ಕ್ರೇಜಿ ಸ್ಟಾರ್ ನಂತ್ರ ಡಿಂಪಲ್ ಕ್ವೀನ್ ಕಿಡ್ನಾಪ್: ಈ ಡ್ರಾಮಾಕ್ಕೆ ಹಿರಿಯ ನಟಿ ಲಕ್ಷ್ಮೀ ಸಾಥ್!

Entertainment Featured-Articles News Viral Video

ಈ ಹಿಂದೆ ಸ್ಯಾಂಡಲ್ವುಡ್ ನಟ‌ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರನ್ನು ಕಿಡ್ನಾಪ್ ಮಾಡಿದ ಪ್ರೋಮೋ ಒಂದು ಸಖತ್ ಸದ್ದು ಮಾಡಿತ್ತು. ಅದು ಕನ್ನಡದಲ್ಲಿ ಶೀಘ್ರದಲ್ಲೇ ಶುರುವಾಗಲಿರುವ ಜನಪ್ರಿಯ ರಿಯಾಲಿಟಿ ಶೋ ಡ್ರಾಮಾ‌ ಜೂನಿಯರ್ಸ್ ನ ಹೊಸ ಸೀಸನ್ ಗೆ ರವಿಚಂದ್ರನ್ ಅವರು ಜಡ್ಜ್ ಆಗಿ ಬರಲಿದ್ದಾರೆ ಎನ್ನುವ ವಿಷಯವು ಗೊತ್ತಾಯಿತು. ಸರಿ ರವಿಚಂದ್ರನ್ ಅವರ ನಂತರ ಇನ್ನಾವ ಸ್ಟಾರ್ ಈ ಬಾರಿ ಶೋ ಗೆ ಜಡ್ಜ್ ಆಗಲಿದ್ದಾರೆ ಎನ್ನುವ ಪ್ರಶ್ನೆ ಅನೇಕರಿಗೆ ಕಾಡುವಾಗಲೇ ಅದಕ್ಕೆ ಉತ್ತರ ನೀಡುವ ಹೊಸ ಪ್ರೊಮೋವನ್ನು ಜೀ ಕನ್ನಡ ವಾಹಿನಿ ಪ್ರಸಾರ ಮಾಡಿದೆ.

ಹೌದು, ಈ ಬಾರಿ ಸ್ಯಾಂಡಲ್ವುಡ್ ನ ಸ್ಟಾರ್ ನಟಿ ರಚಿತಾ ರಾಮ್ ಅವರನ್ನು ಚಿಣ್ಣರು ಕಿಡ್ನಾಪ್ ಮಾಡುವ ಕುತೂಹಲಕಾರಿ ಹಾಗೂ ಮನರಂಜನಾತ್ಮಕವಾದ ಒಂದು ಉತ್ಸುಕತೆ ಮೂಡುವ ಪ್ರೋಮೋ ಬಿಡುಗಡೆ ಆಗಿದ್ದು, ಶೂಟಿಂಗ್ ಗೆ ಹೋಗುತ್ತಿರುವ ರಚಿತಾ ಅವರನ್ನು ಮಕ್ಕಳು ಅಪಹರಿಸಿ ಫ್ಲೈಟ್ ಹತ್ತಿಸುವ ದೃಶ್ಯದ ಪ್ರೋಮೋ ಬಿಡುಗಡೆ ಆಗಿ ಸದ್ದು ಮಾಡಿದೆ. ಅಲ್ಲದೇ ಈ ಮೂಲಕ ಡ್ರಾಮಾ ಜೂನಿಯರ್ಸ್ ನ ಹೊಸ ಸೀಸನ್ ನಲ್ಲಿ ರಚಿತಾ ರಾಮ್ ಮತ್ತೋರ್ವ ಜಡ್ಜ್ ಎನ್ನುವುದು ಸ್ಪಷ್ಟವಾಗಿದೆ.

ಪ್ರೋಮೋದಲ್ಲಿ ಮಕ್ಕಳಿಂದ ಅಪಹರಣ ವಾದ ರಚಿತಾ ರಾಮ್ ವಿಮಾನ ನಿಲ್ದಾಣಕ್ಕೆ ಬಂದು, ವಿಮಾನ ಏರಿದಾಗ ಅಲ್ಲಿ ತನಗೆ ಯಾರಾದರೂ ಸಹಾಯ ಮಾಡುವರೇನೋ ಎನ್ನುವ ನಿರೀಕ್ಷೆಯಲ್ಲಿ ಇರುವಾಗಲೇ ಪೇಪರ್ ಓದುತ್ತಿರುವ ರವಿಚಂದ್ರನ್ ಅವರು ಕಾಣುತ್ತಾರೆ. ಆಗ ರವಿಚಂದ್ರನ್ ರಚಿತಾಗೆ ಇದೆಲ್ಲಾ ಅವನದ್ದೇ ಕೆಲಸ ಎಂದು ಮಾಸ್ಟರ್ ಆನಂದ್ ಅವರನ್ನು ತೋರಿಸಿದಾಗ, ಅವರು ಇದೆಲ್ಲಾ ನಮ್ಮ‌ ಬಾಸ್ ಅವರ ಪ್ಲಾನ್ ಎಂದು ಹೇಳಿದಾಗ ಹಿರಿಯ ನಟಿ ಲಕ್ಷ್ಮಿ ಅವರು ಅಲ್ಲಿಗೆ ಎಂಟ್ರಿಯನ್ನು ನೀಡುತ್ತಾರೆ.

ಲಕ್ಷ್ಮೀ ಅವರು ಆಗ, ಈ ಸೀಸನ್ ನಲ್ಲಿ ನಮ್ಮ ಜೊತೆ ಸೇರಿದ್ದಕ್ಕೆ ತುಂಬಾ ಸಂತೋಷ, ಈಗ ಆರಾಮಾಗಿ ಕೂತ್ಕೊಳ್ಳಿ, ಮುಂದೆ ಮಾತಾಡೋಕೆ ತುಂಬಾ ಇದೆ, ಈಗ ಜರ್ನಿ ಶುರು ಮಾಡೋಣ ಎನ್ನುವ ಮಾತನ್ನು ಹೇಳುತ್ತಾರೆ. ಈ ರೀತಿ ಡ್ರಾಮಾ ಜೂನಿಯರ್ಸ್ಸ್ ನ ಹೊಸ ಸೀಸನ್ ನ ಪ್ರೋಮೋ ಬಹಳ ಆಸಕ್ತಿಕರವಾಗಿ ಹಾಗೂ ಅದ್ದೂರಿಯಾಗಿ ಮೂಡಿ ಬಂದಿದೆ. ನಟಿ ರಚಿತಾ ರಾಮ್ ಅವರು ಈ ಪ್ರೋಮೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಅವರ ಅಭಿಮಾನಿಗಳು ನಟಿಯ ಹೊಸ ಜರ್ನಿಗೆ ಶುಭ ಹಾರೈಸಿದ್ದಾರೆ.

Leave a Reply

Your email address will not be published.