ಲವ್ವರ್ ಅನ್ನೋದು ಮನೆಯಿಂದ ಆಚೆ: ತಪ್ಪು ಮಾಡಿದ ಜಶ್ವಂತ್ ಗೆ ಖಡಕ್ ವಾರ್ನಿಂಗ್ ನೀಡಿದ ಕಿಚ್ಚ ಹೇಳಿದ್ದೇನು?

Written by Soma Shekar

Published on:

---Join Our Channel---

ಬಿಗ್ ಬಾಸ್ ಓಟಿಟಿ ಕನ್ನಡದ ಮೊದಲನೇ ಸೀಸನ್ ನಲ್ಲಿ ಮನೆಯನ್ನು ಪ್ರವೇಶ ಮಾಡಿರುವ ಸ್ಪರ್ಧಿಗಳಲ್ಲಿ ಒಂದು ಜೋಡಿ ಸಹಾ ಇದೆ. ಜಶ್ವಂತ್ ಮತ್ತು ನಂದಿನಿ ಜೋಡಿಯು ರಿಯಲ್ ಲೈಫ್ ನಲ್ಲಿ ಪ್ರೇಮಿಗಳಾಗಿದ್ದಾರೆ. ಆದರೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ ನಂತರ ಅಲ್ಲಿನ ಒಂದಷ್ಟು ನಿಯಮಗಳನ್ನು ಪಾಲನೆ ಮಾಡಲೇಬೇಕಾದ್ದದ್ದು ಅನಿವಾರ್ಯ. ಏಕೆಂದರೆ ಅದು ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಅನ್ವಯವಾಗುವಂತಹ ನಿಯಮಗಳಾಗಿರುತ್ತದೆ. ಆದರೆ ಅಂತಹ ಒಂದು ನಿಯಮವನ್ನು ಪದೇಪದೇ ಮುರಿದ ಜಶ್ವಂತ್ ಗೆ ಕಿಚ್ಚ ಸುದೀಪ್ ಅವರು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

ವಾರಾಂತ್ಯದ ಎಪಿಸೋಡ್ ಗಳಲ್ಲಿ ನಟ ಕಿಚ್ಚ ಸುದೀಪ್ ಅವರ ಮಾತುಕತೆ ಮನೆಯ ಸ್ಪರ್ಧಿಗಳ ಸಮ್ಮುಖದಲ್ಲೇ ನಡೆಯುತ್ತದೆ. ಈ ವೇಳೆ ಮಾತನಾಡುವಾಗ ಎಲ್ಲರ ಸಮ್ಮುಖದಲ್ಲೇ ನಟ ಕಿಚ್ಚ ಸುದೀಪ್ ಅವರು ಜಶ್ವಂತ್ ಗೆ ಖಡಕ್ ಎಚ್ಚರಿಕೆಯನ್ನು ರವಾನೆ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರು ಜಶ್ವಂತ್ ಗೆ ಎಚ್ಚರಿಕೆ ನೀಡುತ್ತಾ ಅವರ ವರ್ತನೆ ಅದೇ ರೀತಿ ಮುಂದುವರೆದರೆ ಮನೆಯ ಬಾಗಿಲನ್ನು ತೋರಿಸಬೇಕಾಗುತ್ತದೆ ಎನ್ನುವ ಮಾತನ್ನು ಹೇಳಿದ್ದಾರೆ. ಇಷ್ಟಕ್ಕೂ ಕಿಚ್ಚ ಸುದೀಪ್ ಇಂತಹುದೊಂದು ವಾರ್ನಿಂಗ್ ನೀಡಲು ಕಾರಣವಾದ್ರೂ ಏನು? ತಿಳಿಯೋಣ ಬನ್ನಿ.

ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಪ್ರತಿವಾರವೂ ಸಹಾ ನಡೆಯುತ್ತದೆ. ಆದರೆ ಸ್ಪರ್ಧಿಗಳನ್ನು ನಾಮಿನೇಟ್ ಮಾಡುವ ವಿಚಾರವನ್ನು ಯಾರೂ, ಯಾರೊಂದಿಗೂ ಸಹಾ ಚರ್ಚೆ ಮಾಡುವಂತಿಲ್ಲ. ನಾಮಿನೇಟ್ ಮಾಡಲು ಬಯಸುವ ಸ್ಪರ್ಧಿಯನ್ನು ತಮ್ಮ ಸ್ವಂತ ಆಲೋಚನೆಯಿಂದ ಆಯ್ಕೆ ಮಾಡಬೇಕು. ಆದರೆ ಜಶ್ವಂತ್ ಈ ನಿಯಮವನ್ನು ಮೀರಿದ್ದಾರೆ. ಅವರು ನಾಮಿನೇಟ್ ಮಾಡುವ ವಿಚಾರವನ್ನು ತಮ್ಮ ಲವರ್ ನಂದು ಜೊತೆಗೆ ಚರ್ಚೆ ಮಾಡಿ, ನಾಮಿನೇಟ್ ಮಾಡಿದ್ದು, ಅವರು ಬಿಗ್ ಬಾಸ್ ಮನೆಯ ನಿಯಮವನ್ನು ಮೀರಿದ್ದಾರೆ.

ಜಶ್ವಂತ್ ಅವರು ಪದೇ ಪದೇ ಈ ನಿಯಮವನ್ನು ಮೀರಿರುವ ಕಾರಣದಿಂದಾಗಿ ನಟ ಸುದೀಪ್ ಅವರು ಎಚ್ಚರಿಕೆ ನೀಡಿದ್ದು, ಲವರ್ ಅನ್ನೋದು ಮನೆಯಿಂದ ಆಚೆ, ಮನೆಯೊಳಗೆ ಇಬ್ಬರೂ ಸ್ಪರ್ಧಿಗಳು ಎನ್ನುವುದನ್ನು ಮರೆಯಬೇಡಿ ಎಂದಿದ್ದಾರೆ. ಈ ಮಾತು ಸಹಜವಾಗಿಯೇ ಲವ್ ಬರ್ಡ್ಸ್ ಜಶ್ವಂತ್ ಮತ್ತು ನಂದು ಅವರಿಗೆ ಬೇಸರವನ್ನು ಉಂಟು ಮಾಡಿದೆ. ‌ಜಶ್ವಂತ್ ಮನೆಯೊಳಗೂ ಸಹಾ ಲವರ್ ನಂತೆ ವರ್ತಿಸುತ್ತಿರುವುದು ಕಂಡು ಬಂದಿದ್ದು ಇದೇ ಕಾರಣದಿಂದ ಸುದೀಪ್ ಅವರು ಹೊರಗೆ ಇರುವಂತೆ ಇಲ್ಲಿ ಕೂಡಾ ವರ್ತಿಸುವುದು ಬೇಡ ಎಂದು ಪರೋಕ್ಷವಾಗಿ ಹೇಳಿದ್ದಾರೆ.

Leave a Comment