ಕನ್ನಡ ಕಿರುತೆರೆಯಲ್ಲಿ ಸಾಂಸಾರಿಕ ಧಾರಾವಾಹಿಗಳ ನಡುವೆಯೇ ಅಲೌಕಿಕ ಕಾಲ್ಪನಿಕ ಆಧಾರಿತ ಕಥೆ ನಾಗಿಣಿ 2 ಕೂಡಾ ಜನಪ್ರಿಯ ಧಾರಾವಾಹಿಯಾಗಿ ದೊಡ್ಡ ಹೆಸರನ್ನು ಮಾಡಿದೆ. ಈ ಸೀರಿಯಲ್ ತನ್ನ ಅದ್ದೂರಿತನ, ಅದ್ಭುತ ಗ್ರಾಫಿಕ್ಸ್ ಮಾಯಾಜಾಲಗಳಿಂದ ತನ್ನದೇ ಆದ ಮೋಡಿಯನ್ನು ಮಾಡುತ್ತಾ, ಕನ್ನಡ ಕಿರುತೆರೆಯ ಟಾಪ್ ಸೀರಿಯಲ್ ಗಳಲ್ಲಿ ಒಂದು ಎನ್ನುವ ಸ್ಥಾನವನ್ನು ಪಡೆದುಕೊಂಡಿದೆ. ನಾಗ ಲೋಕ ದಿಂದ ಸೇ ಡಿ ನ ಜ್ವಾ ಲೆಯನ್ನು ಹೊತ್ತು ಶ ತೃಗಳ ಸಂ ಹಾ ರ ಮಾಡಲು, ತನ್ನ ಪ್ರಿಯತಮ ಆದಿ ಶೇಷ ಮತ್ತು ನಾಗಮಣಿಯ ಅನ್ವೇಷಣೆಯಲ್ಲಿ ಭೂಮಿಗೆ ಬಂದ ನಾಗಿಣಿಯ ಕಥೆ ಇದು.
ಈ ಸೀರಿಯಲ್ ನಲ್ಲಿ ನಾಗಿಣಿಯಾಗಿ ಕಿರುತೆರೆಯ ಜನಪ್ರಿಯ ನಟಿ ನಮ್ರತಾ ಗೌಡ ಅವರು ನಟಿಸಿ ಜನ ಮನ ಗೆದ್ದಿದ್ದಾರೆ. ಇನ್ನು ಆದಿ ಶೇಷನ ಮರು ಜನ್ಮದ ಪಾತ್ರ, ಕಥೆಯಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ ನಟ ನಿನಾದ್ ಹರಿತ್ಸ. ಹೌದು ನಾಗಿಣಿ 2 ಸೀರಿಯಲ್ ನಲ್ಲಿ ನಾಯಕ ತ್ರಿಶೂಲ್ ಪಾತ್ರದ ಮೂಲಕ ಮಿಂಚುತ್ತಿರುವ ನಟನೇ ನಿನಾದ್ ಅವರು. ತ್ರಿಶೂಲ್ ಪಾತ್ರದ ಮೂಲಕ ಜನರಿಗೆ ಹತ್ತಿರವಾಗಿರುವ ನಿನಾದ್ ನಾಗಿಣಿಯಲ್ಲಿನ ತಮ್ಮ ಪಾತ್ರದ ಮೂಲಕವೇ ದೊಡ್ಡ ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಇದೀಗ ನಿನಾದ್ ತಮ್ಮ ಜೀವನದಲ್ಲಿ ಹೊಸ ಹೆಜ್ಜೆಯನ್ನು ಇಡಲು ಸಜ್ಜಾಗಿದ್ದಾರೆ. ತಮ್ಮ ಜೀವನದ ಪ್ರಮುಖ ಘಟ್ಟಕ್ಕೆ ಎಂಟ್ರಿ ನೀಡಲು ಖುಷಿಯಿಂದ ಸಿದ್ಧವಾಗಿದ್ದಾರೆ. ಹೌದು ತಮ್ಮ ಅಭಿಮಾನಿಗಳ ಜೊತೆಗೆ ನಿನಾದ್ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದು, ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ತಾವು ಪ್ರೀತಿಸಿರುವ ಹುಡುಗಿಯ ಜೊತೆಗೆ ಮದುವೆಗೆ ಅಣಿಯಾಗಿರುವ, ಈ ಹಿನ್ನೆಲೆಯಲ್ಲಿ ಅವರ ನಿಶ್ಚಿತಾರ್ಥ ನಡೆದ ವಿಚಾರವನ್ನು ಹಂಚಿಕೊಂಡಿ ಸಂಭ್ರಮಿಸಿದ್ದಾರೆ.
ನಿನಾದ್ ಅವರು ರಮ್ಯ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅವರ ಮದುವೆಗೆ ದಿನಾಂಕ ನಿಶ್ಚಯವಾಗಿದೆ ಎನ್ನಲಾಗಿದೆ. ನಿಶ್ಚಿತಾರ್ಥ ಆದ ವಿಚಾರವನ್ನು ನಿನಾದ್ ಫೋಟೋ ಗಳನ್ನು ಶೇರ್ ಮಾಡಿಕೊಂಡು, ತಮ್ಮ ಜೀವನದ ಈ ಸುಂದರವಾದ ಕ್ಷಣಗಳ ಬಗ್ಗೆ ಕೆಲವು ಸಾಲುಗಳನ್ನು ಬರೆದುಕೊಂಡು ತಮ್ಮ ಈ ಖುಷಿಯನ್ನು ತಮ್ಮೆಲ್ಲಾ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ಗೆ ಅವರ ಅಭಿಮಾನಿಗಳಿಂದ ಮೆಚ್ಚುಗೆ ಹರಿದು ಬಂದಿದ್ದು, ಎಲ್ಲರೂ ಶುಭ ಹಾರೈಸುತ್ತಿದ್ದಾರೆ.
ನಿನಾದ್ ತಮ್ಮ ಪೋಸ್ಟ್ ನಲ್ಲಿ, “ನಾನು ಮತ್ತು ರಮ್ಯ ನಮ್ಮ ಪೋಷಕರು ಮತ್ತು ಹಿರಿಯರ ಆಶೀರ್ವಾದದೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎಂದು ತಿಳಿಸಲು ನನಗೆ ಬಹಳ ಸಂತೋಷವಾಗುತ್ತಿದೆ. ನಮ್ಮಿಬ್ಬರ ಆಯ್ಕೆಗೆ ಒಪ್ಪಿಗೆ ನೀಡಿದ ನಮ್ಮ ಹಿರಿಯರಿಗೆ ನಾವು ಕೃತಜ್ಞರಾಗಿದ್ದೇವೆ. ನಮ್ಮ ಮೇಲೆ ನಿಮ್ಮ ಪ್ರೀತಿ ಮತ್ತು ಹಾರೈಕೆಗಳು ಇರಲಿ” ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.