ಕ್ಷಮೆ‌ ಕೇಳಿದ್ರು ಸಿನಿಮಾ ನೋಡಲ್ಲ ಅಂದ್ರು ಜನ: Boycott ಬಿಸಿಗೆ ಶೋ ಗಳು ರದ್ದು, ಮುಗ್ಗರಿಸಿದ ಅಮೀರ್ ಖಾನ್ ಸಿನಿಮಾ?

Entertainment Featured-Articles Movies News

ಬಾಲಿವುಡ್ ನಟ ಅಮೀರ್ ಖಾನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಲಾಲ್ ಸಿಂಗ್ ಚಡ್ಡಾ ಬಿಡುಗಡೆಯ ದಿನಾಂಕ ಘೋಷಣೆ ಆದಾಗಿನಿಂದಲೂ ಸೋಶಿಯಲ್ ಮೀಡಿಯಾಗಳಲ್ಲಿ ಸಿನಿಮಾ ಬಾಯ್ ಕಾಟ್ ಮಾಡಬೇಕು ಎನ್ನುವ ಅಭಿಯಾನವೊಂದು ಆರಂಭವಾಗಿತ್ತು. ಆದರೂ ಅದರ ನಡುವೆಯೇ ಅಮೀರ್ ಖಾನ್ ಸಿನಿಮಾ ಎಂದರೆ ಅಲ್ಲೊಂದು ವಿಶೇಷತೆ ಇರುತ್ತದೆ, ಈ ನಟನ ಸಿನಿಮಾಗಳನ್ನು ನೋಡುವ ದೊಡ್ಡ ಪ್ರೇಕ್ಷಕರ ಬಳಗವೇ ಇದೆ ಎಂದೆಲ್ಲಾ ಸುದ್ದಿಗಳಾಗಿದ್ದವು. ಆದರೆ ಈಗ ಸಿನಿಮಾ ಬಿಡುಗಡೆಯಾದ ಒಂದು ದಿನದಲ್ಲೇ ಲಾಲ್ ಸಿಂಗ್ ಚಡ್ಡಾ ಮುಗ್ಗರಿಸಿದೆ. ಸಿನಿಮಾ ಬಿಡುಗಡೆಯ ನಂತರ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆಗಳು ಹರಿದು ಬಂದಿವೆ.

ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಡೆಸಿದ ದೊಡ್ಡ ಮಟ್ಟದ ಅಭಿಯಾನ ಮತ್ತು ಆಗ್ರಹವು ಸಿನಿಮಾ ಮೇಲೆ ಪರಿಣಾಮ ಬೀರಿದಂತೆ ಕಂಡು ಬಂದಿದೆ. ಸಿನಿಮಾ ಬಿಡುಗಡೆ ನಂತರ ಶೋ‌ ಗಳ ಸಂಖ್ಯೆ ಕಡಿಮೆಯಾಗುತ್ತಾ ಸಾಗಿದೆ. ಸಿನಿಮಾ ಶೋ‌ಗಳ ಸಂಖ್ಯೆ ಹೀಗೆ ಕಡಿಮೆಯಾಗುತ್ತಿರುವುದನ್ನು ಕಂಡು ನಟ ಅಮೀರ್ ಖಾನ್ ಚಿಂತೆಗೀಡಾಗಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಶೋ‌ ಗಳ ಸಂಖ್ಯೆ ಹೀಗೆ ಕಡಿಮೆಯಾದರೆ ಸಿನಿಮಾ ಹೀನಾಯ ಸೋಲನ್ನು ಅನುಭವಿಸುವುದು ಖಚಿತ ಎನ್ನಲಾಗುತ್ತಿದೆ.

ಈಗ ವರದಿಯಾಗಿರುವ ಸುದ್ದಿಗಳ ಪ್ರಕಾರ ಲಾಲ್ ಸಿಂಗ್ ಚಡ್ಡಾ ಸಿನಿಮಾದ 1300 ಶೋ ಗಳಿಗೆ ಕತ್ತರಿ ಬಿದ್ದಿದೆ ಎನ್ನಲಾಗಿದೆ. ಇದೇ ವೇಳೆ ಆಗಸ್ಟ್ ಹನ್ನೊಂದರಂದು ಬಾಲಿವುಡ್ ನ ಮತ್ತೊಬ್ಬ ಸ್ಟಾರ್ ನಟ ಅಕ್ಷಯ್ ಕುಮಾರ್ ಅಭಿನಯದ ರಕ್ಷಾ ಬಂಧನ್ ಸಿನಿಮಾ ಸಹಾ ತೆರೆ ಕಂಡಿದೆ. ಈ ಸಿನಿಮಾಕ್ಕೆ ಉತ್ತಮ ವಿಮರ್ಶೆಗಳು ಬಂದಿದೆ. ಅಲ್ಲದೇ ಉತ್ತಮ ಪ್ರತಿಕ್ರಿಯೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ರಕ್ಷಾ ಬಂಧನ್ ಸಿನಿಮಾದ ಶೋ‌ಗಳ ಸಂಖ್ಯೆಯನ್ನು ಸಹಾ ಹೆಚ್ಚಿಸಲಾಗಿದೆ ಎಂದು ಹೇಳಲಾಗಿದ್ದು, ಇದು ಸಹಾ ಅಮೀರ್ ಖಾನ್ ಸಿನಿಮಾದ ಮೇಲೆ ದೊಡ್ಡ‌ ಹೊಡೆತವನ್ನು ನೀಡಿದೆ.

ನಟ ಅಮೀರ್ ಖಾನ್ ಈ ಹಿಂದೆ ದೇಶದಲ್ಲಿ ಅಸಹಿಷ್ಣುತೆ ಇದ್ದು, ಮಕ್ಕಳ ಸಹಿತ ವಿದೇಶಕ್ಕೆ ಹೋಗಬೇಕೆಂದು ತಮ್ಮ ಪತ್ನಿ ಹೇಳಿರುವುದಾಗಿ ನೀಡಿದ್ದ ಹೇಳಿಕೆಯೊಂದು ಬಹಳಷ್ಟು ಜನರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಸಿಟ್ಟಿಗೆದ್ದಿದ್ದ ಜನರು ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ನಿಷೇಧ ಮಾಡಬೇಕು ಎಂದು ಅಭಿಯಾನ ಮಾಡಿದ್ದರು. ಸಿನಿಮಾ ಬಿಡುಗಡೆಯ ಒಂದು ದಿನ ಮುಂಚೆ ನಟ ಕ್ಷಮೆ ಯಾಚಿಸಿದ್ದರೂ ಸಹಾ ಅದು ಯಾವುದೇ ಪರಿಣಾಮ ಬೀರಿಲ್ಲ ಎನ್ನುವುದು ಈಗ ಸ್ಪಷ್ಟವಾಗಿದೆ.

Leave a Reply

Your email address will not be published.