಲ್ಲಿ, ಅನುರಾಗ್ ಕಶ್ಯಪ್ ಅವರು ನೀಡಿರುವ ರೇಟಿಂಗ್ ನ ಫೋಟೋ ವನ್ನು ಶೇರ್ ಮಾಡಿಕೊಂಡು “ನಮ್ಮ ಸಿನೆಮಾ ನಮ್ಮ ಭಾಷೆಯಲ್ಲೇ ಗಡಿ ದಾಟಬೇಕು ಎಂಬ ಹಂಬಲ ನೆರವೇರುತ್ತಿರುವುದು ಬಹಳಷ್ಟು ಖುಷಿ ತಂದಿದೆ, ಧನ್ಯವಾದಗಳು” ಎಂದು ಬರೆದುಕೊಂಡು ತಮ್ಮ ಸಂತೋಷವನ್ನು ಅವರು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.