ಕೋವಿಡ್ ಅಬ್ಬರಕ್ಕೆ 18 ಕೋಟಿ ನಷ್ಟ ಎದುರಿಸಿದ RRR ಸಿನಿಮಾ ನಿರ್ಮಾಪಕರು: ಇಷ್ಟು ನಷ್ಟ ಆಗಿದ್ದು ಹೇಗೆ??
ದಕ್ಷಿಣ ಸಿನಿರಂಗದ ಸ್ಟಾರ್ ನಟರು ರಾಮ್ ಚರಣ್ ತೇಜಾ ಮತ್ತು ಜೂನಿಯರ್ ಎನ್ ಟಿ ಆರ್ ಒಂದು ಕಡೆ, ಇನ್ನೊಂದು ಕಡೆ ಸ್ಟಾರ್ ಮೇಕರ್ ನಿರ್ದೇಶಕ ರಾಜಮೌಳಿ, ಇವರ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಸಿನಿಮಾ ಆರ್ ಆರ್ ಆರ್ ಸದ್ಯಕ್ಕೆ ಮಾದ್ಯಮ ಸುದ್ದಿಗಳ ಹೆಡ್ಲೈನ್ ಆಗಿದೆ. ಬಾಲಿವುಡ್ ನಲ್ಲಿ ಸಹಾ ಈ ಸಿನಿಮಾದ ಆಗಮನ ಒಂದು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಜನವರಿ 7 ಕ್ಕೆ ತ್ರಿಬಲ್ ಆರ್ ತೆರೆ ಮೇಲೆ ಬರಲು ಭರ್ಜರಿ ಸಿದ್ಧತೆ ನಡೆದಿತ್ತು. ಆದರೆ ಕೊರೊನಾ ತಂದ ಆ ತಂ ಕ ದಿಂದಾಗಿ ಈಗ ಸಿನಿಮಾ ಬಿಡುಗಡೆ ಮತ್ತೊಮ್ಮೆ ಮುಂದೂಡಲ್ಪಟ್ಟಿದೆ.
ಇನ್ನು ಸಿನಿಮಾ ಬಿಡುಗಡೆ ಮುಂದೂಡಿಕೆ ಆಗಿದ್ದರ ಪರಿಣಾಮ ಕೋಟಿಗಳ ಮೊತ್ತದಲ್ಲಿ ನಷ್ಟ ಕೂಡಾ ಎದುರಾಗಿದೆ ಎನ್ನುವ ವಿಷಯವೊಂದು ಸುದ್ದಿಯಾಗಿದೆ. ಹೌದು ಬಾಲಿವುಡ್ ಹಂಗಾಮ ಮಾಡಿರುವ ಒಂದು ವರದಿಯ ಪ್ರಕಾರ ಚಿತ್ರ ತಂಡವು ಸಿನಿಮಾ ಪ್ರಮೋಷನ್ ಗಾಗಿ ಸುಮಾರು 18 ರಿಂದ 20 ಕೋಟಿ ರೂ.ಗಳನ್ನು ತೊಡಗಿಸಿತ್ತು ಎನ್ನಲಾಗಿದೆ. ಈ ಬಾರಿ ಸಿನಿಮಾ ಬಿಡುಗಡೆಯ ಬಗ್ಗೆ ಒಂದು ಗಟ್ಟಿ ನಿರ್ಧಾರವನ್ನು ಮಾಡಿದ್ದ ನಿರ್ದೇಶಕ ರಾಜಮೌಳಿ ಅವರಿಗೆ ಅವರ ಸಿನಿಮಾ ತಂಡ ಕೂಡಾ ಸಾಥ್ ನೀಡಿತ್ತು.
ಆದರೆ ಕೋವೀಡ್ 19 ಸಾಂಕ್ರಾಮಿಕವು ಹೆಚ್ಚಿದ ಪರಿಣಾಮದಿಂದ ಉಂಟಾದ ಪರಿಸ್ಥಿತಿಯ ಮುಂದೆ ರಾಜಮೌಳಿ ತಲೆಬಾಗಲೇಬೇಕಾಯಿತು. ಇನ್ನು ಪ್ರಮೋಷನ್ ಗಾಗಿ ಮಾಡಿದ 18-20 ಕೋಟಿ ರೂ.ಗಳ ನಷ್ಟವನ್ನು ನಿರ್ಮಾಪಕರು ಎದುರಿಸಬೇಕಾಗಿದೆ ಎನ್ನಲಾಗಿದೆ. ಅಲ್ಲದೇ ಆಂಧ್ರದ ಹೊರಗೆ ಸಿನಿಮಾ ಪ್ರಮೋಷನ್ ಗಾಗಿ ನಟರ ಅಭಿಮಾನಿಗಳನ್ನು ಕರೆದುಕೊಂಡು ಹೋಗಲು ಸಾರಿಗೆಗಾಗಿ ಸುಮಾರು 2-3 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎನ್ನಲಾಗಿದೆ.
ಇಬ್ಬರು ಸ್ಟಾರ್ ನಟರಿಗೆ ಬಾಲಿವುಡ್ ವಲಯದಲ್ಲಿ ಅಷ್ಟೊಂದು ಅಭಿಮಾನಿ ಬಳಗ ಇಲ್ಲ ಎನ್ನುವುದನ್ನು ಅರಿತಿದ್ದ ನಿರ್ದೇಶಕ ರಾಜಮೌಳಿ ಅವರು ಆಂಧ್ರ ದಿಂದ ಹೊರಗೆ ನಡೆದ ಪ್ರಮೋಷನ್ ಗಳ ವೇಳೆ ಅಭಿಮಾನಿಗಳನ್ನು ಆಂಧ್ರದಿಂದ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಬಾಲಿವುಡ್ ನ ಕಿರುತೆರೆಯ ಹಲವು ಪ್ರಮುಖ ಶೋ ಗಳಲ್ಲಿ ಆರ್ ಆರ್ ಆರ್ ತಂಡವು ಭಾಗವಹಿಸಿ ತಮ್ಮ ಸಿನಿಮಾದ ಪ್ರಮೋಷನ್ ಮಾಡಿತ್ತು. ಬಿಗ್ ಬಾಸ್ ನಲ್ಲಿ ಕೂಡಾ ಸಲ್ಮಾನ್ ಜೊತೆಗೆ ತಂಡ ಸಂಭ್ರಮಿಸಿತ್ತು.