ಗಂಡ ಸತ್ತ ಮೇಲೆ ಪ್ರತಿ ಮಹಿಳೆ ಹೋರಾಡಲೇ ಬೇಕಾಗಿದೆ: ಶೋ ನಲ್ಲಿ ಆವೇಶದಿಂದ ಮಾತನಾಡಿದ ಶಿಲ್ಪಾ ಶೆಟ್ಟಿ
ಅ ಶ್ಲೀ ಲ ಸಿನಿಮಾಗಳ ನಿರ್ಮಾಣ ಹಾಗೂ ಹಂಚಿಕೆ ವಿಚಾರದಲ್ಲಿ ಉದ್ಯಮಿ ರಾಜ್ ಕುಂದ್ರಾ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜಾಮೀನು ಪಡೆಯುವ ಪ್ರಯತ್ನ ನಡೆಯುತ್ತಿದೆ. ಇನ್ನೊಂದು ಕಡೆ ಈ ಪ್ರಕರಣದ ನಂತರ ರಾಜ್ ಕುಂದ್ರಾ ಅವರ ಪತ್ನಿ ಬಾಲಿವುಡ್ ಸ್ಟಾರ್ ನಟಿ ಎನಿಸಿಕೊಂಡಿರುವ ಶಿಲ್ಪಾ ಶೆಟ್ಟಿ ಅವರು ಸಹಜವಾಗಿಯೇ ಬಹಳ ವಿಚಲಿತರಾಗಿದ್ದಾರೆ. ಅವರು ಅಷ್ಟಾಗಿ ಮಾಧ್ಯಮಗಳ ಮುಂದೆ ಕಾಣಿಸುತ್ತಿಲ್ಲ. ಅಲ್ಲದೇ ಕಳೆದ ಸುಮಾರು ದಿನಗಳಿಂದ ಅವರು ತಾವು ಜಡ್ಜ್ ಆಗಿ ಭಾಗವಹಿಸುತ್ತಿದ್ದ ಸೂಪರ್ ಡ್ಯಾನ್ಸರ್ ಶೋನಿಂದ ಕೂಡಾ ಅಂತರವನ್ನು ಕಾಯ್ದುಕೊಂಡಿದ್ದರು. ಇದೀಗ ಶಿಲ್ಪಾ ಶೆಟ್ಟಿ ಅವರು ಮತ್ತೆ ತಮ್ಮ ಕೆಲಸದ ಕಡೆಗೆ ಗಮನ ನೀಡಿದ್ದಾರೆ. ಸೂಪರ್ ಡಾನ್ಸರ್ ಶೋ ಗೆ ಶಿಲ್ಪಾ ಮರಳಿದ್ದು, ವಾಹಿನಿಯು ಪ್ರೋಮೊ ಒಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಶಿಲ್ಪಾ ಅವರು ಬಹಳ ಸ್ಪೂರ್ತಿಯ ಮಾತುಗಳನ್ನು ಆಡಿರುವುದನ್ನು ನಾವು ಗಮನಿಸಬಹುದಾಗಿದೆ.
ಸೂಪರ್ ಡ್ಯಾನ್ಸರ್ ರಿಯಾಲಿಟಿ ಶೋನಲ್ಲಿ ಬಾಲಕಿಯೊಬ್ಬಳು ಭಾರತದ ಹೆಮ್ಮೆಯ ರಾಣಿಯಾದ ಝಾನ್ಸಿರಾಣಿ ಲಕ್ಷ್ಮೀಬಾಯಿ ಅವರ ಕಥೆಯನ್ನು ಆಧರಿಸಿದ ನೃತ್ಯ ರೂಪಕವನ್ನು ಮಾಡಿ ತೋರಿಸಿದ್ದಾರೆ. ನೃತ್ಯ ಪ್ರದರ್ಶನವನ್ನು ನೋಡಿದ ನಂತರ ಶಿಲ್ಪಾ ಶೆಟ್ಟಿ ಅವರು ಆವೇಶಕ್ಕೆ, ಒಳಗಾದಂತೆ, ಭಾವುಕರಾದಂತೆ ಕಂಡುಬಂದಿದೆ. ಡಾನ್ಸ್ ಮುಗಿದ ನಂತರ ಅವರು ಮಾತನಾಡುತ್ತಾ,, ಪ್ರತಿಬಾರಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬಗ್ಗೆ ಕೇಳಿದಾಗ ನನಗೆ ಸಮಾಜದ ಮುಖ ಕಾಣಿಸುತ್ತದೆ. ನಮ್ಮ ಸಮಾಜದಲ್ಲಿ ಇಂದಿಗೂ ಗಂಡ ಸತ್ತ ನಂತರ ಮಹಿಳೆಯು ಹೋರಾಟವನ್ನು ಮಾಡಬೇಕಾಗಿದೆ. ಹೆಣ್ಣು ತನ್ನ ಅಸ್ತಿತ್ವಕ್ಕಾಗಿ, ತನ್ನ ಮಕ್ಕಳಿಗಾಗಿ ಹೋರಾಡಬೇಕಾದಂತಹ ಪರಿಸ್ಥಿತಿ ಇದೆ.
ರಾಣಿ ಲಕ್ಷ್ಮೀಬಾಯಿಯ ಕಥೆ ಎಂತಹದು ಎಂದರೆ, ಮಹಿಳೆಯರ ಹೋರಾಟದ ಶಕ್ತಿಯಾಗಿದ್ದು ಅವರು ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು. ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವ ಕಥೆಯದು, ಝಾನ್ಸಿಯ ರಾಣಿ ನಿಜವಾಗಿಯೂ ಒಬ್ಬ ಸೂಪರ್ ವುಮೆನ್, ಇದು ಇತಿಹಾಸ, ಇದೇ ವಾಸ್ತವ. ಇದನ್ನು ಕೇಳಿದಾಗಲೆಲ್ಲಾ ನನಗೆ ಹೆಮ್ಮೆ ಎನಿಸುತ್ತದೆ. ಇಂತಹುದೊಂದು ದೇಶದಿಂದ ಬಂದಿರುವ ಮಹಿಳೆ ನಾನೆಂದು ಅಭಿಮಾನ ಮೂಡುತ್ತದೆ. ಪರಿಸ್ಥಿತಿ ಯಾವುದೇ ಆಗಿರಲಿ ನಮ್ಮ ಮಹಿಳೆಯರಿಗೆ ಹೋರಾಡುವ ಶಕ್ತಿಯಿದೆ. ತಮ್ಮ ಹಕ್ಕಿಗಾಗಿ ಹೋರಾಡುವ ಪ್ರತಿಯೊಬ್ಬ ಮಹಿಳೆಗೂ ನಾನು ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ ಎಂದು ಹೇಳಿದ್ದಾರೆ.