ಕ್ರೇಜಿ ಸ್ಟಾರ್ ಕುಟುಂಬದಲ್ಲಿ ಸಂಭ್ರಮ: ಹೊಸ ಜೀವನಕ್ಕೆ ಅಡಿಯಿಡುತ್ತಿರುವ ಮನೋರಂಜನ್

Entertainment Featured-Articles Movies News

ಕನ್ನಡ ಚಿತ್ರರಂಗದ ಹಿರಿಯ ನಟ, ಕ್ರೇಜಿಸ್ಟಾರ್ ಖ್ಯಾತಿಯ ನಟ ಕನಸುಗಾರ ರವಿಚಂದ್ರನ್ ಅವರ ಮನೆಯಲ್ಲಿ ಮದುವೆಯ ಸಂಭ್ರಮದ ಖುಷಿಯು ತುಂಬಿಕೊಂಡಿದ್ದ. ನಟ ರವಿಚಂದ್ರನ್ ಅವರ ಹಿರಿಯ ಮಗ, ಚಿತ್ರರಂಗದಲ್ಲಿ ಯುವ ನಟನಾಗಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿರುವ ಮನೋರಂಜನ್ ಅವರು ಸಂಗೀತ ಅವರೊಂದಿಗೆ ಸತ್ತ ಪತಿಯನ್ನು ತಡೆದು ಹೊಸ ಜೀವನಕ್ಕೆ ಅಡಿಯಿಡುತ್ತಿದ್ದು, ಅವರ ಮದುವೆಯ ಈ ವಿಶೇಷ ಸಂದರ್ಭವು ರವಿಚಂದ್ರನ್ ಅವರ ಮನೆಯಲ್ಲಿ ಒಂದು ಸಂತೋಷ, ಸಂಭ್ರಮ ಹಾಗೂ ಸಡಗರದ ವಾತಾವರಣವನ್ನು ನಿರ್ಮಿಸಿದೆ. ಮಗನ ಮದುವೆಯ ಖುಷಿಯು ಕ್ರೇಜಿಸ್ಟಾರ್ ಅವರ ಮುಖದಲ್ಲಿ ಕಾಣುತ್ತಿದೆ.

ಈಗಾಗಲೇ ಮನೋರಂಜನ್ ಅವರ ಮದುವೆಯ ಮೆಹಂದಿ ಕಾರ್ಯಕ್ರಮ, ಆರತಕ್ಷತೆ ಕಾರ್ಯಕ್ರಮವು ಬಹಳ ಸಂಭ್ರಮದಿಂದ ನಡೆದಿದೆ. ಆರತಕ್ಷತೆ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ ಡಾಕ್ಟರ್ ಶಿವರಾಜ್ ಕುಮಾರ್ ಅವರು ಭಾಗಿಯಾಗಿದ್ದರು. ಅಲ್ಲದೆ ಖ್ಯಾತ ನಿರೂಪಕ ಅಕುಲ್ ಬಾಲಾಜಿ, ಹಂಸಲೇಖ ದಂಪತಿ, ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಹಾಗೂ ಅವರ ಪತ್ನಿ ಹಾಗೂ ಇನ್ನೂ ಕೆಲವ ಕಲಾವಿದರು ಪಾಲ್ಗೊಂಡು ವಧು ವರನಿಗೆ ಶುಭ ಹಾರೈಸಿದ್ದಾರೆ. ಎರಡು ಕುಟುಂಬದ ಸಮ್ಮುಖದಲ್ಲಿ ಆರತಕ್ಷತೆ ಕಾರ್ಯಕ್ರಮ ಬಹಳ ಸಂಭ್ರಮದಿಂದ ನಡೆದಿದೆ.

ಹೆಣ್ಣಿನ ಕಡೆಯವರು ನಡೆಸಿಕೊಟ್ಟ ಆರತಕ್ಷತೆಯಲ್ಲಿ ಸಿನಿಮಾರಂಗದ ಕೆಲವು ಗಣ್ಯರು ಮಾತ್ರವೇ ಹಾಜರಿದ್ದರು. ಸ್ಯಾಂಡಲ್ವುಡ್ ಕಲಾವಿದರಿಗಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪ್ರತ್ಯೇಕವಾಗಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಅದರಲ್ಲಿ ಚಿತ್ರರಂಗದ ಬಹಳಷ್ಟು ಜನ ಕಲಾವಿದರು ತಂತ್ರಜ್ಞರು ಭಾಗವಹಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ರವಿಚಂದ್ರನ್ ಅವರ ಮಗನದ್ದು ಅರೇಂಜ್ಡ್ ಮ್ಯಾರೇಜ್ ಆಗಿದ್ದು, ರವಿಚಂದ್ರನ್ ಅವರ ಪತ್ನಿಯ ಕಡೆಯಿಂದ ಈ ಸಂಬಂಧ ಬಂದಿದೆ ಎನ್ನಲಾಗಿದೆ.

Leave a Reply

Your email address will not be published.