ಗಟ್ಟಿಮೇಳ ಸೀರಿಯಲ್ ನಟಿಯ ಹೊಸ ಲುಕ್ಸ್ ಗೆ ಫಿದಾ ಆಗಿ ಮೆಚ್ಚುಗೆ ನೀಡಿದ ಅಭಿಮಾನಿಗಳು

Entertainment Featured-Articles News
44 Views

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯ ಧಾರಾವಾಹಿಗಳು ಈಗಾಗಲೇ ಜನಮನ್ನಣೆಯನ್ನು ಪಡೆದುಕೊಂಡಿದೆ. ಅಂತಹ ಧಾರಾವಾಹಿಗಳಲ್ಲಿ ಗಟ್ಟಿಮೇಳ ಕೂಡಾ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿರುವ ವಿಶೇಷವಾದ ಧಾರಾವಾಹಿಯಾಗಿ ಟಾಪ್ 5 ಧಾರವಾಹಿಗಳಲ್ಲಿ ಸದಾ ತನ್ನ ಸ್ಥಾನವನ್ನು ಉಳಿಸಿಕೊಂಡು ಬಂದಿದೆ. ಒಂದಷ್ಟು ತಿಂಗಳುಗಳ ಕಾಲ ನಂಬರ್ ಒನ್ ಸ್ಥಾನವನ್ನು ತನ್ನದಾಗಿಸಿಕೊಂಡು ಯಶಸ್ಸಿನ ಇನ್ನೊಂದು ಹಂತವನ್ನು ಗಟ್ಟಿಮೇಳ ತಲುಪಿತ್ತು. ಗಟ್ಟಿಮೇಳ ಧಾರಾವಾಹಿ ಬಹಳಷ್ಟು ಯುವ ಪ್ರತಿಭೆಗಳನ್ನು ಒಳಗೊಂಡಿರುವಂತಹ ಧಾರವಾಹಿಯಾಗಿ ವಿಶೇಷ ಗಮನ ಸೆಳೆಯುತ್ತದೆ. ಈ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಕ್ಕೂ ಕೂಡಾ ವಿಶೇಷ ಒತ್ತನ್ನು ನೀಡಲಾಗಿದೆ. ಆದ್ದರಿಂದಲೇ ನಾಯಕ-ನಾಯಕಿಯ ಪಾತ್ರಗಳ ಜೊತೆಗೆ ಇತರೆ ಪಾತ್ರಗಳು ಕೂಡ ಜನರ ಅಪಾರ ಮೆಚ್ಚುಗೆಯನ್ನು ಪ್ರೀತಿಯನ್ನು ಪಡೆದುಕೊಂಡಿದೆ.

ಗಟ್ಟಿಮೇಳ ಮೇಳ ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ಒಂದು ಸೀರಿಯಲ್ ನ ಕಥಾ ನಾಯಕ ವೇದಾಂತ ವಸಿಷ್ಠನ ತಂಗಿ ಆದ್ಯಳ ಪಾತ್ರ. ಹೌದು ಈ ಪಾತ್ರದ ಮೂಲಕ ನಾಡಿದ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ನಟಿ ಅನ್ವಿತಾ ಸಾಗರ್, ನಮ್ಮ ಮನೆ ಮಗಳು ಎನ್ನುವ ಭಾವನೆಯನ್ನು ಮೂಡಿಸುವ ಹಾಗೆ ಬಹಳ ಸಹಜವಾಗಿ ನಟಿಸುವ ಮೂಲಕ ಇಂದು ಅವರು ಎಲ್ಲಾ ಕಡೆ ಆದ್ಯ ಹೆಸರಿನಿಂದಲೇ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಮತ್ತೊಂದು ವಿಶೇಷ ಏನೆಂದರೆ ಗಟ್ಟಿಮೇಳ ಧಾರಾವಾಹಿ ಗೆ ಆಡಿಶನ್ ನೀಡುವ ಸಂದರ್ಭದಲ್ಲಿ ಅನ್ವಿತಾ ನಾಯಕಿಯ ಪಾತ್ರಕ್ಕೆ ಆಡಿಶನ್ ನೀಡಲು ಬಂದಿದ್ದರು ಎನ್ನಲಾಗಿದೆ. ಅನಂತನ ಅವರಿಗೆ ಆದ್ಯ ಪಾತ್ರವನ್ನು ನೀಡಲಾಗಿತ್ತು. ಅಲ್ಲದೇ ಆಗ ಅನ್ವಿತ ಅವರು ಆ ಪಾತ್ರದ ವಿಶೇಷತೆಯನ್ನು ಅರಿತು ಅದಕ್ಕೆ ಒಪ್ಪಿಕೊಂಡಿದ್ದರು ಎನ್ನಲಾಗಿದೆ.

ಮೂಲತಃ ಮಂಗಳೂರಿನವರಾದ ಅನ್ವಿತಾ ಅಲ್ಲಿನ ಒಂದು ಸ್ಥಳೀಯ ಚಾನೆಲ್ ನಲ್ಲಿ ನಿರೂಪಣೆ ಮಾಡುವ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ್ದವರು. ಅನಂತರ ಅವರು ತುಳು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಗಟ್ಟಿಮೇಳ ಧಾರಾವಾಹಿಯ ಮೂಲಕ ಜನಪ್ರಿಯತೆಯ ಇನ್ನೊಂದು ಹಂತವನ್ನು ತಲುಪಿದ್ದಾರೆ. ಅನ್ವಿತ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಅವರು ತಮ್ಮ ಅಂದವಾದ ಹೊಸ ಹೊಸ ಹಾಗೂ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಅಲ್ಲಿ ಅನ್ವಿತ ಅವರನ್ನು 1,50,000 ಕ್ಕಿಂತಲೂ ಅಧಿಕ ಮಂದಿ ಹಿಂಬಾಲಿಸುತ್ತಿದ್ದಾರೆ. ಇನ್ನು ಅನಿತಾ ಅವರು ಹಂಚಿಕೊಳ್ಳುವ ಫೋಟೋಗಳಿಗೆ ಭರ್ಜರಿ ಲೈಕ್ ಮತ್ತು ಕಾಮೆಂಟ್ ಗಳು ಬರುತ್ತವೆ.

ಇತ್ತೀಚೆಗೆ ಅನ್ವಿತ ಒಂದು ವಿಭಿನ್ನ ಹಾಗೂ ಆಕರ್ಷಕ ಶೈಲಿಯಲ್ಲಿ ಸೀರೆಯನ್ನು ಕೊಟ್ಟು ಫೋಟೋಶೂಟ್ ಮಾಡಿಸಿರುವಂತಹ ಬಹಳ ಸುಂದರವಾದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬಹಳ ಅಂದವಾಗಿ ಹಾಗೂ ಮಾದಕವಾದ ನೋಟದೊಂದಿಗೆ ಅನ್ವಿತ ಅವರು ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ಈ ಫೋಟೋಗಳನ್ನು ನೋಡಿದ ಅವರ ಅಭಿಮಾನಿಗಳು ಸಹಾ ಬಹಳ ಖುಷಿ ಪಟ್ಟಿದ್ದಾರೆ. ಸುಂದರವಾಗಿ ಕಾಣುತ್ತಿರುವ ಅನ್ವಿತಾ ಅವರ ಫೋಟೋಗಳಿಗೆ ಅಭಿಮಾನಿಗಳ ಕಡೆಯಿಂದ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಬಹಳಷ್ಟು ಜನ ಕಾಮೆಂಟ್ ಗಳನ್ನು ಮಾಡುವ ಮೂಲಕ ತಮ್ಮ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

Leave a Reply

Your email address will not be published. Required fields are marked *