ಗಟ್ಟಿಮೇಳ ಸೀರಿಯಲ್ ಬಿಟ್ಟು ಹೊರ ಬಂದ ಆರತಿ: ಧೈರ್ಯವಾಗಿ ಅಸಲಿ ಕಾರಣ ಹೇಳಿದ ನಟಿ

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯ ಜನಪ್ರಿಯ ಹಾಗೂ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿದೆ ಗಟ್ಟಿ ಮೇಳ. ಟಿ ಆರ್ ಪಿ ಯಲ್ಲೂ ಟಾಪ್ ಸ್ಥಾನ ಪಡೆದ ಕೆಲವು ದಿನಗಳ ಕಾಲ ನಂಬರ್ ಒನ್ ಎನ್ನುವ ಸ್ಥಾನವನ್ನು ಸಹಾ ತನ್ನದಾಗಿಸಿಕೊಂಡಿದೆ ಗಟ್ಟಿ ಮೇಳ ಸೀರಿಯಲ್. ಗಟ್ಟಿ ಮೇಳ ಧಾರಾವಾಹಿ ಆರಂಭಗೊಂಡಾಗ ಜನ ಖುಷಿ ಪಟ್ಟಿದ್ದರು. ಪ್ರತಿಯೊಂದು ಪಾತ್ರಕ್ಕೂ ಇರುವ ಪ್ರಾಮುಖ್ಯತೆ, ಯುವ ಕಲಾವಿದರ ದಂಡು, ಹೊಸ ರೀತಿಯ ಕಥೆ ಎಲ್ಲವೂ ಸಹಾ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ಸನ್ನು ಪಡೆದುಕೊಂಡಿತು. ಆದರೆ ಅದೇಕೋ ಇತ್ತೀಚಿನ ದಿನಗಳಲ್ಲಿ ಜನರು ಇದು ಕೂಡಾ ಎಲ್ಲಾ ಧಾರಾವಾಹಿಗಳ ಹಾಗೆ ಆಗುತ್ತಿದೆ, ಮೊದಲ ರೀತಿ ಎಲ್ಲಾ ಪಾತ್ರಗಳಿಗೂ ವಿಶೇಷ ಪ್ರಾಧಾನ್ಯತೆಯನ್ನು ನೀಡಲಾಗುತ್ತಿಲ್ಲ, ಕೆಲವೊಂದು ಪಾತ್ರಗಳ ಉಪಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ ಎನ್ನುವ ಅಭಿಪ್ರಾಯಗಳನ್ನು ಸಹಾ ಸೋಷಿಯಲ್ ಮೀಡಿಯಾಗಳಲ್ಲಿ ಹೊರ ಹಾಕುತ್ತಿರುವುದನ್ನು ನಾವು ಗಮನಿಸಬಹುದಾಗಿದೆ.

ಇನ್ನು ಈ ಸೀರಿಯಲ್ ನಲ್ಲಿನ ಪಾತ್ರಗಳ ಕುರಿತಾಗಿ ಮಾತನಾಡುವುದಾದರೆ ಎಲ್ಲಾ ಪಾತ್ರಗಳಿಗೆ ಸಹಾ ಆರಂಭಧಲ್ಲಿ ವಿಶೇಷವಾದ ಪ್ರಾಧಾನ್ಯತೆ ಇತ್ತು. ಸೀರಿಯಲ್ ನಲ್ಲಿ ಸುಹಾಸಿನಿ ಪಾತ್ರ ಹಾಗೂ ಒಂದೆರಡು ಪಾತ್ರಗಳ ಹೊರತಾಗಿ ಬೇರೆ ಯಾವ ಮುಖ್ಯ ಪಾತ್ರದಲ್ಲೂ ಸಹಾ ಕಲಾವಿದರು ಬದಲಾಗಿರಲಿಲ್ಲ. ಆದರೆ ಇದೀಗ ಧಾರಾವಾಹಿಯ ಮುಖ್ಯ ಪಾತ್ರ ಒಂದರಲ್ಲಿ ಇದೀಗ ದೊಡ್ಡ ಬದಲಾವಣೆ ಆಗಿದೆ. ಹೌದು ಗಟ್ಟಿಮೇಳದಲ್ಲಿ ಆರತಿ ಪಾತ್ರದ ಮೂಲಕ ಮನೆ ಮನೆ ಮಾತಾಗಿದ್ದ ನಟಿ ಅಶ್ವಿನಿ ಅವರು ಇದೀಗ ಈ ಸೀರಿಯಲ್ ನಿಂದ ಹೊರಗೆ ನಡೆದಿದ್ದಾರೆ. ಇದೊಂದು ನಿಜಕ್ಕೂ ಆಶ್ಚರ್ಯಕರ ಬೆಳೆವಣಿಗೆ ಎನಿಸಿದೆ.

ನಟಿ ಅಶ್ವಿನಿ ಅವರು ತೆಲುಗಿನ ನಾಗ ಭೈರವಿ ಸೀರಿಯಲ್ ನಲ್ಲಿ ಸಹಾ ನಾಗಿಣಿಯಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಹುಶಃ ಅವರು ಡೇಟ್ ಗಳ ಸಮಸ್ಯೆಯಿಂದ ಅಥವಾ ವೈಯಕ್ತಿಕ ಕಾರಣದಿಂದ ಧಾರಾವಾಹಿ ಬಿಟ್ಟು ಹೊರಗೆ ನಡೆದಿರಬಹುದು ಎಂದು ಕೊಂಡರೆ ನಿಜಕ್ಕೂ ಅದು ಕಾರಣವಲ್ಲ ಎನ್ನಬಹುದು. ಏಕೆಂದರೆ ನಟಿ ಅಶ್ವಿನಿ ಈ ವಿಚಾರವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಮಾರ್ಮಿಕವಾಗಿ ಬರೆದುಕೊಂಡಿರುವ ಸಾಲುಗಳು ನಮಗೆ ಉತ್ತರವನ್ನು ಹೇಳುವಂತೆ ಇವೆ. ಹೌದು ಅಶ್ವಿನಿ ಅವರು ಕೆಲ ಸಮಸ್ಯೆಗಳಿಗೆ ಪರಿಹಾರ ಸಿಗೋದೇ ಇಲ್ಲ, ಅದೇ ಕಾರಣಕ್ಕಾಗಿ ಧಾರಾವಾಹಿಯನ್ನು ಬಿಟ್ಟಿದ್ದೇನೆ ಎಂದಿದ್ದಾರೆ ಅಶ್ವಿನಿ. ಅಲ್ಲದೇ ಅವರು ಮಾಡಿರುವ ಇನ್ನೊಂದು ಪೋಸ್ಟ್ ಕೂಡಾ ಗಮನ ಸೆಳೆದಿದೆ.

ಎಲ್ಲಾ ಒಳ್ಳೆಯ ಸಂಗತಿಗಳು ಕೊನೆಗೊಳ್ಳಬೇಕು ಮತ್ತು ಈ ಆನ್‌ಸ್ಕ್ರೀನ್ ದಂಪತಿಗಳ ವಿಷಯವೂ ಅಷ್ಟೇ. ಬಹಳಷ್ಟು ಗಟ್ಟಿಮೇಳ ಅಭಿಮಾನಿಗಳಿಂದ ಪ್ರೀತಿಸಲ್ಪಟ್ಟ ಅವರು ತಮ್ಮದೇ ಆದ ದೊಡ್ಡ ಅನುಯಾಯಿಗಳನ್ನು ಹೊಂದಿದ್ದರು ಮತ್ತು ಅಭಿಮಾನಿಗಳ ಪುಟಗಳನ್ನು ಹೊಂದಿದ್ದರು. ಅವರು ಅಶ್ವಿನಿ ಕಾರ್ಯಕ್ರಮದಿಂದ ಬೇರೆಯಾದರು ಎಂದು ಇನ್ನೂ ನಂಬಲು ಸಾಧ್ಯವಾಗಲಿಲ್ಲ. ನಾವು ಎಲ್ಲವನ್ನು ನಿಯಂತ್ರಿಸಲು ಎಷ್ಟು ಬಯಸುತ್ತೇವೆ, ಜೀವನವು ಅಡ್ಡಿಯಾಗುತ್ತದೆ, ಮತ್ತು ಬದಲಾವಣೆಗಳನ್ನು ಬಂದಂತೆ ನಾವು ಸ್ವೀಕರಿಸಬೇಕು. ನಾವೆಲ್ಲರೂ ಅವಳನ್ನು ಆರತಿಯಂತೆ ಪ್ರೀತಿಸುತ್ತಿದ್ದೆವು, ಆದರೆ ನಾವು ಅವಳ ನಿರ್ಧಾರವನ್ನು ಗೌರವಿಸಬೇಕು ಮತ್ತು ಮುಂದುವರಿಯಬೇಕು. ನಮ್ಮಲ್ಲಿ ಒಬ್ಬ ಹೊಸ ನಟ (ಗಗನಕುಂಚಿ) ಅವರ ಪ್ರತಿಭೆಯನ್ನು ಪ್ರದರ್ಶಿಸುವ ಮತ್ತು ಆರತಿಯ ಪಾತ್ರಕ್ಕೆ ನ್ಯಾಯ ಒದಗಿಸುವ ಕನಸುಗಳಿವೆ, ಆದ್ದರಿಂದ ಎಲ್ಲಾ ನಟರಿಗೆ ಈ ಹಿಂದೆ ಸುರಿಸಿದ ಅದೇ ಪ್ರೀತಿಯಿಂದ ನಾವು ಅವಳನ್ನು ಸ್ವಾಗತಿಸೋಣ! ಎಂದಿದ್ದಾರೆ.

ಈ ಮೂಲಕ ಆರತಿ ಪಾತ್ರಕ್ಕೆ ಹೊಸ ಎಂಟ್ರಿ ನೀಡುತ್ತಿರುವ ನಟಿ ಗಗನ ಅವರಿಗೆ ಸ್ವಾಗತವನ್ನು ಸಹಾ ಕೋರಿದ್ದಾರೆ ಅಶ್ವಿನಿ. ಇನ್ನು ಕೆಲವೇ ದಿನಗಳ ಹಿಂದೆ ಸೀರಿಯಲ್ ನ ಹೊಸ ಪ್ರೋಮೋದಲ್ಲಿ ಅಶ್ವಿನಿ ಅವರ ಹೊಸ ಲುಕ್, ವೇದಾಂತ್ ಅಮೂಲ್ಯ ಮದುವೆಗೆ ಅಡ್ಡಿಯಾಗುವ ಮಾತುಗಳನ್ನಾಡುವ ಪ್ರೊಮೋ ಗಮನ ಸೆಳೆದಿತ್ತು. ಆದರೆ ಅದರ ನಡುವೆ ಅಶ್ವಿನಿ ಹೊರ ಬಂದಿರುವುದು ಅವರ ಅಭಿಮಾನಿಗಳಿಗೆ ಖಂಡಿತ ಬೇಸರವನ್ನು ಉಂಟು ಮಾಡಿದೆ. ಇತ್ತೀಚಿನ ದಿನಗಳಲ್ಲಿ ಆರತಿ ಪಾತ್ರವು ಸಹಾ ಯಾವುದೇ ಪ್ರಾಮುಖ್ಯತೆ ಇಲ್ಲದೇ ಸಹ ಕಲಾವಿದರ ಹಾಗೆ ನಡೆಯುತ್ತಿದ್ದ ಕಾರಣದಿಂದ ಅಶ್ವಿನಿ ಬೇಸರಗೊಂಡಿದ್ದಾರೆನ್ನುವ ಮಾತುಗಳು ವೀಕ್ಷಕರು ಆಡಿದ್ದಾರೆ.

Leave a Comment