ಗಟ್ಟಿಮೇಳ ಅಮೂಲ್ಯ ನಟನೆಯ ತೆಲುಗು ಸೀರಿಯಲ್ ಪ್ರಮೋಶನ್ ಗೆ ಕೃತಿ ಶೆಟ್ಟಿ ಪಡೆದ ಸಂಭಾವನೆ ಇಷ್ಟೊಂದಾ??

Written by Soma Shekar

Published on:

---Join Our Channel---

ನಮ್ಮ‌ ಕನ್ನಡದ ನಟಿಯರು ನೆರೆಯ ತೆಲುಗು ನಾಡಿನಲ್ಲಿ ಬೆಳ್ಳಿ ತೆರೆ ಹಾಗೂ ಕಿರುತೆರೆಯಲ್ಲಿ ಭರ್ಜರಿ ಬ್ಯುಸಿಯಾಗಿದ್ದಾರೆ. ಕನ್ನಡದ ಬಹುತೇಕ ಜನಪ್ರಿಯ ಕಿರುತೆರೆಯ ನಟಿಯರೆಲ್ಲಾ ತೆಲುಗಿನ ಸೀರಿಯಲ್ ಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬಹುತೇಕ ತೆಲುಗಿನ ಸೂಪರ್ ಹಿಟ್ ಸೀರಿಯಲ್ ಗಳಲ್ಲಿ ಕನ್ನಡತಿಯರೇ ಬೀಗುತ್ತಿದ್ದಾರೆ. ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯಾದ ಗಟ್ಟಿ ಮೇಳದಲ್ಲಿ ಈ ಹಿಂದೆ ಆರತಿ ಪಾತ್ರ ಪೋಷಿಸುತ್ತಿದ್ದ ನಟಿ ಅಶ್ವಿನಿ ಅವರು ತೆಲುಗಿನ ನಾಗ ಭೈರವಿ ಸೀರಿಯಲ್ ನಲ್ಲಿ ನಾಗಿಣಿಯಾಗಿ ನಟಿಸುತ್ತಿದ್ದಾರೆ. ಇದೀಗ ಗಟ್ಟಿ ಮೇಳ‌ ಸೀರಿಯಲ್ ನಾಯಕಿ ರೌಡಿ ಬೇಬಿ ಅಮೂಲ್ಯ ಅಂದರೆ ನಟಿ ನಿಶಾ ಕೂಡಾ ತೆಲುಗಿನ ಕಿರುತೆರೆಗೆ ಎಂಟ್ರಿ ನೀಡುತ್ತಿದ್ದಾರೆ. ಈಗಾಗಲೇ ಅವರು ನಟಿಸುತ್ತಿರುವ ಹೊಸ ಸೀರಿಯಲ್ ನ ಪ್ರೊಮೊಗಳು ಸದ್ದು ಮಾಡಿದೆ.

ತೆಲುಗಿನಲ್ಲಿ ಝೀ ತೆಲುಗು ವಾಹಿನಿಯಲ್ಲಿ ಮುತ್ಯಮಂತಾ ಮುದ್ದು ಎನ್ನುವ ಹೊಸ ಸೀರಿಯಲ್ ನ ಪ್ರೋಮೋ ಬಿಡುಗಡೆ ಆಗಿ ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ಅದ್ದೂರಿಯಾಗಿ ಮೇಕಿಂಗ್ ಇರುವ ಈ ಸೀರಿಯಲ್ ಮೂಲಕವೇ ಗಟ್ಟಿ ಮೇಳ ಅಮೂಲ್ಯ ಪಾತ್ರದ ಮೂಲಕ ಕರ್ನಾಟಕದಲ್ಲಿ ಹೆಸರು ಮಾಡಿರುವ ನಟಿ ನಿಶಾ‌ ಅವರು ತೆಲುಗಿಗೆ ಎಂಟ್ರಿ ನೀಡುತ್ತಿದ್ದಾರೆ. ಈ ಸೀರಿಯಲ್ ನ ಪ್ರೋಮೋದಲ್ಲೂ ವಿಶೇಷ ತೆ ಒಂದಿದೆ. ಅದೇನೆಂದರೆ ತಮ್ಮ ಮೊದಲ ತೆಲುಗು ಸಿನಿಮಾ ಉಪ್ಪೆನಾ ಮೂಲಕ ತೆಲುಗು ಚಿತ್ರ ರಂಗದಲ್ಲಿ ಒಂದು ಹೊಸ ಸಂಚಲನ ಸೃಷ್ಟಿಸಿರುವ ಕನ್ನಡತಿ ಕೃತಿ ಶೆಟ್ಟಿ ಮುತ್ಯಮಂತಾ ಸೀರಿಯಲ್ ನ ಪ್ರಮೋಷನ್ ನಲ್ಲಿ ತೊಡಗಿರುವುದು.

ಹೌದು ಈ ಹೊಸ ಸೀರಿಯಲ್ ಆರಂಭದಲ್ಲಿ ನಟಿ ಕೃತಿ ಶೆಟ್ಟಿ ಕಾಣಿಸಿಕೊಳ್ಳುವ ಮೂಲಕ ಸೀರಿಯಲ್ ನ ಭರ್ಜರಿ ಆರಂಭಕ್ಕೆ ಸಾಥ್ ನೀಡಿದ್ದಾರೆ. ನಟಿ ಕೃತಿ ಅವರು ಈ ಹೊಸ ಸೀರಿಯಲ್ ನ ಪ್ರಮೋಷನ್ ಭಾಗವಾಗಿ ಈ ಸೀರಿಯಲ್ ನ ಆರಂಭದ ಎಪಿಸೋಡ್ ಗಳಲ್ಲಿ ಕಾಣಿಸಿಕೊಳ್ಳಲು ಪಡೆದಿರುವ ಸಂಭಾವನೆ ಇದೀಗ ದೊಡ್ಡ ಸುದ್ದಿಯಾಗಿದೆ. ಹೌದು ಕೃತಿ ಅವರು ಮುತ್ಯಮಂತಾ ಮುದ್ದು ಸೀರಿಯಲ್ ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡು ಸೀರಿಯಲ್ ನ ಶುಭಾರಂಭವನ್ನು ಮಾಡಲಿರುವ ತಮ್ಮ ಎಂಟ್ರಿ ಗೆ ಭಾರೀ ಮೊತ್ತದ ಸಂಭಾವನೆಯನ್ನೇ ಪಡೆದಿದ್ದಾರೆ ಎನ್ನಲಾಗಿದೆ.

ಉಪ್ಪೆನ ಸಿನಿಮಾ ಸೂಪರ್ ಡೂಪರ್ ಹಿಟ್ ಆದ ಮೇಲೆ ನಟಿ ಕೃತಿ ಶೆಟ್ಟಿ ತೆಲುಗು ಸೀಮೆಯಲ್ಲೊಂದು ಕ್ರೇಜ್ ಸೃಷ್ಟಿಸಿಯಾಗಿದೆ. ಸಾಲು ಸಾಲು ಸಿ‌ನಿಮಾಗಳ ಆಫರ್ ಕೂಡಾ‌ ಬರುತ್ತಿದೆ ಎನ್ನಲಾಗಿದೆ. ಹೀಗೆ ಮೊದಲ ಸಿನಿಮಾ ಮೂಲಕವೇ ಹೆಸರಾಗಿರುವ ಕೃತಿ ಅವರು ಈ ಸೀರಿಯಲ್ ನ ಪ್ರಮೋಷನ್ ಗಾಗಿ ಸೀರಿಯಲ್ ನಲ್ಲಿ ನಟಿಸಲು ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಹೌದು ಕೃತಿ ತಮ್ಮ ಸಿ‌ನಿಮಾದ ಸಂಭಾವನೆಗಿಂತಲೂ ಹೆಚ್ಚಿನ ಸಂಭಾವನೆ ಸೀರಿಯಲ್ ನ ಗೆಸ್ಟ್ ರೋಲ್ ಗಾಗಿ ಪಡೆದಿರುವುದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.

Leave a Comment