ಗಂಡ ಬೇಡ ಎಂದು ಗೆಳೆಯನ ಜೊತೆ ಹೋದ ಟಿಕ್ ಟಾಕ್ ಬೆಡಗಿಯ ಬದುಕೇ ಮುಗಿದು ಹೋಯ್ತು

Entertainment Featured-Articles News

ಸಾಮಾಜಿಕ ಜಾಲತಾಣಗಳ ಪ್ರಭಾವ, ಪರಿಣಾಮ, ವ್ಯಾಪ್ತಿ ಇಂದು ವಿಶ್ವದ ಉದ್ದಗಲಕ್ಕೂ ಹರಡಿದೆ. ಇಂದು ಜನಪ್ರಿಯತೆ ಪಡೆಯಬೇಕೆಂದರೆ ಯಾರದೋ ಕೈ, ಕಾಲು ಹಿಡಿಯುವ ಅಗತ್ಯ ಖಂಡಿತ ಇಲ್ಲ ಎನ್ನುವಷ್ಟು ಸಾಮಾಜಿಕ ಜಾಲತಾಣಗಳು ಜನರಿಗೆ ವಿಫುಲವಾದ ಅವಕಾಶಗಳನ್ನು ನೀಡಿದೆ. ಆದ್ದರಿಂದಲೇ ಅದೆಷ್ಟೋ ಮಂದಿ ಇವುಗಳನ್ನು ಸಮರ್ಪಕವಾಗಿ ಸುದಪಯೋಗ ಮಾಡಿಕೊಂಡು ಸೆಲೆಬ್ರಿಟಿಗಳ ಮಟ್ಟಕ್ಕೆ ಜನಪ್ರಿಯತೆಯನ್ನು ಪಡೆದುಕೊಂಡು ಸದ್ದು ಮಾಡಿದ್ದಾರೆ ಎನ್ನುವುದು ನಮಗೆ ತಿಳಿದಿದೆ.

ಸಾಮಾಜಿಕ ಜಾಲತಾಣಗಳಿಂದಲೇ ಸ್ಟಾರ್ ಗಳಾದವರಲ್ಲಿ ಕೆಲವರು ಒಂದು ಉತ್ತಮ ಜೀವನವನ್ನು ರೂಪಿಸಿಕೊಂಡರೆ, ಇನ್ನೂ ಕೆಲವರು ಜೀವನದ ಹಾದಿಯಲ್ಲಿ ತಪ್ಪು ಹೆಜ್ಜೆಗಳನ್ನು ಹಾಕುವ ಮೂಲಕ ತಮ್ಮ ಸಂಪೂರ್ಣ ಜೀವನವನ್ನೇ ಹಾಳು ಮಾಡಿಕೊಂಡು ಬಿಡುತ್ತಾರೆ. ಉಜ್ವಲ ಭವಿಷ್ಯಕ್ಕೆ ತಾವೇ ಕೊಳ್ಳಿಯನ್ನು ಇಟ್ಟುಕೊಂಡು, ಜೀವನವನ್ನು ಕೊನೆಮಾಡಿ‌ ಬಿಡುತ್ತಾರೆ. ಸಾಮಾಜಿಕ ಜಾಲತಾಣಗಳು ತಂದು ಕೊಟ್ಟ ಜನಪ್ರಿಯತೆಯನ್ನು ಅವರು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಎಡವಿ ಬಿಡುತ್ತಾರೆ.

ಈಗ ಅಂತಹುದೇ ಒಂದು ಘಟನೆ ನಡೆದಿದೆ. ಕೇರಳದ ಎರ್ನಾಕುಲಂ ಮೂಲದ ಯೂಟ್ಯೂಬರ್ ಹಾಗೂ ಟಿಕ್ ಟಾಕ್ ಮೂಲಕ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದ, ಮಾಡೆಲ್ ನೇಹಾ ತಮ್ಮ ಜೀವನಕ್ಕೆ ಕೊನೆ ಹಾಡಿದ್ದಾರೆ. ಈಕೆ ಆ ತ್ಮ ಹ ತ್ಯೆ ಮಾಡಿಕೊಂಡು ಇಹಲೋಕವನ್ನು ತ್ಯಜಿಸಿದ್ದಾರೆ. ನೇಹಾ ವಾಸವಿದ್ದ ಫ್ಲಾಟ್ ನಲ್ಲಿ ಆಕೆಯ ದೇಹವು ನೇ ಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನೇಹಾ ಸಾವಿನ ಕಾರಣ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದ್ದು, ತನಿಖೆ ಆರಂಭವಾಗಿದೆ ಎನ್ನಲಾಗಿದೆ.

ಪೋಲಿಸರು ನೇಹಾ ಜೊತೆಗೆ ಫ್ಲಾಟ್ ನಲ್ಲಿದ್ದ ಸಿದ್ಧಾರ್ಥ್ ಎನ್ನುವ ಹೆಸರಿನ ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ನೇಹಾ ತಮ್ಮ ಪತಿಯಿಂದ ದೂರವಾದ ಮೇಲೆ ಈಕೆ ಒಂದು ಫ್ಲ್ಯಾಟ್ ನಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು. ಈಕೆಯ ಕೈ ಬೆರಳಿನಲ್ಲಿ ಸಿದ್ಧಾರ್ಥ್ ಹೆಸರಿನ ಉಂಗುರ ಪತ್ತೆಯಾಗಿದೆ. ನೇಹಾ ಸಾ ವಿನ ಹಿಂದೆ ಡ್ರ ಗ್ಸ್ ಮಾ ಫಿ ಯಾ ಕೈವಾಡ ಇರಬಹುದು ಎನ್ನುವ ಅನುಮಾನಗಳು ಹೆಚ್ಚಾಗಿವೆ.

Leave a Reply

Your email address will not be published.