ಬಾಲಿವುಡ್ ಕಿರುತೆರೆಯಲ್ಲಿ ಹಾಸ್ಯದ ಹೊನಲನ್ನು ಹರಿಸುವ , ಸ್ಟ್ಯಾಂಡಪ್ ಕಮಿಡಿಯನ್ ಆಗಿ ದೊಡ್ಡ ಹೆಸರನ್ನು ಮಾಡಿರುವ ಕಲಾವಿದೆ ಭಾರತಿ ಸಿಂಗ್, ಹಾಸ್ಯ ಕಲಾವಿದೆಯಾಗಿ, ಜನಪ್ರಿಯ ರಿಯಾಲಿಟಿ ಶೋಗಳ ನಿರೂಪಕಿಯಾಗಿ, ಸೆಲೆಬ್ರೇಟಿ ಗೇಮ್ ಶೋ ನ ನಿರ್ಮಾಪಕಿಯಾಗಿಯೂ ದೊಡ್ಡ ಮಟ್ಟದಲ್ಲಿ ಹೆಸರನ್ನು ಪಡೆದುಕೊಂಡಿದ್ದಾರೆ. ಇದೀಗ ಭಾರತಿ ಸಿಂಗ್ ಜೀವನದಲ್ಲಿ ಹೊಸ ನಗೆಯೊಂದು ಅವರ ಜೊತೆಯಾಗಿದೆ. ಹೌದು ಭಾರತಿ ಸಿಂಗ್ ಅವರು ಗಂಡು ಮಗುವಿನ ತಾಯಿಯಾಗಿದ್ದಾರೆ. ಭಾರತೀ ಸಿಂಗ್ ತಾಯಿಯಾದ ವಿಷಯ ಕೇಳಿ ಅವರ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಭಾರತೀ ಗಂಡು ಮಗುವಿಗೆ ಜನ್ಮ ನೀಡಿದ ವಿಚಾರವನ್ನು ಭಾರತೀಯವರ ಪತಿ ಬರಹಗಾರ ಮತ್ತು ನಿರೂಪಕ ಹರ್ಷ್ ಲಿಂಬಾಚಿಯಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ತಿಳಿಸಿದ್ದಾರೆ. ಹರ್ಷ್ ಲಿಂಬಚಿಯಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ , ‘ಇಟ್ಸ್ ಎ ಬಾಯ್’ ಎಂದು ಕರೆದುಕೊಂಡು ತಾನು ಮತ್ತು ಭಾರತಿ ಗಂಡು ಮಗುವಿನ ತಂದೆ ತಾಯಿಯಾದ ಸಂತೋಷದ ವಿಚಾರವನ್ನು ಹಂಚಿಕೊಂಡು, ಖುಷಿಯನ್ನು ಸಂಭ್ರಮಿಸಿದ್ದಾರೆ.
ಭಾರತಿ ಸಿಂಗ್ ಗಂಡು ಮಗುವಿನ ತಾಯಿಯಾದ ಸುದ್ದಿ ಕೇಳುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಹಾಗೂ ಕಿರುತೆರೆಯ ಸೆಲೆಬ್ರಿಟಿಗಳು ಭಾರತೀ ಹಾಗೂ ಹರ್ಷ್ ದಂಪತಿಗೆ ಶುಭಾಶಯವನ್ನು ಕೋರುತ್ತಿದ್ದಾರೆ. ಅಭಿಮಾನಿಗಳು ಸಹಾ ಶುಭಾಶಯವನ್ನು ಕೋರುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳು ದೊಡ್ಡ ಮಟ್ಟದಲ್ಲಿ ಹರಿದು ಬರುತ್ತಿದೆ. ಭಾರತೀ ಹಾಗೂ ಹರ್ಷ್ ಮಗುವಿಗಾಗಿ ಸಾಕಷ್ಟು ಸಿದ್ಧತೆಗಳನ್ನು ನಡೆಸಿದ್ದರು. ಭಾರತೀ ವೈದ್ಯರ ಸಲಹೆಯಂತೆ ತಮ್ಮ ದೇಹದ ತೂಕವನ್ನು ಸಹಾ ತಗ್ಗಸಿಕೊಂಡಿದ್ದರು.