ನಟಿ ಸಾಯಿ ಪಲ್ಲವಿ ತಮ್ಮ ಸರಳತೆ, ಸಿನಿಮಾ ಪಾತ್ರಗಳು, ಡ್ಯಾನ್ಸ್ ವಿಚಾರವಾಗಿ ಸಾಕಷ್ಟು ಸದ್ದು, ಸುದ್ದಿಯಾಗುತ್ತಿದ್ದರು. ಆದರೆ ವಿರಾಟ ಪರ್ವಂ ಸಿನಿಮಾದ ಪ್ರಚಾರದ ವೇಳೆ ನಟಿ ಸಾಯಿ ಪಲ್ಲವಿ ಆಡಿದ ಮಾತೊಂದು ದೇಶ ವ್ಯಾಪಿಯಾಗಿ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿ, ವಿ ವಾ ದ ಕ್ಕೆ ಕಾರಣವಾಯಿತು. ನಟಿ ಸಾಯಿ ಪಲ್ಲವಿ ಕುರಿತಾಗಿ ಅನೇಕರು ಸೋಶಿಯಲ್ ಮೀಡಿಯಾಗಳಲ್ಲಿ ಅಸಮಾಧಾನವನ್ನು ಹೊರಹಾಕಿದರು. ನಟಿಯ ಬಗ್ಗೆ ಸಿಟ್ಟನ್ನು ವ್ಯಕ್ತಪಡಿಸಿದರು. ನಟಿ ಸಾಯಿ ಪಲ್ಲವಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ಹೇಳಿದ ಒಂದು ಮಾತು ದೊಡ್ಡ ವಿ ವಾ ದ ಹುಟ್ಟಿ ಹಾಕಿತ್ತು.
ನಟಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಹೇಗೆ ಹಿಂ ಸೆ ಮಾಡಲಾಯಿತು ಎಂದು ತೋರಿಸಲಾಗಿದೆ. ಕೋವಿಡ್ ಸಮಯದಲ್ಲಿ ಗಾಡಿಯಲ್ಲಿ ವ್ಯಕ್ತಿಯೊಬ್ಬ ಹಸುವನ್ನು ಸಾಗಿಸುತ್ತಿದ್ದು, ಆಗ ವಾಹನ ಚಾಲಕ ಮುಸ್ಲಿಂ ಎನ್ನುವ ಕಾರಣಕ್ಕೆ ಆತನ ಮೇಲೆ ಹ ಲ್ಲೆ ಮಾಡಲಾಗಿತ್ತು. ಜೈ ಶ್ರೀ ರಾಮ್ ಎನ್ನುವ ಘೋಷಣೆ ಕೂಗಲಾಯಿತು. ಈ ಘಟನೆಗೂ ಕಾಶ್ಮೀರದಲ್ಲಿ ನಡೆದ ಘಟನೆಗಳಿಗೂ ವ್ಯತ್ಯಾಸವೇನಿಲ್ಲ ಎನ್ನುವ ಹೇಳಿಕೆ ನೀಡಿ ಅಸಂಖ್ಯಾತ ಮಂದಿಯ ಸಿಟ್ಟಿಗೆ ಕಾರಣರಾಗಿದ್ದರು.
ಈ ಘಟನೆಯ ನಂತರ ನಟಿಯ ಮೇಲೆ ಹಿಂದೂ ಪರ ಸಂಘಟನೆಗಳು ದೂರುಗಳನ್ನು ದಾಖಲಿಸಿದ್ದವು. ಈ ವಿಚಾರದಲ್ಲಿ ನಟಿಗೆ ನೋಟೀಸ್ ನೀಡಲಾಗಿತ್ತು. ಆದರೆ ನಟಿ ಸಾಯಿಪಲ್ಲವಿ ತಮಗೆ ನೀಡಿರುವ ನೋಟೀಸ್ ಕಾನೂನು ಬಾಹಿರ, ಹಾಗಾಗಿ ಅವುಗಳನ್ನು ರದ್ದು ಮಾಡಬೇಕೆಂದು ಕೋರ್ಟ್ ನ ಮೊರೆ ಹೋಗಿದ್ದರು. ಆದರೆ ಇದೀಗ ತೆಲಂಗಾಣ ಹೈಕೋರ್ಟ್ ನಟಿಯ ಮನವಿಯನ್ನು ತಿರಸ್ಕರಿಸಿದೆ, ಕೋರ್ಟ್ ಗೆ ಹಾಜರಾಗಬೇಕೆಂದು ಆದೇಶವನ್ನು ನೀಡಿದೆ.
ಹೈದರಾಬಾದ್ ನಲ್ಲಿ ಬಜರಂಗದಳದ ಸದಸ್ಯ ಅಖಿಲ್ ಎನ್ನುವವರು ಸುಲ್ತಾನ್ ಬಜಾರ್ ನಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಅವರಿಗೆ ದೂರನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಟಿಗೆ ನೋಟೀಸ್ ನೀಡಲಾಗಿತ್ತು. ನಟಿ ನೋಟೀಸ್ ರದ್ದುಗೊಳಿಸುವಂತೆ ನ್ಯಾಯಾಲಯದ ಮುಂದೆ ಬೇಡಿಕೆ ಇಟ್ಟಿದ್ದರು. ಆದರೆ ನ್ಯಾಯಮೂರ್ತಿ ಕನ್ನೆಗಂಟಿ ಲಲಿತಾ ಈ ಮನವಿಯನ್ನು ತಿರಸ್ಕರಿಸಿದ್ದು, ಸತ್ಯದ ವಿಚಾರಣೆಗಾಗಿ ಕೋರ್ಟ್ ಗೆ ನಟಿಯು ಹಾಜರಾಗಬೇಕು ಎಂದು ನ್ಯಾಯಮೂರ್ತಿ ಅವರು ಸೂಚನೆ ನೀಡಿದ್ದಾರೆ.