ಗಂಡ ಸತ್ತು ವರ್ಷಾನೂ ಆಗಿಲ್ಲ, ಆಗ್ಲೇ ಇನ್ನೊಬ್ಬನಾ!! ಮಂದಿರ ಬೇಡಿ ಫೋಟೋ ನೋಡಿ ನೆಟ್ಟಿಗರು ಗರಂ

Written by Soma Shekar

Published on:

---Join Our Channel---

ಸೆಲೆಬ್ರಿಟಿಗಳ ಜೀವನದ ಪ್ರತಿಯೊಂದು ಘಟನೆಯು ಸಹಾ ದೊಡ್ಡ ಸದ್ದು ಹಾಗೂ ಸುದ್ದಿಯನ್ನು ಮಾಡಿ ಬಿಡುತ್ತದೆ. ಆದ್ದರಿಂದಲೇ ಅವರು ಬಹಳ ಎಚ್ಚರಿಕೆಯನ್ನು ಹಾಗೂ ಜಾಗರೂಕತೆಯನ್ನು ವಹಿಸುವುದು ಅಗತ್ಯವಾಗಿರುತ್ತದೆ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳ ವಿಷಯ ಬಂದಾಗ ಅವರ ಬಿಂದಾಸ್ ಬದುಕು ಕಂಡ ಜನರು ಸಹಜವಾಗಿಯೇ ಅವರ ಬ್ರೇಕಪ್ ಗಳು, ಬೋಲ್ಡ್ ನಡವಳಿಕೆಯನ್ನು ಟೀಕೆ ಮಾಡುತ್ತಾರೆ. ಆದರೆ ಅಭಿಮಾನಿಗಳು ಮಾತ್ರ ತಮ್ಮ ಅಭಿಮಾನ ಸೆಲೆಬ್ರಿಟಿಗಳು ಏನೇ ಮಾಡಿದರೂ ಮೆಚ್ಚುಗೆ ಸಹಾ ನೀಡುವುದು ಸಾಮಾನ್ಯವೇ ಆಗಿರುತ್ತದೆ.

ಬಾಲಿವುಡ್ ನ ಬೋಲ್ಡ್ ನಟಿ ಹಾಗೂ ನಿರೂಪಕಿ ಎನಿಸಿಕೊಂಡಿರುವ ಮಂದಿರಾ ಬೇಡಿ ತಮ್ಮ ಬಿಂದಾಸ್ ಎನಿಸುವ ಲೈಫ್ ಸ್ಟೈಲ್ ನಿಂದಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಮಂದಿರಾ ಬೇಡಿ, ಸೀರಿಯಲ್ ಲೋಕದಿಂದ ಬಾಲಿವುಡ್ ಗೆ ಎಂಟ್ರಿ ನೀಡಿದ್ದು ಮಾತ್ರವೇ ಅಲ್ಲದೇ ಅನಂತರ ನಿರೂಪಕಿಯಾಗಿಯೂ ಹೆಸರನ್ನು ಮಾಡಿದ್ದಾರೆ. ಇದೀಗ ನಟಿಯು ತಮ್ಮ ಗೆಳೆಯನ ಜೊತೆ ಕಾಣಿಸಿಕೊಂಡು, ಫೋಟೋ ಒಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.

ಥೈಲ್ಯಾಂಡ್ ನಲ್ಲಿ ರಜೆಯನ್ನು ಎಂಜಾಯ್ ಮಾಡುತ್ತಿರುವ ಮಂದಿರಾ ಬೇಡಿ ತಮ್ಮ ಗೆಳೆಯನ ಜೊತೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಫೋಟೋ ಶೇರ್ ಮಾಡಿಕೊಂಡ ಮಂದಿರಾ ಬೇಡಿಯವರು ಅದರೊಂದಿಗೆ ಕೆಲವು ಸಾಲುಗಳನ್ನು ಸಹಾ ಬರೆದುಕೊಂಡು, ಫೋಟೋದಲ್ಲಿರುವ ತಮ್ಮ ಗೆಳೆಯ ತನಗೆ ಎಷ್ಟು ಮುಖ್ಯ ಎನ್ನುವುದನ್ನು ಅವರು ತಮ್ಮ ಸಾಲುಗಳಲ್ಲಿ ಹೇಳಿದ್ದಾರೆ.

ಮಂದಿರಾ ತಮ್ಮ ಪೋಸ್ಟ್ ನಲ್ಲಿ, ಹ್ಯಾಪಿ ಬರ್ತಡೇ ಆದಿ, ನೀನು ನನಗೆಷ್ಟು ಮುಖ್ಯ? ನಾವಿಬ್ಬರು ಎಷ್ಟು ಆತ್ಮೀಯರು? ನಮ್ಮಿಬ್ಬರ ಮಧ್ಯೆ ಏನಿದೆ ? ನಾನು ನಿನ್ನನ್ನು ಎಷ್ಟು ನಂಬುತ್ತೇನೆ ಎನ್ನುವುದನ್ನು ಈ ಫೋಟೋ ನೋಡಿದರೆ ಅದೇ ಎಲ್ಲರ ಉತ್ತರಗಳನ್ನು ಕೊಡುತ್ತದೆ. 17 ನೇ ವಯಸ್ಸಿನಿಂದಲೇ ನೀನು ನನಗೆ ಆತ್ಮೀಯ ಎಂದು ಬರೆದುಕೊಂಡು, ಫೋಟೋದಲ್ಲಿ ಇರುವ ವ್ಯಕ್ತಿಯ ಜೊತೆಗಿನ ತನ್ನ ಸ್ನೇಹ ಎಂತದ್ದು ಎಂದು ವಿವರಿಸಿದ್ದಾರೆ.

ಮಂದಿರಾ ಫೋಟೋದಲ್ಲಿ ತಮ್ಮ ಗೆಳೆಯನ ಮೂಗಿನೊಳಗೆ ಕೈ ಇಟ್ಟಿರುವುದನ್ನು ನೋಡಿದ ನೆಟ್ಟಿಗರು, ಫೋಟೋ ತುಂಬಾ ಕೆಟ್ಟದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ನಿಮ್ಮ ಪತಿ ತೀರಿಕೊಂಡು ಇನ್ನೂ ಒಂದು ವರ್ಷ ಸಹಾ ಆಗಿಲ್ಲ, ಆಗಲೇ ಟ್ರಿಪ್ ಮಾಡುತ್ತಿದ್ದೀರಾ, ಅದು ಇನ್ನೊಬ್ಬರ ಜೊತೆ ಎಂದು ಸಹಾ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ನೆಗೆಟಿವ್ ಕಾಮೆಂಟ್ ಗಳು ಹರಿದು ಬಂದ ಕೂಡಲೇ ಮಂದಿರಾ ಅವರು ತಮ್ಮ ಕಾಮೆಂಟ್ ಸೆಕ್ಷನ್ ನ್ ಕ್ಲೋಸ್ ಮಾಡಿದ್ದಾರೆ.

Leave a Comment