ಗಂಡಸಾಗಿದ್ರೆ, ನರ ಇದ್ರೆ ಡ್ರ ಗ್ಸ್ ನಿರ್ಮೂಲನೆ ಮಾಡಿ: ಪ್ರಶಾಂತ್ ಸಂಬರ್ಗಿಗೆ ಓಪನ್ ಚಾಲೆಂಜ್ ಹಾಕಿದ ಯುವ ನಿರ್ದೇಶಕ

Entertainment Featured-Articles News
47 Views

ಕಳೆದ ಎರಡು ದಿನಗಳಿಂದ ಸಾಕಷ್ಟು ಸುದ್ದಿ ಸದ್ದು ಮಾಡುತ್ತಿರುವ ಸಾಂಡಲ್ವುಡ್ ನ ಡ್ರ ಗ್ಸ್ ವಿಚಾರದಲ್ಲಿ ಮಾಧ್ಯಮಗಳ ಪ್ರಮುಖ ಆಕರ್ಷಣೆಯಾಗಿದ್ದಾರೆ ಸಾಮಾಜಿಕ ಕಾರ್ಯಕರ್ತ, ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಪರ್ಗಿ. ಎರಡು ದಿನಗಳ ಹಿಂದೆ ಡ್ರ ಗ್ಸ್ ವಿಚಾರದಲ್ಲಿ ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಅವರ ಹೆಸರು ಕೇಳಿ ಬಂದ ಕೂಡಲೇ ಪ್ರಶಾಂತ್ ಸಂಬರ್ಗಿ ಒಂದು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ, ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ಈ ವೇಳೆಯಲ್ಲಿ ಅವರು ನವೆಂಬರ್ ಒಂದರಂದು ಆಡಿಯೋ ಬಿಡುಗಡೆ ಮಾಡುತ್ತೇನೆ ವಿಡಿಯೋ ಬಿಡುಗಡೆ ಮಾಡುತ್ತೇನೆ ಅನ್ನುವಂತಹ ಮಾತುಗಳನ್ನು ಸಹ ಹೇಳಿಕೊಂಡಿದ್ದರು.

ಅಲ್ಲದೇ ಅನು ಶ್ರೀಯವರ ಬಳಿ 12 ಕೋಟಿ ಮತ್ತು ನಾಲ್ಕು ಕೋಟಿ ರೂಪಾಯಿಗಳ ಮನೆಗಳಿವೆ ಬಗ್ಗೆ ಕೂಡಾ ಮಾತನಾಡಿದರು. ಇದೀಗ ಪ್ರಶಾಂತ್ ಸಂಬರ್ಗಿ ಆಡಿರುವ ಮಾತುಗಳಿಗೆ ಸ್ಯಾಂಡಲ್ವುಡ್ ನ ಯುವ ನಿರ್ದೇಶಕರೊಬ್ಬರು ಪ್ರತಿಕ್ರಿಯೆ ನೀಡುತ್ತಾ, ಅವರಿಗೆ ನೇರ ಸವಾಲನ್ನು ಹಾಕಿದ್ದಾರೆ. ಹೌದು ಸ್ಯಾಂಡಲ್ವುಡ್ನ ಯುವ ನಿರ್ದೇಶಕ ಕೀರ್ತನ್ ಶೆಟ್ಟಿ ಅವರು ಪ್ರಶಾಂತ್ ಸಂಪರ್ಗಿಗೆ ನೇರವಾಗಿ ಸವಾಲನ್ನು ಎಸೆದಿದ್ದಾರೆ.

ಪ್ರಶಾಂತ್ ಸಂಬರ್ಗಿಯವರೇ ನಿಮಗೆ ಓಪನ್ ಚಾಲೆಂಜ್ ನೀವು‌ ಗಂಡಸಾಗಿದ್ರೇ, ನಿಮ್ಮಲ್ಲಿ ನರ ಇದ್ದರೆ ಕರ್ನಾಟಕದಲ್ಲಿ ಡ್ರ ಗ್ಸ್ ನಿರ್ಮೂಲನೆ ಮಾಡಿ. ಅದು ಬಿಟ್ಟು ನಿಮ್ಮ ಪಬ್ಲಿಸಿಟಿ ಹುಚ್ಚಿಗೆ ಕಂಡ ಕಂಡ ಹೆಣ್ಣು ಮಕ್ಕಳ ಬಾಳಲ್ಲಿ ಆಟ ಆಡಬೇಡ್ರಿ. ಒಂದುವರೆ ವರ್ಷದಿಂದ ಡ್ರ ಗ್ಸ್ ವಿಷಯ ಮಾತಾಡಿ ನೀವ್ ಏನ್ ಸಾಕ್ಷಿ ಕೊಟ್ಟಿದ್ದೀರಾ ಹೇಳಿ… ನೀವ್ ಹೇಳ್ತಿರಲ್ಲ ಅನುಶ್ರೀಗೆ 12 ಕೋಟಿ ಆಸ್ತಿ ಚಿತ್ರರಂಗ ಬಣ್ಣದ ಲೋಕದಿಂದ ಸಂಪಾದನೆ ಮಾಡೊಕ್ ಆಗಲ್ಲ ಹಂಗೆ ಹಿಂಗೆ ಅಂತಿರಲ್ಲ…

ಅನುಶ್ರೀ ಒಬ್ಬರನೇ ಹಾಗಾದ್ರೇ… ನಟರಿಗಿಂತ ಎಷ್ಟು ಮೂರು ನಾಲ್ಕು ಸಿನಿಮಾ ಮಾಡಿದ ನಟಿಯರು BMW Benz Audi ಕಾರಿನಲ್ಲಿ ಓಡಾಡುತ್ತಾರೆ. ಸ್ವಂತ Apartment, ಸ್ವಂತ Site, ಸ್ವಂತ ಮನೆ ಎಲ್ಲಾ ಹೊಂದಿದ್ದಾರೆ.‌ ಹಾಗದ್ರೇ ನೀವು ಅವರನ್ನು ಕೇಳಬಹುದಲ್ವಾ…ಅನುಶ್ರೀ ಆಗಲಿ ,ಸಂಜನಾ ಗಲ್ರಾನಿ ಆಗಲಿ ರಾಗಿಣಿ ದ್ವಿವೇದಿ ಯಾರೇ ಆಗಲಿ ಅವರ ಪರವಾಗಿ ನಾನು ಮಾತನಾಡುತ್ತಾ ಇಲ್ಲ. ಅವರಿಗಿಂತ ಮೇಲಿನ ವ್ಯಕ್ತಿಗಳು ನಿಜವಾಗಿ ಡ್ರ ಗ್ಸ್ ತಗೊಂಡ್ರೇ ಶಿಕ್ಷೆ ಆಗ್ಲಿ.

ಡ್ರ ಗ್ಸ್ ಬುಡ ಸಮೇತ ಕಿತ್ತು ಹಾಕಿ. ಅದು ಬಿಟ್ಟು ಇಲ್ಲಸಲ್ಲದ ನಿಮ್ಮ ಪ್ರಚಾರಕ್ಕಾಗಿ ಕನ್ನಡ ಚಿತ್ರರಂಗದ ಮರ್ಯಾದೆ ತೆಗಿಬೇಡ್ರಿ… ನೀವೊಬ್ಬ ಮಹಾನ್ ಸುಳ್ಳುಗಾರ. ಎಲ್ಲರಿಗೂ ಒಂದೇ ನ್ಯಾಯ ಇರ್ಲಿ. ನಿಮಗೆ ವಾರ್ನಿಂಗ್ ಮಾಡ್ತಾ ಇದ್ದೀನಿ ನಿಮ್ಮ ಹತ್ತಿರ ಸರಿಯಾದ ಸಾಕ್ಷಿ ಇದ್ದರೆ ಅದನ್ನು ನಾಳೆ ಬೆಳಿಗ್ಗೆ ಬಿಡುಗಡೆ ಮಾಡಿ. ನಿಮ್ಮ ಪಬ್ಲಿಕ್ ಸಿಟಿ ತೆವಲಿಗೋಸ್ಕರ ಪರಭಾಷೆಯ ಮುಂದೆ ನಮ್ಮ ಕನ್ನಡ ಚಿತ್ರರಂಗದ ಮಾನಾ ಮರ್ಯಾದೆ ತೆಗಿಬೇಡಿ.

ಲಂಕೇಶ್ ಅವರೇ ಇದು ನಿಮಗೂ ಸೇರಿಸಿ ಹೇಳಿದ್ದು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ನವೆಂಬರ್ ಒಂದನೇ ತಾರೀಖಿಗೆ ಪ್ರಶಾಂತ್ ಸಂಬರ್ಗಿ ಯವರು ಸ್ಪೋಟಕ ಆಡಿಯೋ ರಿಲೀಸ್ ಮಾಡಿದ್ರೇ ನಾನು ನನ್ನ ಅರ್ಧ ಮೀಸೆಯನ್ನು ಬೋಳಿಸುತ್ತೇನೆ ಹಾಗೂ ಸಾಯುವವರೆಗೂ ಪ್ರಶಾಂತ್ ಸಂಬರ್ಗಿಯವರ ಮನೆಯ “ವಾಚ್ ಮ್ಯಾನ್” ಆಗಿ ಕೆಲಸ ಮಾಡುತ್ತೇನೆ ಎಂದು ಸವಾಲನ್ನು ಸಹಾ ಹಾಕಿದ್ದಾರೆ.‌

Leave a Reply

Your email address will not be published. Required fields are marked *