ಖಂಡಿತ ಮತ್ತೆ ನಂಬರ್ ಒನ್ ಆಗುತ್ತೆ ಜೊತೆ ಜೊತೆಯಲಿ: ಪ್ರೇಕ್ಷಕರ ಈ ಮಾತು ನಿಜ ಮಾಡಲು ಸಜ್ಜಾಯ್ತಾ ವೇದಿಕೆ??
ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ಧಾರವಾಹಿಗಳು ಬಹಳಷ್ಟಿವೆ. ಆದರೆ ಈ ಜನಪ್ರಿಯ ಧಾರಾವಾಹಿಗಳಲ್ಲಿ ಜನ ಮನ್ನಣೆಯನ್ನು ದೊಡ್ಡ ಮಟ್ಟದಲ್ಲಿ ಪಡೆದು ಯಶಸ್ಸಿನ ನಾಗಾಲೋಟವನ್ನು ಮಾಡಿ ಟಾಪ್ ಸೀರಿಯಲ್ ಗಳ ಸ್ಥಾನವನ್ನು ಪಡೆಯುವಲ್ಲಿ ಮಾತ್ರ ಕೆಲವೇ ಧಾರಾವಾಹಿಗಳು ಯಶಸ್ಸನ್ನು ಪಡೆದುಕೊಳ್ಳುತ್ತವೆ. ಧಾರಾವಾಹಿಗಳ ಅಭಿಮಾನಿಗಳಿಗೆ ಸಹಾ ತಮ್ಮ ನೆಚ್ಚಿನ ಧಾರಾವಾಹಿ ಅಗ್ರ ಧಾರಾವಾಹಿ ಆದರೆ ಸಂತೋಷ ಪಡುವುದು ಉಂಟು. ಸಾಮಾಜಿಕ ಜಾಲತಾಣಗಳಲ್ಲಾದರೆ ತಮ್ಮ ನೆಚ್ಚಿನ ಸೀರಿಯಲ್ ನಟ, ನಟಿಯರನ್ನು ಫಾಲೋ ಮಾಡುವ ಅಭಿಮಾನಿಗಳ ಸಂಖ್ಯೆ ಸಹಾ ಹೆಚ್ಚಾಗಿಯೇ ಇದೆ.
ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಸಾಲಲ್ಲಿ ಜೊತೆ ಜೊತೆಯಲಿ ಕೂಡಾ ಒಂದಾಗಿದೆ. ಈ ಧಾರಾವಾಹಿ ಆರಂಭವಾಗಿ ಮೂರು ವರ್ಷ ಕಳೆದಿದೆ. ಆದರೂ ಟಾಪ್ ಐದರಲ್ಲಿ ತನ್ನ ಸ್ಥಾನವನ್ನು ಭದ್ರವಾಗಿ ಉಳಿಸಿಕೊಂಡು ಬರುತ್ತಿದೆ. ಜೊತೆ ಜೊತೆಯಲಿ ಆರಂಭವಾದ ಕೂಡಲೇ ಮೊದಲ ವಾರದಲ್ಲೇ ಕಿರುತೆರೆ ಲೋಕದಲ್ಲೇ ಅತಿ ಹೆಚ್ಚು ಟಿ ಆರ್ ಪಿ ಪಡೆದ ಧಾರಾವಾಹಿ ಎನ್ನುವ ಹೆಗ್ಗಳಿಕೆಯೊಡನೆ ಹೊಸ ದಾಖಲೆಯನ್ನು ಬರೆಯಿತು. ಪ್ರೇಕ್ಷಕರು ಸಹಾ ಜೊತೆ ಜೊತೆಯಲಿ ಸೀರಿಯಲ್ ಗೆ ಅಭಿಮಾನಿಗಳಾದರು.
ಜೊತೆ ಜೊತೆಯಲಿ ಯಾವ ಮಟ್ಟಕ್ಕೆ ಸದ್ದು ಮಾಡಿತು ಎಂದರೆ ಪುರುಷರು ಸಹಾ ಈ ಸೀರಿಯಲ್ ಅಭಿಮಾನಿಗಳಾದರು. ಎಲ್ಲೆಲ್ಲೂ ಸೀರಿಯಲ್ ಬಗ್ಗೆ ಚರ್ಚೆಗಳು ನಡೆದವು. ದೀರ್ಘ ಸಮಯದವರೆಗೆ ಕಿರುತೆರೆ ಲೋಕದ ನಂಬರ್ ಒನ್ ಧಾರಾವಾಹಿ ಎನ್ನುವ ಹೆಗ್ಗಳಿಕೆಯನ್ನು ಈ ಧಾರಾವಾಹಿ ಪಡೆದು, ದಿನದಿಂದ ದಿನಕ್ಕೆ ಇನ್ನಷ್ಟು, ಮತ್ತಷ್ಟು ಜನರ ಆದರ, ಅಭಿಮಾನ ಪಡೆದು ಮುನ್ನುಗ್ಗಿತ್ತು. ಆದರೆ ಅನಂತರ ಬೇರೆ ಧಾರಾವಾಹಿಗಳಿಂದ ತೀ ವ್ರ ಸ್ಪರ್ಧೆ ಎದುರಿಸಬೇಕಾಯಿತು.
ದಿನ ಕಳೆದಂತೆ ಬೇರೆ ಸೀರಿಯಲ್ ಗಳ ಸಹಾ ಹೊಸ ಹೊಸ ತಿರುವುಗಳೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಆರಂಭಿಸಿದವು. ಇದರಿಂದ ಜೊತೆ ಜೊತೆಯಲಿ ಧಾರಾವಾಹಿ ಸಹಾ ಟಾಪ್ ಒನ್ ಸ್ಥಾನದಿಂದ ಒಂದೊಂದೇ ಸ್ಥಾನ ಕೆಳೆಗೆ ಇಳಿಯುತ್ತಾ ಟಾಪ್ ಐದಕ್ಕೆ ಕುಸಿಯಿತು. ಪ್ರಸ್ತುತ ಸ್ವಲ್ಪ ಮಟ್ಟಿನ ಸುಧಾರಣೆ ಎನ್ನುವಂತೆ ಟಾಪ್ ನಾಲ್ಕನೇ ಸ್ಥಾನಕ್ಕೆ ಏರಿದೆ ಜೊತೆ ಜೊತೆಯಲಿ ಎನ್ನುವುದು ಈ ಧಾರಾವಾಹಿಯ ಅಭಿಮಾನಿಗಳಿಗೆ ಖುಷಿಯನ್ನು ನೀಡಿದೆ.
ಇನ್ನು ಈಗ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಹೊಸ ತಿರುವುಗಳು ಕಂಡಿವೆ, ನಾಯಕ ಆರ್ಯವರ್ಧನ್ ನ ಇನ್ನೊಂದು ಮುಖದ ಅನಾವರಣವಾಗುತ್ತಿದೆ. ರಾಜ ನಂದಿನಿಯ ಪ್ರವೇಶ ಆಗಿದೆ. ಅಡಗಿದ್ದ ರಹಸ್ಯಗಳು ಒಂದೊಂದಾಗಿ ಹೊರ ಬರಲು ಆರಂಭಿಸಿದ್ದು, ಕಥೆ ಒಂದು ರೋಚಕ ವಾದ ಘಟ್ಟವನ್ನು ತಲುಪಿದೆ. ಇದು ಸಹಜವಾಗಿಯೇ ಪ್ರೇಕ್ಷಕರ ಕುತೂಹಲವನ್ನು ಕೆರಳಿಸುವ ಜೊತೆಗೆ ಅವರಿಗೆ ಭರ್ಜರಿ ಮನರಂಜನೆಯನ್ನು ಸಹಾ ನೀಡುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಾಹಿನಿಯು ಧಾರಾವಾಹಿಯ ಪ್ರೋಮೋ ಗಳನ್ನು ಹಂಚಿಕೊಂಡಾಗ ಅದಕ್ಕೆ ಅಪಾರವಾದ ಮೆಚ್ಚುಗೆಗಳು ಹರಿದು ಬರುತ್ತಿದೆ. ಇನ್ನು ಜೊತೆ ಜೊತೆಯಲಿ ಮೊದಲಿನ ಹಾಗೆ ಮತ್ತೊಮ್ಮೆ ಜನರ ಮನಸ್ಸನ್ನು ಗೆದ್ದು, ಟಾಪ್ ಒನ್ ಸೀರಿಯಲ್ ಸ್ಥಾನವನ್ನು ಪಡೆದುಕೊಳ್ಳುತ್ತದೆಯಾ?? ಸೀರಿಯಲ್ ಮತ್ತೊಮ್ಮೆ ಹೊಸ ದಾಖಲೆಯನ್ನು ಬರೆಯಲಿದೆಯಾ?? ಅಂತೂ ನಂಬರ್ ಒನ್ ಸ್ಥಾನಕ್ಕೆ ಬರುವ ಎಲ್ಲಾ ಲಕ್ಷಣಗಳು ಮತ್ತೆ ಗೋಚರಿಸುತ್ತಿದೆ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ ಆಗಿದೆ.