ಗಂಡ ಸತ್ತ ನಂತರ ಫಸ್ಟ್ ಟೈಂ ಹೀಗೆ.. ನಟಿ ಮೀನಾ ಮಾಡಿದ ಕೆಲಕಸಕ್ಕೆ ಶಾಕ್ ಆದ ಅಭಿಮಾನಿಗಳು

Entertainment Featured-Articles Movies News
57 Views

ದಕ್ಷಿಣ ಸಿನಿಮಾ ರಂಗದಲ್ಲಿ ಬಹಳಷ್ಟು ಜನ ಹಿರೋಯಿನ್ ಗಳಿದ್ದರೂ ಸಹಾ ನಟಿ ಮೀನಾ ಮಾತ್ರ ತಮ್ಮದೇ ಆದ ಹಾದಿಯಲ್ಲಿ ಸಾಗುತ್ತಿರುವ ನಟಿಯಾಗಿದ್ದಾರೆ. ವರ್ಷಗಳ ಹಿಂದೆ ತನ್ನ ಅಂದ ಮತ್ತು ಅಭಿನಯದ ಮೂಲಕ ಸಿನಿಮಾಗಳಲ್ಲಿ ಮಿಂಚುತ್ತಿದ್ದ ನಟಿ ಇಂದು ಸೀನಿಯರ್ ನಾಯಕಿಯಾಗಿ ತಮಗೆ ಇಷ್ಟವಾದ ಪಾತ್ರಗಳನ್ನು ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ನಟಿ ಮೀನಾ ವೃತ್ತಿ ರಂಗದಲ್ಲಿ ಸಾಕಷ್ಟು ಬ್ಯುಸಿಯಾಗಿರುವಾಗಲೇ, ಸ್ಟಾರ್ ನಟಿಯಾಗಿ ಮಿಂಚುವಾಗಲೇ ವೈವಾಹಿಕ ಜೀವನಕ್ಕೆ ಅಡಿಯಿಟ್ಟರು. ಆದರೆ ಇತ್ತೀಚಿಗೆ ನಟಿ ಮೀನಾಗೆ ವಿಧಿಯಾಡಿದ ಆಟದಿಂದಾಗಿ ದೊಡ್ಡ ಆ ಘಾ ತವೇ ಎದುರಾಗಿದ್ದು, ನಟಿ ತಮ್ಮ ಪತಿಯನ್ನು ಕಳೆದುಕೊಂಡಿದ್ದಾರೆ.

ನಟಿ ಮೀನಾ ಅವರ ಪತಿಗೆ ಮೊದಲು ಕೊರೊನಾ ಸೋಕಿ ಅನಂತರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಆದರೆ ಮತ್ತೆ ಶ್ವಾಸಕೋಶದ ಸಮಸ್ಯೆಯಿಂದಾಗಿ ಅವರ ಆರೋಗ್ಯ ಹದಗೆಟ್ಟು ನಿಧನರಾದರು. ಪತಿಯನ್ನು ಕಳೆದುಕೊಂಡ ನಂತರ ಮೀನಾ ಅವರ ಕುಟುಂಬದಲ್ಲಿ ದುಃಖದ ಛಾಯೆ ತುಂಬಿತ್ತು. ನಟಿ ಮೀನಾ ಪರಿಸ್ಥಿತಿ ನೋಡಿ ಬಹಳಷ್ಟು ಜನರು ಮರುಕ ಪಟ್ಟಿದ್ದರು. ಯಾರು ಎಷ್ಟೇ ಸಮಾಧಾನವನ್ನು ಮಾಡಿದರೂ ಸಹಾ ಗಂಡನನ್ನು ಕಳೆದುಕೊಂಡ ದುಃಖ ಮೀನಾ ಅವರನ್ನು ಬಹುವಾಗಿ ಕಾಡಿತ್ತು. ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು ಎಂದು ಕೊಂಡರು ಜನ.

ಮೀನಾ ಅವರ ಕುಟುಂಬಕ್ಕೆ ಅವರ ಪತಿಯನ್ನು ಕಳೆದುಕೊಂಡಿದ್ದು ಒಂದು ತುಂಬಲಾರದ ನಷ್ವವಾಗಿ ಉಳಿದು ಹೋಗಿದೆ. ಇಂತಹ ಸಂದರ್ಭಗಳಲ್ಲೇ ನಮಗೆ ನಮ್ಮ‌ ಸ್ನೇಹಿತರು ಜೊತೆಯಲ್ಲಿ ನಿಲ್ಲಬೇಕು ಹಾಗೂ ನೈತಿಕ ಬೆಂಬಲವನ್ನು ನೀಡಿ, ನಾವಿದ್ದೇವೆ ಎನ್ನುವ ಭರವಸೆಯನ್ನು ನೀಡಬೇಕು. ಇದೇ ಹಿನ್ನೆಲೆಯಲ್ಲಿ ಇತ್ತೀಚಿಗೆ ಮೀನಾ ಕುಟುಂಬಕ್ಕೆ ಸಾಂತ್ವನ ನೀಡುವ ಸಲುವಾಗಿ ಹಿರಿಯ ನಟಿಯರಾದ ರಂಬಾ, ಸಂಘವಿ, ಸಂಗೀತಾ ತಮ್ಮ‌ ಕುಟುಂಬ ಸಮೇತರಾಗಿ ಮೀನಾ ಅವರ ಮನೆಗೆ ಭೇಟಿ ನೀಡಿ ನಟಿಗೆ ಸಾಂತ್ವನವನ್ನು ಹೇಳಿದ್ದಾರೆ. ಒಂದು ಕಾಲದಲ್ಲಿ ಹೀರೋಯಿನ್ ಗಳಾಗಿ ಟಫ್ ಸ್ಪರ್ಧಿಗಳಾಗಿದ್ದ ಈ ನಟಿಯರು ಉತ್ತಮ ಫ್ರೆಂಡ್ಸ್ ಸಹಾ ಹೌದು.

ಗೆಳತಿಯರು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಟಿ ಮೀನಾ ಕೆಲವೊಂದು ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಅವುಗಳನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಗಂಡನ ಅಗಲಿಕೆಯ ನಂತರ ಮೀನಾ ಶೇರ್ ಮಾಡಿದ ಮೊದಲ ಪೋಸ್ಟ್ ಇದಾಗಿದೆ. ಫೋಟೋ ನೋಡಿದ ಅಭಿಮಾನಿಗಳು ಮೀನಾ ಮುಖದಲ್ಲಿ ನಗು ಯಾವಾಗಲೂ ಹಾಗೆ ಇರಲೆಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಆದರೆ ಇದೇ ವೇಳೆ ಕೆಲವರು ಗಂಡ ಸತ್ತು ಹೆಚ್ಚು ದಿನಗಳು ಸಹಾ ಕಳೆದಿಲ್ಲ ಆಗಲೇ ಶೂಟಿಂಗ್ ಬೇಕಿತ್ತಾ? ಎಂದು ಟ್ರೋಲ್ ಸಹಾ ಮಾಡಿದ್ದಾರೆ.

Leave a Reply

Your email address will not be published. Required fields are marked *