ಸಾಮಾಜಿಕ ಜಾಲ ತಾಣಗಳಲ್ಲಿ ದಿನವೊಂದಕ್ಕೆ ಅದೆಷ್ಟೋ ಫೋಟೋ ಗಳು ಹಾಗೂ ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಚಿತ್ರ ವಿಚಿತ್ರ ಘಟನೆಗಳ ಕುರಿತಾಗಿ ವೈವಿದ್ಯಮಯ ಎನಿಸುವ ಫೋಟೋಗಳು ಹಾಗೂ ವೀಡಿಯೋಗಳು ಬಹಳ ಬೇಗ ವೈರಲ್ ಆಗಿ ಬಿಡುತ್ತವೆ. ಈಗ ಇದೇ ರೀತಿ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಲ್ಲಿ ಪ್ರಯಾಣಿಸುತ್ತಿದ್ದು ವ್ಯಕ್ತಿಯೊಬ್ಬರ ಜೊತೆಗೆ ಇದ್ದಂತಹ ಕೋಳಿಗೂ ಸಹಾ ಕಂಡಕ್ಟರ್ ಟಿಕೆಟ್ ಅನ್ನು ನೀಡಿದ್ದು, ಈ ವಿಷಯ ಹಾಗೂ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಸಾಗಿದ್ದು, ಕಂಡಕ್ಟರ್ ಕೋಳಿಗೂ ಟಿಕೆಟ್ ನೀಡಿದ ವರ್ತನೆಯನ್ನು ಕಂಡು ನೆಟ್ಟಗರು ಆಶ್ಚರ್ಯ ಪಟ್ಟಿರುವುದು ಮಾತ್ರವೇ ಅಲ್ಲದೇ ವೈವಿದ್ಯಮಯ ಪ್ರತಿಕ್ರಿಯೆಗಳನ್ನು ಸಹಾ ನೀಡುತ್ತಿದ್ದಾರೆ.
ಇನ್ನು ಘಟನೆಯ ವಿವರಕ್ಕೆ ಹೋದರೆ, ಚಿಕ್ಕಬಳ್ಳಾಪುರ ಘಟಕದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಪೆರೇಸಂದ್ರ ದಿಂದ ವ್ಯಕ್ತಿಯೊಬ್ಬರು ಗುಡಿಬಂಡೆ ತಾಲೂಕಿನ ಸೋಮೇಶ್ವರಕ್ಕೆ ಪ್ರಯಾಣವನ್ನು ಬೆಳೆಸಿದ್ದರು ಎನ್ನಲಾಗಿದೆ. ಈ ವೇಳೆ ಅವರು ತಮ್ಮ ಜೊತೆ ಕೋಳಿಯೊಂದನ್ನು ಸಹಾ ಕೊಂಡೊಯ್ಯುತ್ತಿದ್ದರು. ಪ್ರಯಾಣಿಕ ತನ್ನ ಜೊತೆ ಕೋಳಿಯನ್ನು ಸಹಾ ಕೊಂಡೊಯ್ಯುವುದನ್ನು ನೋಡಿದ ಬಸ್ ಕಂಡೆಕ್ಟರ್ ಕೋಳಿಗೆ ಐದು ರೂ. ಟಿಕೆಟ್ ನೀಡಿದ್ದಾರೆ. ಹೀಗೆ ಕೋಳಿಗೂ ಟಿಕೆಟ್ ನೀಡಿದ್ದರಿಂದ ಅಸಮಾಧಾನಗೊಂಡ ಅದರ ಮಾಲೀಕ ಕೋಳಿಯನ್ನು ಸೀಟ್ ಮೇಲೆ ಕೂರಿಸಿಕೊಂಡು ಪ್ರಯಾಣ ಮಾಡಿದ್ದಾರೆ.
ಪ್ರಯಾಣಿಕರು ಕೋಳಿಯನ್ನು ಎತ್ತಿಕೊಂಡು ಸೀಟು ಬಿಡುವ ಹಾಗೆ ಕೇಳಿದ್ದಾರೆ. ಆಗ ಆ ಸಂದರ್ಭದಲ್ಲಿ ಕೋಳಿಗೂ ಟಿಕೆಟ್ ಪಡೆದಿದ್ದು, ಅದಕ್ಕೆ ಅದನ್ನು ಪಕ್ಕದಲ್ಲಿ ಕೂರಿಸಿಕೊಂಡಿದ್ದೇನೆ ಎಂದು ಉತ್ತರ ನೀಡಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ, ಇದು ಟ್ರೋಲ್ ಗೂ ಕಾರಣವಾಗಿದೆ. ಕೋಳಿಗೆ ಅರ್ಧ ಟಿಕೆಟ್ ನೀಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿದೆ. ಕೆಲವರು ಇದನ್ನು ಹಾಸ್ಯವಾಗಿ ಪರಿಗಣಿಸದರೆ, ಇನ್ನೂ ಕೆಲವರು ಕಂಡಕ್ಟರ್ ವರ್ತನೆಯ ಬಗ್ಗೆ ಟೀಕೆಗಳನ್ನು ಸಹಾ ಮಾಡಿದ್ದಾರೆ.