‘ಕೋಳಿ ಕಾಳಗ’ದ ವಿಚಾರದಲ್ಲಿ ಮಹತ್ವದ ನಿರ್ಣಯ ಘೋಷಿಸಿದ ಮದ್ರಾಸ್ ಹೈಕೋರ್ಟ್

Written by Soma Shekar

Published on:

---Join Our Channel---

ನಮ್ಮ ದೇಶದಲ್ಲಿ ಗ್ರಾಮೀಣ ಭಾಗಗಗಳಲ್ಲಿ ಕೆಲವು ಆಟಗಳು ಸ್ಥಳೀಯರು ಮನರಂಜನೆಯ ಮೂಲವಾಗಿದೆ. ಅದರಲ್ಲೂ ಕೆಲವು ಆಟಗಳಲ್ಲಿ ಪ್ರಾಣಿ ಪಕ್ಷಿಗಳನ್ನು ಬಳಸುವುದು ಸಹಾ ನೋಡಬಹುದು. ಆದರೆ ಕಾಲಾನುಕ್ರಮದಲ್ಲಿ ಈ ಆಟಗಳು ಬೆ ಟ್ಟಿಂಗ್ ಹಾಗೂ ಅ ಪ ರಾ ಧ ಗಳಿಗೂ ಅವಕಾಶ ಮಾಡಿಕೊಟ್ಟ ಕಾರಣದಿಂದ ಅವುಗಳನ್ನು ಆಡುವುದು ಹಾಗೂ ಆಡಿಸುವುದನ್ನು ಕಾನೂನಿನ ಮೂಲಕ ನಿಷೇಧವೆಂದು ಸರ್ಕಾರಗಳು ಘೋಷಣೆ ಮಾಡಿದವು. ಆದರೆ ಕೆಲವು ಮಾರ್ಪಾಡುಗಳನ್ನು ಮಾಡಿ ಅವುಗಳನ್ನು ಆಡಲು ಅವಕಾಶ ನೀಡಬೇಕೆಂಬುದು ಕೆಲವರ ಮನವಿಗಳಾಗಿದೆ.

ತಮಿಳು ನಾಡಿನಲ್ಲಿ ಇಂತಹ ಆಟಗಳಲ್ಲಿ ಕೋಳಿ ಕಾಳಗ ಒಂದಾಗಿದೆ. ಇದೇ ಜನವರಿ 17 ರಂದು ಥೇಣಿ ಜಿಲ್ಲೆಯ ಉತ್ತಮಪಾಲೆಯಂ ನಲ್ಲಿ ಕೋಳಿ ಕಾಳಗವನ್ನು ನಡೆಸಲು ಸಿದ್ಧತೆಗಳು ನಡೆದಿದ್ದವು. ಆದರೆ ಇದರ ವಿ ವಾ ದವು ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಕೋಳಿ ಕಾಳಗಕ್ಕೆ ಅವಕಾಶವನ್ನು ನೀಡಬಾರದು ಎನ್ನುವ ಕೂಗು ಕೇಳಿ ಬಂದಿತ್ತು. ಆದರೆ ಈ ಪ್ರಕರಣವನ್ನು ವಿಚಾರಣೆ ಮಾಡಿದ ಮದ್ರಾಸ್ ಹೈಕೋರ್ಟ್ ಇದೀಗ ತನ್ನ ನಿರ್ಣಯವನ್ನು ಪ್ರಕಟಣೆ ಮಾಡುವ ಮೂಲಕ ಈ ವಿ ವಾ ದಕ್ಕೆ ಪರಿಹಾರವನ್ನು ನೀಡಿದೆ.

ಹೌದು ಮದ್ರಾಸ್ ಹೈಕೋರ್ಟ್ ನಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಿ.ಆರ್. ಸ್ವಾಮಿನಾಥನ್ ಅವರು ಕೋಳಿ ಕಾಳಗದ ಸಂದರ್ಭದಲ್ಲಿ ಹುಂಜಗಳ ಕಾಲಿಗೆ ಬ್ಲೇ ಡ್ ಅಥವಾ ಚಾ ಕುಗಳನ್ನು ಕಟ್ಟಬಾರದು ಎಂದು ಸೂಚನೆಯನ್ನು ನೀಡಿದ್ದಾರೆ. ಕಾದಾಡುವ ಕೋಳಿಗಳು ಜೀವಂತವಾಗಿರಬೇಕು ಎಂದು ಸೂಚನೆಯನ್ನು ನೀಡಿದ್ದಾರೆ. ತಮಿಳು ನಾಡಿನಲ್ಲಿ ಪೊಂಗಲ್ ವೇಳೆಯಲ್ಲಿ ಇಂತಹ ಕ್ರೀಡೆಗಳು ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ವಿಶೇಷ ಪ್ರಾಧಾನ್ಯತೆಯನ್ನು ನೀಡಲಾಗಿದೆ.

Leave a Comment