ಅಕ್ಟೊಬರ್ ಎರಡು ಬಹುಶಃ ಬಾಲಿವುಡ್ ನಟ ಶಾರೂಖ್ ಖಾನ್ ಜೀವನದಲ್ಲಿ ಇನ್ಮುಂದೆ ಮರೆಯಲಾಗದ ದಿನ ಆದ್ರೂ ಆಗಬಹುದು. ಏಕೆಂದರೆ ತಾನು ಇಷ್ಟು ವರ್ಷ ಗಳಿಸಿದ್ದ ಹೆಸರಿಗೆ ಮಸಿ ಬಳಿಯುವಂತಹ ಘಟನೆ ಆ ದಿನ ನಡೆದು ಹೋಗಿತ್ತು. ಮುಂಬೈ ಟು ಗೋವಾ ಹೋಗುತ್ತಿದ್ದ ಐಶಾರಾಮೀ ಕ್ರೂಸ್ ಹಡಗಿನಲ್ಲಿ ಡ್ರ ಗ್ಸ್ ಪಾರ್ಟಿಯ ಸುಳಿವು ಪಡೆದು, ಅದರ ಮೇಲೆ ಎನ್ ಸಿ ಬಿ ನಡೆಸಿದ ಧಾಳಿಯಲ್ಲಿ ಬಾಲಿವುಡ್ ನ ಬಾದ್ಷಾ ಎನ್ನುವ ಹೆಗ್ಗಳಿಕೆಯನ್ನು ಪಡೆದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್, ಸ್ನೇಹಿತರ ಒಟ್ಟಿಗೆ ಎನ್ ಸಿ ಬಿ ಗೆ ಸಿಕ್ಕ ಬಿದ್ದ.
ಈ ವಿಷಯ ದೊಡ್ಡ ಸಂಚಲನ ಸೃಷ್ಟಿಸಿತು. ಬಾಲಿವುಡ್ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾ ಮೂಲಕ ಇದನ್ನು ಖಂ ಡಿ ಸಿದರು. ಶಾರೂಖ್ ಖಾನ್ ಬೆಂಬಲಕ್ಕೆ ನಿಂತರು. ಆದರೂ ಸಹಾ ಜಾಮೀನು ಪಡೆಯುವಲ್ಲಿ, ಮಗನನ್ನು ಹೊರ ತರುವಲ್ಲಿ ಶಾರುಖ್ ಖಾನ್ ಗೆ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಜಾಮೀನು ಅರ್ಜಿ ವಜಾ ಮಾಡಿದ ಕೋರ್ಟ್ ಆರ್ಯನ್ ಜೊತೆಗೆ ಆತನ ಸ್ನೇಹಿತರ ನ್ಯಾಯಾಂಗ ಬಂಧನವನ್ನು ಹದಿನಾಲ್ಕು ದಿನಗಳವರೆಗೆ ವಿಸ್ತರಿಸಿತು.
ಇನ್ನು ಇವೆಲ್ಲವುಗಳ ನಡುವೆ ಶಾರೂಖ್ ಪುತ್ರ ಎನ್ ಸಿ ಬಿ ಅಧಿಕಾರಿಗಳೊಡನೆ ಕೌನ್ಸಿಲಿಂಗ್ ನ ವೇಳೆ ತಿಳಿಸಿದ್ದಾನೆ ಎನ್ನುವ ವಿಚಾರಗಳು ಇದೀಗ ಸುದ್ದಿಯಾಗಿವೆ. ಕೌನ್ಸಿಲಿಂಗ್ ವೇಳೆಯಲ್ಲಿ ಆರ್ಯನ್ ಖಾನ್ ತಾನು ಹೊರಗೆ ಬಂದ ಮೇಲೆ ಬಡವರು ಮತ್ತು ಕೆಳ ವರ್ಗದವರ ಏಳಿಗೆಗೆ ಸಹಾಯ ಮಾಡುವುದಾಗಿ ಹೇಳಿದ್ದಾನೆ ಎನ್ನಲಾಗಿದೆ. ಅಷ್ಟು ಮಾತ್ರವೇ ಅಲ್ಲದೇ ತನ್ನ ಹೆಸರಿಗೆ ಕ ಳಂ ಕ ತರುವಂತಹ ಕೆಲಸ ಇನ್ಮುಂದೆ ಮಾಡುವುದಿಲ್ಲ, ನೀವು ಹೆಮ್ಮೆ ಪಡುವಂತಹ ಕೆಲಸವನ್ನು ಮಾಡುತ್ತೇನೆ ಎನ್ನುವ ಭರವಸೆಯನ್ನು ನೀಡಿದ್ದಾನೆ ಎನ್ನಲಾಗಿದೆ.
ಪ್ರಸ್ತುತ ಜೈಲಿನಲ್ಲಿ ಇರುವ ಆರ್ಯನ್ ಖಾನ್ ಗೆ ಜೈಲು ಊಟ ಸೇವನೆ ಸಹಾ ಕಷ್ಟವಾಗಿದೆ ಎನ್ನಲಾಗಿದೆ. ಅಲ್ಲದೇ ಮನೆಯಿಂದ ಶಾರುಖ್ ಖಾನ್ ಮಗನಿಗೆ ನಿಗಮ ಗಳ ಅನುಸಾರ 4500 ರೂ.ಗಳ ಮನಿ ಆರ್ಡರ್ ಕಳಿಸಿದ್ದು, ಅದರಿಂದ ಆರ್ಯನ್ ಜೈಲಿನ ಕ್ಯಾಂಟೀನ್ ನಿಂದ ತನಗೆ ಬೇಕಾದ ಆಹಾರವನ್ನು ತರಿಸಿಕೊಂಡು ತಿನ್ನುವ ಅವಕಾಶವಿದೆ ಎಂದು ತಿಳಿದು ಬಂದಿದೆ. ಮಗನನ್ನು ಹೇಗಾದರೂ ಹೊರ ತರಲು ಶಾರುಖ್ ಬಹಳ ಪ್ರಯತ್ನ ಪಡುತ್ತಿದ್ದಾರೆ.