ಗಟ್ಟಿಮೇಳ ಸೀರಿಯಲ್ ಗೆ ಗುಡ್ ಬೈ ಹೇಳ್ತಾರಾ ಆದ್ಯಾ ಪಾತ್ರಧಾರಿ?? ಹೊಸ ಪ್ರಯತ್ನಕ್ಕೆ ಮುಂದಾದ ನಟಿ ಅನ್ವಿತಾ ಸಾಗರ್!!

Written by Soma Shekar

Published on:

---Join Our Channel---

ನಟಿ ಅನ್ವಿತಾ‌ಸಾಗರ್ ಎನ್ನುವ ಹೆಸರನ್ನು ಕೇಳಿದಾಗ ಯಾರಿವರು?? ಎನಿಸುವುದು ಸಹಜ, ಆದರೆ ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಜನಪ್ರಿಯತೆ ಪಡೆದಿರುವ, ಟಾಪ್ ಐದು ಧಾರಾವಾಹಿಗಳಲ್ಲಿ ಗಟ್ಟಿ ಸ್ಥಾನವನ್ನು ಪಡೆದುಕೊಂಡಿರುವ ಗಟ್ಟಿ ಮೇಳ ಧಾರಾವಾಹಿಯ ಆದ್ಯಾ ಎಂದ ಕೂಡಲೇ ಎಲ್ಲರಿಗೂ ಆ ನಟಿ ತಟ್ಟನೆ ನೆನಪಾಗುವಷ್ಟು ಜನಪ್ರಿಯತೆಯನ್ನು ಈಗಾಗಲೇ ಪಡೆದುಕೊಂಡಿದ್ದಾರೆ.‌ ಹೌದು ಗಟ್ಟಿಮೇಳ ಧಾರಾವಾಹಿ ಯಲ್ಲಿ ನಾಯಕ ವೇದಾಂತ್, ವಿಕ್ರಾಂತ್ ಹಾಗೂ ಧೃವನ ಮುದ್ದಿನ ತಂಗಿ ಆದ್ಯಾ ಪಾತ್ರದ ಮೂಲಕ ಜನರ ಮನಸ್ಸನ್ನು ಗೆದ್ದಿರುವ ನಟಿಯೇ ಅನ್ವಿತಾ ಸಾಗರ್.

ತುಳು ನಾಡಿನಲ್ಲಿ ಈಗಾಗಲೇ ಸಿನಿಮಾ ಬಾಡಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಅನ್ವಿತಾ ಸಾಗರ್ ಅವರು ಗಟ್ಟಿಮೇಳ ಧಾರಾವಾಹಿಯ ಮೂಲಕ‌ ನಾಡಿನ ಮನೆ‌ ಮನೆ ಮಾತಾಗಿದ್ದಾರೆ. ಸೋಶಿಯಲ್ ಮೀಡಿಯಾ ಗಳಲ್ಲಿ ಸಕ್ರಿಯವಾಗಿರುವ ಅನ್ವಿತಾ ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಹಿಂಬಾಲಕರು ಇದ್ದಾರೆ. ಹೀಗೆ ಸಿನಿಮಾ ಹಾಗೂ ಧಾರಾವಾಹಿಯ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ಅನ್ವಿತಾ ಸಾಗರ್ ಅವರು ಇದೀಗ ಹೊಸದೊಂದು ಹೆಜ್ಜೆಯನ್ನು ಇಡಲು ಮುಂದಾಗಿದ್ದಾರೆ.

ನಟಿ ಅನ್ವಿತಾ ಸಾಗರ್ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಹೊಸ ಡ್ಯಾನ್ಸ್ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ. ಡಾನ್ಸ್ ಚಾಂಪಿಯನ್ ಶಿಪ್ ಗಾಗಿ ಸ್ಪರ್ಧಿಸಲಿದ್ದಾರೆ ಅನ್ವಿತಾ. ಇನ್ನು ಧಾಅರವಾಹಿ ಜೊತೆಯಲ್ಲಿ ರಿಯಾಲಿಟಿ ಶೋದಲ್ಲಿ ಹೆಜ್ಜೆ ಹಾಕಲು ಅನ್ವಿತಾ ಸಜ್ಜಾಗಿದ್ದು, ಎರಡನ್ನು ಬ್ಯಾಲೆನ್ಸ್ ಮಾಡುವ ವಿಷಯದ ಕುರಿತಾಗಿ ಅವರು ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.

ಡ್ಯಾನ್ಸ್ ಎಂದರೆ ನನಗೆ ಬಹಳ ಇಷ್ಟ. ಡಾನ್ಸ್ ರಿಯಾಲಿಟಿ ಶೋ ಮಾಡಬೇಕು ಎನ್ನುವ ಮಾತನ್ನು ಈ ಹಿಂದೆ ಕೂಡಾ ಹೇಳಿದ್ದೆ. ಚಿಕ್ಕ ವಯಸ್ಸಿನಿಂದಲೂ ಡಾನ್ಸ್ ಮಾಡೋದು ಬಹಳ ಇಷ್ಟ, ಈಗ ಅವಕಾಶ ಸಿಕ್ಕಿದೆ. ಸದ್ಯಕ್ಕೆ ಸೀರಿಯಲ್, ಡಾನ್ಸ್ ಶೋ ನಡುವೆ ಕ್ಲಾಷ್ ಆಗಿಲ್ಲ. ಮುಂದೆ ಆದಾಗ ಏನಾಗುತ್ತೆ ನೋಡಬೇಕು ಎಂದಿದ್ದಾರೆ. ಈ ಹೊಸ ಡಾನ್ಸ್ ರಿಯಾಲಿಟಿ ಶೋ ನಲ್ಲಿ ನಟ ವಿಜಯ್ ರಾಘವೇಂದ್ರ ಹಾಗೂ ಕೊರಿಯೋಗ್ರಾಫರ್ ಮಯೂರಿ ಜಡ್ಜ್ ಗಳಾಗಿದ್ದಾರೆ.

Leave a Comment