ಕ್ರಿಕೆಟ್ ಲೋಕದಲ್ಲಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಸ್ಟೈಲ್ಲೇ ಬೇರೆ. ಧೋನಿ ಮೈದಾನಕ್ಕೆ ಕಾಲಿಟ್ಟರೆ ಸಾಕು, ಅವರ ಕ್ಯಾಪ್ಟನ್ಸಿ ಮತ್ತು ಆಟಕ್ಕೆ ಫಿದಾ ಆಗುತ್ತಾರೆ ಕ್ರಿಕೆಟ್ ಅಭಿಮಾನಿಗಳು. ಧೋನಿ ತೆಗೆದುಕೊಳ್ಳುವ ನಿರ್ಣಯಗಳು ಎಲ್ಲರಿಗೂ ಆಶ್ಚರ್ಯವನ್ನು ಉಂಟು ಮಾಡುತ್ತದೆ. ಆದ್ದರಿಂದಲೇ ಧೋನಿ ಯಶಸ್ವೀ ಕ್ಯಾಪ್ಟನ್ ಗಳಲ್ಲಿ ಒಬ್ಬರಾಗಿ ತಮ್ಮದೇ ಆದ ಛಾಪನ್ನು ಮೂಡಿಸುವಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದಾರೆ. ಕ್ರಿಕೆಟ್ ನ ಎಲ್ಲಾ ಫಾರ್ಮ್ಯಾಟ್ ಗಳಿಗೂ ನಿವೃತ್ತಿಯನ್ನು ಘೋಷಣೆ ಮಾಡಿರುವ ಧೋನಿ ಪ್ರಸ್ತುತ ಐಪಿಎಲ್ ನಲ್ಲಿ ಮಾತ್ರ ಧೋನಿ ಆಡುತ್ತಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಆಗಿ ಮುಂದುವರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಧೋನಿ ತಮ್ಮ ಅಭಿಮಾನಿಗಳಿಗೆ ಒಂದು ಶುಭ ಸುದ್ದಿಯನ್ನು ನೀಡಿದ್ದಾರೆ. ಮುಂದಿನ ವರ್ಷ ಕೂಡಾ ತಾನು ಐಪಿಎಲ್ ಆಡಲು ಬಯಸುತ್ತೇನೆ ಎನ್ನುವ ಇಚ್ಛೆಯನ್ನು ಧೋನಿ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ರಾಜಸ್ಥಾನ ಮತ್ತು ಸಿ ಎಸ್ ಕೆ ತಂಡಗಳ ನಡುವೆ ಪಂದ್ಯ ನಡೆದಿತ್ತು. ಪಂದ್ಯದ ಆರಂಭದಲ್ಲಿ ಟಾಸ್ ಗೆದ್ದ ಮಹೇಂದ್ರ ಸಿಂಗ್ ಧೋನಿ ಅವರನ್ನು ಕಾಮೆಂಟೇಟರ್ಬಿ ಇಯಾನ್ ಬಿಷಪ್ ಅವರು ನಿವೃತ್ತಿಯ ಕುರಿತಾಗಿ ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ಧೋನಿ, ತಾನು ಮುಂದಿನ ವರ್ಷ ಆಡುತ್ತೇನೆಯೋ ಅಥವಾ ಇಲ್ಲವೋ ಎನ್ನುವುದನ್ನು ಖಚಿತವಾಗಿ ಈಗಲೇ ಹೇಳಲಾರೆ. ಆದರೆ ಸಿ ಎಸ್ ಕೆ ಪರವಾಗಿ ಚೆನ್ನೈ ಹೋಂ ಗ್ರೌಂಡ್ ಛಪಾಕ್ ನಲ್ಲಿ ಅಭಿಮಾನಿಗಳ ಮುಂದೆ ಆಡಬೇಕು ಎಂದು ಕೊಂಡಿದ್ದೇನೆ. ಇದೇ ನನ್ನ ಕೊನೆಯ ಐಪಿಎಲ್ ಎಂದು ಹೇಳಿದರೆ ಅದು ಸಿ ಎಸ್ ಕೆ ಅಭಿಮಾನಿಗಳಿಗೆ ಮೋಸ ಮಾಡಿದಂತೆ ಆಗುತ್ತದೆ. ಆದ್ದರಿಂದಲೇ 2023 ರ ಐಪಿಎಲ್ ನಲ್ಲಿ ಹಳದಿ ಜರ್ಸಿಯಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತೇನೆ ಎಂದು ತಮ್ಮ ಮನಸ್ಸಿನ ಮಾತನ್ನು ಹೇಳಿದ್ದಾರೆ.
ಮುಂದಿನ ವರ್ಷ ಐಪಿಎಲ್ ದೇಶದ ಎಲ್ಲಾ ನಗರಗಳಲ್ಲೂ ನಡೆಯಲಿದೆ. ಆಗ ತವರಿನಲ್ಲಿ ಚೆನ್ನೈ ತಂಡದ ಅಭಿಮಾನಿಗಳ ನಡುವೆ ನಿವೃತ್ತಿಯನ್ನು ಪಡೆಯುವುದು ಉತ್ತಮ ಎನಿಸುತ್ತದೆ. ಈ ಬಗ್ಗೆ ಈಗಲೇ ಏನೂ ಹೇಳಲಾರೆ ಎಂದು ಧೋನಿ ಉತ್ತರಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಧೋನಿ ಚೆನ್ನೈ ತಂಡಕ್ಕೆ ನಾಲ್ಕು ಬಾರಿ ಪ್ರಶಸ್ತಿಯನ್ನು ಗೆದ್ದಿದ್ದಾರೆ ಮತ್ತು ಅವರು ಚೆನ್ನೈನಲ್ಲಿ ಎರಡು ಬಾರಿ ಚಾಂಪಿಯನ್ ಲೀಗ್ ಅನ್ನು ಗೆದ್ದಿದ್ದಾರೆ.