ಗಟ್ಟಿಮೇಳ ಸೀರಿಯಲ್ ನಟ ರಕ್ಷಿತ್ ಮತ್ತು ತಂಡದಿಂದ ಕುಡಿದು ರಗಳೆ, ರಂಪಾಟ:ದೂರು ದಾಖಲು

Written by Soma Shekar

Updated on:

---Join Our Channel---

ಕನ್ನಡ ಕಿರುತೆರೆಯ ಟಾಪ್ ಸೀರಿಯಲ್ ಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಧಾರಾವಾಹಿ ಗಟ್ಟಿಮೇಳ ಜನಪ್ರಿಯತೆಯ ವಿಚಾರದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿದೆ. ಆದರೆ ಇದೀಗ ಈ ಸೀರಿಯಲ್ ತಂಡದವರು ಮಾಡಿರುವ ಎಡವಟ್ಟು ಕೆಲಸದಿಂದ ಅವರ ಮೇಲೆ ದೂರು ದಾಖಲಾಗಿದೆ ಎನ್ನಲಾಗಿದೆ. ಗಟ್ಟಿಮೇಳ ಧಾರಾವಾಹಿ ನಟ, ನಿರ್ಮಾಪಕ ರಕ್ಷಿತ್ ಮತ್ತು ತಂಡವು ಕುಡಿದು ರಂಪಾಟ ಮಾಡಿದ್ದು, ಅವರ ವಿ ರು ದ್ಧ ಪ್ರಕರಣವನ್ನು ದಾಖಲು ಮಾಡಲಾಗಿದ್ದು ಈ ವಿಷಯ ಈಗ ದೊಡ್ಡ ಸುದ್ದಿಯಾಗಿದೆ.

ನಾಗರಬಾವಿ ಬಳಿಯಲ್ಲಿ ಶೂಟಿಂಗ್ ನಡೆಸುತ್ತಿದ್ದ ಸೀರಿಯಲ್ ತಂಡವು ಶೂಟಿಂಗ್ ಮುಗಿದ ನಂತರ ಕೆಂಗೇರಿ ಬಳಿಯ ಜಿಂಜರ್ ಲೇಕ್ ವ್ಯೂ ಹೊಟೇಲ್ ಗೆ ತೆರಳಿತ್ತು ಎನ್ನಲಾಗಿದೆ. ಈ ವೇಳೆ ರಕ್ಷಿತ್ ಮತ್ತು ತಂಡವು ಕುಡಿದು ಗ ಲಾ ಟೆ ಮಾಡುತ್ತಿದೆ ಎಂದು ಸ್ಥಳೀಯರು ಹೊಯ್ಸಳ ಪೋಲಿಸರಿಗೆ ಮಾಹಿತಿಯನ್ನು ರವಾನಿಸಿದ್ದಾರೆ. ಬಳಿಕ ಹೊಯ್ಸಳ ತಂಡವು ಸ್ಥಳಕ್ಕೆ ಆಗಮಿಸಿದಾಗ ಸೀರಿಯಲ್ ತಂಡದವರು ಹಾಗೂ ಪೋಲಿಸರ ನಡುವೆ ಮಾತಿನ ಚಕಮಕಿ ಸಹಾ ನಡೆದಿದೆ ಎನ್ನಲಾಗಿದೆ.

ಕುಡಿದ ಆ ರೋ ಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಪೋಲಿಸರು ಅವರನ್ನು ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿದ್ದು ನಂತರ ರಕ್ಷಿತ್, ಅಭಿಷೇಕ್ , ರಂಜನ್, ಅನುಷಾ, ಶರಣ್ಯ ಸೇರಿದಂತೆ ಒಟ್ಟು ಏಳು ಮಂದಿಯ ಮೇಲೆ‌ ಎಫ್ ಐ ಆರ್ ದಾಖಲು ಮಾಡಲಾಗಿದ್ದು, ನೈಟ್ ಕ ಕರ್ಫ್ಯೂ ಜಾರಿಯಲ್ಲಿದ್ದರೂ ಇವರಿಗೆ ಅನುಮತಿ ನೀಡಿದ ಕಾರಣದಿಂದಾಗಿ ಹೊಟೇಲ್ ಮಾಲೀಕರ ಮೇಲೆ ಕೂಡಾ ಪ್ರಕರಣವನ್ನು ದಾಖಲು ಮಾಡಲಾಗಿದೆ.

Leave a Comment