ಕ್ಯೂಟ್ ಕಪಲ್ ರಿತೇಶ್ ಜೆನಿಲಿಯಾ ಕಡೆಯಿಂದ ಕಿಚ್ಚ ಸುದೀಪ್ ಗೆ ಸಿಕ್ತು ಭರ್ಜರಿ ಗಿಫ್ಟ್: ಖುಷಿ ಹಂಚಿಕೊಂಡ ಕಿಚ್ಚ

Written by Soma Shekar

Published on:

---Join Our Channel---

ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರು ಬಹುಭಾಷಾ ನಟ. ಇವರಿಗೆ ಕನ್ನಡ ಮಾತ್ರವೇ ಅಲ್ಲದೇ ಅನ್ಯ ಸಿನಿಮಾ ರಂಗಗಳ ಸ್ಟಾರ್ ಗಳು ಸಹಾ ಆಪ್ತ ಗೆಳೆಯರಾಗಿದ್ದಾರೆ. ಉತ್ತಮ ಬಾಂಧವ್ಯವನ್ನು ಸುದೀಪ್ ಅವರು ಹೊಂದಿದ್ದಾರೆ. ಸುದೀಪ್ ಅವರ ಆತ್ಮೀಯ ಸ್ನೇಹಿತರಲ್ಲಿ ಬಾಲಿವುಡ್ ನ ಕ್ಯೂಟ್ ಕಪಲ್ ಎನಿಸಿಕೊಂಡಿರುವ ನಟ ರಿತೇಶ್ ದೇಶ್ಮುಖ್ ಹಾಗೂ ನಟಿ ಜೆನಿಲಿಯಾ ಕೂಡಾ ಸೇರಿದ್ದಾರೆ.‌ ಈ ಜೋಡಿ ಇದೀಗ ಕಿಚ್ಚ ಸುದೀಪ್ ಅವರಿಗೆ ಒಂದು ವಿಶೇಷವಾದ ಉಡುಗೊರೆಯನ್ನು ಕಳುಹಿಸಿದೆ. ಈ ಮೊದಲು ಕೂಡಾ ಈ ಜೋಡಿ ಕಿಚ್ಚ ಸುದೀಪ್ ಅವರೊಂದಿಗೆ ಕಾಣಿಸಿಕೊಂಡಿತ್ತು.

ಇದೀಗ ಜೆನಿಲಿಯಾ, ರಿತೇಶ್ ದಂಪತಿ ಕಳುಹಿಸಿರುವ ವಿಶೇಷ ಉಡುಗೊರೆಯ ಬಗ್ಗೆ ನಟ ಕಿಚ್ಚ ಸುದೀಪ್ ಅವರು ಮಾಹಿತಿ ಹಂಚಿಕೊಂಡಿದ್ದು, ಫೋಟೋಗಳನ್ನು ಸಹಾ ಶೇರ್ ಮಾಡಿಕೊಂಡು ಖುಷಿ ಪಟ್ಟಿದ್ದಾರೆ. ರಿತೇಶ್ ಹಾಗೂ ಜೆನಿಲಿಯಾ ನೀಡಿರುವ ಉಡುಗೊರೆ ಬಗ್ಗೆ ಸುದೀಪ್ ಅವರು ಸಂತಸವನ್ನು ವ್ಯಕ್ತಪಡಿಸುತ್ತಾ ಟ್ವೀಟ್ ಮಾಡಿದ್ದಾರೆ ಹಾಗೂ ರಿತೇಶ್, ಜೆನಿಲಿಯಾ ದಂಪತಿಗೆ ಶುಭಾಶಯವನ್ನು ಸಹಾ ಕೋರಿದ್ದಾರೆ.

ಸುದೀಪ್ ಅವರು ತಮ್ಮ ಟ್ವೀಟ್ ನಲ್ಲಿ, “ಇದು ತುಂಬಾ ಮುದ್ದಾದ ಸರ್ಪ್ರೈಸ್,ತುಂಬಾ ಇಷ್ಟವಾಯಿತು. ನಿಮ್ಮಿಬ್ವರಿಗೂ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ರಿತೇಶ್ ಜೆನಿಲಿಯಾ ದಂಪತಿ ಕಳುಹಿಸಿರುವ ವಿಶೇಷ ಉಡುಗೊರೆಯ ಫೋಟೋಗಳನ್ನು ಸಹಾ ಅವರು ಶೇರ್ ಮಾಡಿಕೊಂಡಿದ್ದಾರೆ. ಇಮ್ಯಾಜಿನ್ ಮೀಟ್ ಎನ್ನುವ ಹೆಸರಿನ ಜೊತೆಗೆ ರಿತೇಶ್ ಹಾಗೂ ಜೆನಿಲಿಯಾ ದಂಪತಿ ಆಹಾರ ಉದ್ಯಮಕ್ಕೆ ತಮ್ಮ ಅಡಿಯನ್ನು ಇರಿಸಿದ್ದಾರೆ.

ಈ ಉದ್ಯಮದ ಮೂಲ ಧ್ಯೇಯವು ಪ್ಲಾಂಟ್ ಬೇಸ್ಡ್ ಮೀಟ್ ಅಂದರೆ ಮಾಂಸಾಹಾರದ ಹಾಗೆ ಇರುವ ಸಸ್ಯಾಹಾರವಾಗಿದೆ. ಈ ಉದ್ಯಮ ಈ ದಂಪತಿಯ ಮೂರು ವರ್ಷದ ಕನಸಾಗಿದ್ದು, ಇದೀಗ ಅದನ್ನು ಸಾಕಾರ ಮಾಡುತ್ತಿದ್ದು, ತಮ್ಮ ಈ ಹೊಸ ಉದ್ಯಮದ ಆಹಾರದ ರುಚಿಯನ್ನು ಸುದೀಪ್ ಅವರಿಗೂ ತೋರಿಸಲು ದಂಪತಿ ಸುದೀಪ್ ಅವರಿಗೆ ವಿಶೇಷ ಉಡುಗೊರೆಯನ್ನು ಕಳುಹಿಸಿದ್ದಾರೆ. ಈ ಹಿಂದೆ ಈ ದಂಪತಿ ಸುದೀಪ್ ಅವರ ಮನೆಗೆ ಭೇಟಿ ನೀಡಿದ್ದಾಗ ಸುದೀಪ್ ಅವರು ಸಹಾ ಭರ್ಜರಿ ಔತಣ ಕೂಣ ಏರ್ಪಾಟು ಮಾಡಿದ್ದರು.

Leave a Comment