ಖುಷಿಯ ವಿಚಾರ ಹಂಚಿಕೊಂಡ ಸಂಜನಾ ಗಲ್ರಾನಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಂಜನಾ

Written by Soma Shekar

Published on:

---Join Our Channel---

ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಈಗಾಗಲೇ ಸಾಕಷ್ಟು ವಿಷಯಗಳಿಂದಾಗಿ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇದೀಗ ಅವರು ಹೊಸ ವರ್ಷದ ಹಿನ್ನೆಲೆಯಲ್ಲಿ ಸಂಜನಾ ಗಲ್ರಾನಿ ಅವರು ಒಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹೌದು ನಟಿ ಸಂಜನಾ ಗಲ್ರಾನಿ ತಾವು ತಾಯಿಯಾಗುತ್ತಿರುವ ಸಿಹಿ ಸುದ್ದಿಯನ್ನೀಗ ಹಂಚಿಕೊಂಡು ತಮ್ಮ ಅಭಿಮಾನಿಗಳ ಜೊತೆಗೆ ಖುಷಿಯನ್ನು ಹಂಚಿಕೊಂಡಿದ್ದಾರೆ. ಸಂಜನಾ ತಾಯಿಯಾಗುತ್ತಿರುವ ಖುಷಿಯ ವಿಚಾರವನ್ನು ರಿವೀಲ್ ಮಾಡುವ ಮೂಲಕ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಈ ವರ್ಷದ ಮೇ ತಿಂಗಳಿನಲ್ಲಿ ಸಂಜನಾ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿತ್ತು. ಈ ಸುದ್ದಿಗೆ ಸಂಬಂಧಿಸಿದ ಹಾಗೆ ಸಂಜನಾ ಅವರು ಖಾಸಗಿ ಮಾದ್ಯಮವೊಂದಕ್ಕೆ ಸ್ಪಷ್ಟನೆಯನ್ನು ನೀಡುವ ಮೂಲಕ ತಾನು ತಾಯಿಯಾಗುತ್ತಿರುವ ವಿಷಯವು ನಿಜ ಎಂದು ತಿಳಿಸಿದ್ದಾರೆ ಎಂದಿದ್ದಾರೆ. ಈ ಮೂಲಕ ಹರಿದಾಡಿದ ಸುದ್ದಿಗಳಿಗೆ,‌ ಊಹಾಪೋಹಗಳಿಗೆ ತೆರೆಯನ್ನು ಎಳೆದಿದ್ದಾರೆ.

ಮದುವೆ, ಡ್ರ ಗ್ ಕೇ ಸ್ ವಿಚಾರವಾಗಿ ಕಳೆದ ಒಂದೂವರೆ ವರ್ಷಗಳ ಕಾಲದಿಂದಲೂ ಸಹಾ ಸಾಕಷ್ಟು ಸುದ್ದಿಯಾಗಿದ್ದಾರೆ. ಈ ನಡುವೆ ಅವರು ತಾನು ತಾಯಿಯಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದು ತಮ್ಮ ಅಭಿಮಾನಿಗಳ ಜೊತೆಗೆ ಖುಷಿಯನ್ನು ಹಂಚಿಕೊಂಡಿದ್ದಾರೆ. ಸಂಜನಾ ಅವರು ತಮ್ಮ ಮದುವೆಯ ವಿಚಾರವಾಗಿ ಎದ್ದಿದ್ದ ಊಹಾಪೋಹಗಳಿಗೆ ಜೂನ್ 3, 2021 ರಂದು ಸ್ಪಷ್ಟನೆ ನೀಡಿದ್ದರು.

ಆಗ ಅವರು ಲಾಕ್ ಡೌನ್ ವೇಳೆಯಲ್ಲಿ ತನಗೆ ಮದುವೆಯಾಗಿದ್ದು, ಕೆಲವು ಕಾರಣಗಳಿಂದ ಅವರು ತಮ್ಮ ಮದುವೆಯ ವಿಚಾರವನ್ನು ಹಂಚಿಕೊಳ್ಳುವುದಕ್ಕೆ ಆಗಿರಲಿಲ್ಲ ಎನ್ನುವ ಮಾತನ್ನು ಹೇಳಿದ್ದರು. ದೊಡ್ಡದಾಗಿ ಸೆಲೆಬ್ರಿಟ್ ಮಾಡಬೇಕೆಂದು ಆಲೋಚಿಸಿದ್ದೆ, ಆದರೆ ಆಗಲಿಲ್ಲ. ಚಿತ್ರರಂಗದ ಅಣ್ಣ ತಮ್ಮಂದಿರಿಗೆ ಊಟ ಹಾಕಿಸೋಕೆ ಆಗಲಿಲ್ಲ ಎಂದು ಬೇಸರವನ್ನು ವ್ಯಕ್ತಪಡಿಸಿದ್ದರು.

Leave a Comment