ಗಟ್ಟಿಮೇಳದಲ್ಲಿ ಹೊಸ ಟ್ವಿಸ್ಟ್: ಇದು ನಟ ರಕ್ಷ್ ಅವರ ರಿಯಲ್ ಲೈಫ್ ಜೊತೆ ಬೆರೆತಿದೆ, ಏನದು? ಇಲ್ಲಿದೆ ಉತ್ತರ

Entertainment Featured-Articles News
61 Views

ಕನ್ನಡ ಕಿರುತೆರೆಯ ಜನಪ್ರಿಯ ನಾಯಕ ನಟರಲ್ಲಿ ನಟ ರಕ್ಷ್ ಕೂಡಾ ಒಬ್ಬರು ಎನ್ನುವುದರಲ್ಲಿ ಎರಡು ಮಾತಿಲ್ಲ. ಕಿರುತೆರೆಯಲ್ಲಿ ಟಾಪ್ ಸೀರಿಯಲ್ ಆಗಿರುವ ಗಟ್ಟಿಮೇಳದಲ್ಲಿ ನಾಯಕ ವೇದಾಂತ್ ವಸಿಷ್ಠ ಪಾತ್ರದಲ್ಲಿ ಮಿಂಚುತ್ತಿರುವ ನಟ ರಕ್ಷ್ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಗಟ್ಟಿಮೇಳ ಈಗಾಗಲೇ ಕಥೆಯಲ್ಲಿನ ಹೊಸ ಟ್ವಿಸ್ಟ್ ಗಳ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಾ ಸಾಗಿದ್ದು, ನಾಯಕ ವೇದಾಂತ್ ವಸಿಷ್ಠ ಪಾತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ದೊರೆತಿದ್ದು, ಜನರಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ.

ಸೀರಿಯಲ್ ನಲ್ಲಿ ಹೊರ ತಿರುವೊಂದರಲ್ಲಿ ವೇದಾಂತ್ ವಸಿಷ್ಠನ ತಮ್ಮ ಧೃವ ನ ಸಾವಿನ ಹಿನ್ನೆಲೆಯಲ್ಲಿ ಅದೊಂದು ಕೊ ಲೆ ಎನ್ನುವ ಕಾರಣಕ್ಕೆ ನಾಯಕನ ಮತ್ತೊಬ್ಬ ಸಹೋದರನೇ ಅದಕ್ಕೆ ರೂವಾರಿ ಎಂದು ವಿಕ್ರಾಂತ್ ಅಥವಾ ವಿಕ್ಕಿಯನ್ನು ಅರೆಸ್ಟ್ ಮಾಡಲಾಗಿದ್ದು, ತಮ್ಮನಿಗೆ ಜಾಮೀನು ನೀಡಿ ಬಿಡಿಸಿಕೊಂಡು ಬರುವ ಪ್ರಯತ್ನದಲ್ಲಿ ಲಾಯರ್ ಗಳ ಜೊತೆ ನಡೆದ ವಾಗ್ವಾದದ ಕಾರಣದಿಂದ ಯಾವೊಬ್ಬ ಲಾಯರ್ ಕೂಡಾ ಈ ಕೇಸ್ ತೆಗೆದುಕೊಳ್ಳಲು ಮುಂದೆ ಬರುವುದಿಲ್ಲ.

ಇಂತಹುದೊಂದು ಸಂದಿಗ್ಧದಲ್ಲಿ ವೇದಾಂತ್ ಗೆಳೆಯ ಪಾರು ಸೀರಿಯಲ್ ನಾಯಕ ಆದಿತ್ಯ ವೇದಾಂತ್ ಗೆ ಆರ ಎಲ್ ಎಲ್ ಬಿ ಮಾಡಿರುವ ವಿಷಯವನ್ನು ನೆನಪಿಸುತ್ತಾನೆ. ಈಗ ವೇದಾಂತ್ ಸ್ವತಃ ತಾನೇ ವಕೀಲನಾಗಿ ತಮ್ಮನ ಕೇಸ್ ವಾದ ಮಾಡಲು ಕೋರ್ಟ್ ಗೆ ಅಡಿಯಿಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದು, ಕೋರ್ಟ್ ಸನ್ನಿವೇಶಗಳು ಕಿರುತೆರೆಯ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಾ, ಸೀರಿಯಲ್ ಇನ್ನಷ್ಟು ಆಸಕ್ತಿಕರವಾಗಿದೆ‌.

ಆದರೆ ನಿಮಗೆ ಇಲ್ಲೊಂದು ವಿಷಯವನ್ನು ತಿಳಿಸಲೇಬೇಕು. ಅದೇನೆಂದರೆ ನಟ ರಕ್ಷ್ ಅವರು ಈಗ ತೆರೆಯ ಮೇಲೆ ವಕೀಲನಾಗಿ ಕಾಣಿಸಿಕೊಂಡಿರುವುದು ಮಾತ್ರವೇ ಅಲ್ಲದೇ ಅವರು ನಿಜ ಜೀವನದಲ್ಲಿ ಕೂಡಾ ಒಬ್ಬ ಎಲ್ ಎಲ್ ಬಿ ಪದವೀಧರನಾಗಿದ್ದಾರೆ‌. ಹೌದು, ನಟ ರಕ್ಷ್ ಅವರು ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಅವರ ಎಲ್ ಎಲ್ ಬಿ ಪದವಿಯನ್ನು ಪಡೆದುಕೊಂಡಿದ್ದಾರೆ ಎನ್ನುವುದು ಅನೇಕರಿಗೆ ತಿಳಿದಿಲ್ಲ.

ನಟನೆಯ ಕಡೆಗೆ ಅವರು ಬಂದ ಕಾರಣ, ನಟನೆಯಲ್ಲೇ ವೃತ್ತಿಯನ್ನು ಮುಂದುವರೆಸಿ, ಯಶಸ್ಸನ್ನು ಪಡೆದುಕೊಂಡಿರುವ ನಟ ರಕ್ಷ್ ಅವರು ವಕೀಲನಾಗಿ ಪ್ರಾಕ್ಟೀಸ್ ನೀಡುವುದು ಸಾಧ್ಯವಾಗಿರಲಿಲ್ಲ. ಆದರೆ ಈಗ ಗಟ್ಟಿಮೇಳದಲ್ಲಿ ಅವರ ರೀಲ್ ಲೈಫ್ ಪಾತ್ರವು ರಿಯಲ್ ಲೈಫ್ ನ ಶೈಕ್ಷಣಿಕ ಅರ್ಹತೆಯೊಂದಿಗೆ ಕನೆಕ್ಟ್ ಆಗಿದೆ ಎನ್ನುವುದು ಮಾತ್ರ ನಿಜ. ಸೀರಿಯಲ್ ನಲ್ಲಿನ ಟ್ವಿಸ್ಟ್ ಅವರ ನಿಜ ಜೀವನದ ಟ್ವಿಸ್ಟ್ ಎನ್ನುವುದು ಅಚ್ಚರಿ ಮೂಡಿಸಿದೆ.

Leave a Reply

Your email address will not be published. Required fields are marked *