ಗಂಡಸರಿಗೇ ಅಲ್ಲ ಈ ಮಹಿಳೆಗೂ ಇದೆ ಗಡ್ಡ: ಈಕೆಯ ಗಡ್ಡಕ್ಕೆ ಇದ್ದಾರೆ ಲಕ್ಷಗಟ್ಟಲೆ ಅಭಿಮಾನಿಗಳು

Written by Soma Shekar

Published on:

---Join Our Channel---

ಜಗತ್ತಿನಲ್ಲಿ ಹಲವು ರೀತಿಯ ವ್ಯಕ್ತಿಗಳಿದ್ದಾರೆ. ಇಲ್ಲಿ ಜನರ ಮುಖಚರ್ಯೆ ಮಾತ್ರವೇ ಅಲ್ಲದೇ ಅವರ ಅಭಿರುಚಿಗಳು, ಆಲೋಚನೆಗಳು ಹಾಗೂ ಭಾವನೆಗಳು ಸಹಾ ಭಿನ್ನ ವಿಭಿನ್ನವಾಗಿರುತ್ತವೆ. ಅಲ್ಲದೇ ಪುರುಷ ಮತ್ತು ಸ್ತ್ರೀ ಯರ ನಡುವಿನ ವ್ಯತ್ಯಾಸಗಳ ಕುರಿತಾಗಿ ನಾವೆಲ್ಲರೂ ಚಿರಪರಿಚಿತರಾಗಿಯೇ ಇದ್ದೇವೆ. ಇನ್ನು ಜಗತ್ತಿನಲ್ಲಿ ಕೆಲವು ಸ್ತ್ರೀಯರು ಪುರುಷರಿಗಿಂತ ಕಡಿಮೆಯೇನಿಲ್ಲ ಎನ್ನುವುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಪ್ರಕೃತಿ ಪುರುಷ ಮತ್ತು ಸ್ತ್ರೀಯರನ್ನು ಭಿನ್ನವಾಗಿ ಸೃಷ್ಟಿಸಿದೆ ಎನ್ನುವುದು ವಾಸ್ತವವಾಗಿದೆ.

ಅಂದದ ವಿಷಯಕ್ಕೆ ಬಂದಾಗ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಅಂದಕ್ಕೆ ಗಮನವನ್ನು ನೀಡುತ್ತಾರೆ. ಮಹಿಳೆಯರು ಶರೀರದ ಮೇಲೆ ಮೂಡುವ ಅನಾವಶ್ಯಕವಾದ ಕೂದಲನ್ನು ತೆಗೆದು ಹಾಕಲು ಹಲವು ಟಿಪ್ಸ್ ಗಳನ್ನು ಬಳಸುತ್ತಾರೆ. ಸಾಮಾನ್ಯವಾಗಿ ಮಹಿಳೆಯರ ಮುಖದ ಮೇಲೆ ಪುರುಷರಂತೆ ಗಡ್ಡ, ಮೀಸೆ ಬರುವುದಿಲ್ಲ. ಆದರೆ ಒಂದು ವೇಳೆ ಹಾಗೇನಾದರೂ ಬಂದು ಬಿಟ್ಟರೆ ಅದು ಅವರ ಚಿಂತೆಗೆ ಕಾರಣವಾದರೆ, ಇನ್ನೂ ಕೆಲವರಿಗೆ ಅದು ಖಿನ್ನತೆಯ ಕಾರಣವಾಗಿ ಬಿಡುತ್ತದೆ.

ಆದರೆ ಇಲ್ಲೊಬ್ಬ ಮಹಿಳೆ ತನಗೆ ಪುರುಷರ ಹಾಗೆ ಗಡ್ಡ ಬಂದಿದ್ದಕ್ಕೆ ಚಿಂತೆಗೀಡಾಗದೇ, ಖಿನ್ನತೆಗೆ ಒಳಗಾಗದೆ ತನ್ನ ಗಡ್ಡದ ಫೋಟೋಗಳನ್ನು ಬಿಂದಾಸ್ ಆಗಿ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡು ಖುಷಿ ಪಡುತ್ತಿದ್ದಾರೆ. ಹೌದು ಅಮೆರಿಕಾದ ಈ ಮಹಿಳೆ ಸೋಶಿಯಲ್ ಮೀಡಿಯಾಗಳಲ್ಲಿ ಪೀಕಾಬು ಪಂಪ್ಕಿನ್ ಎನ್ನುವ ಹೆಸರಿನಿಂದ ಜನಪ್ರಿಯವಾಗಿದ್ದಾರೆ. ಈ ಮಹಿಳೆ ಸಹಜವಾಗಿ ಬೆಳೆಯುತ್ತಿರುವ ತನ್ನ ದಾಡಿಯ ಫೋಟೋಗಳನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.

ಅನ್ಯ ಮಹಿಳೆಯರ ಹಾಗೆ ಈಕೆ ಗಡ್ಡ ಬಂದಿತೆಂದು ಚಿಂತೆಗೆ ಈಡಾಗಿಲ್ಲ. ಆಕೆ ತನ್ನ ಮುಖದ ಮೇಲೆ ಪುರುಷರ ಹಾಗೆ ಬೆಳೆದಿರುವ ಗಡ್ಡದ ಫೋಟೋಗಳನ್ನು ಶೇರ್ ಮಾಡಿಕೊಂಡ ನಂತರ ಆಕೆಯ ಈ ಧೈರ್ಯದ ನಡೆಗೆ ಅಪಾರವಾದ ಮೆಚ್ಚುಗೆಗಳು ಹರಿದು ಬರುತ್ತಿದೆ. 36 ವರ್ಷ ವಯಸ್ಸಿನ ಈ ಮಹಿಳೆಗೆ ಈಗಾಗಲೇ ಮದುವೆಯಾಗಿದೆ. ಇನ್ನು ಟಿಕ್ ಟಾಕ್ ನಲ್ಲೂ ಈಕೆ ಸಾಕಷ್ಟು ಸಕ್ರಿಯವಾಗಿದ್ದಾರೆ.

ನಮ್ಮಲ್ಲಿ ಟಿಕ್ ಟಾಕ್ ಬ್ಯಾನ್ ಆಗಿದ್ದರೂ ವಿದೇಶಗಳಲ್ಲಿ ಇದು ಇನ್ನೂ ಸಕ್ರಿಯವಾಗಿದೆ. ಇನ್ನು ಈ ಮಹಿಳೆಗೆ ಟಿಕ್ ಟಾಕ್ ನಲ್ಲಿ 51 ಸಾವಿರ ಜನ ಹಿಂಬಾಲಕರು ಇದ್ದಾರೆ. ಅವರ ವೀಡಿಯೋ 4 ಲಕ್ಷ 71 ಸಾವಿರಕ್ಕಿಂತಲೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಮಹಿಳೆಯ ಆತ ವಿಶ್ವಾಸವನ್ನು ನೋಡಿ ನೆಟ್ಟಿಗರು ಅಪಾರವಾದ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಈ ಮಹಿಳೆ ತಾನು ಸಾಕಷ್ಟು ದಿನಗಳ ಪ್ರಯತ್ನದ ನಂತರ ಇಂತಹ ಆತ್ಮವಿಶ್ವಾಸ ಪಡೆದಿದ್ದಾಗಿ ಹೇಳಿದ್ದಾರೆ.

Leave a Comment