ಕೋಪದಿಂದ ರೊಚ್ಚಿಗೆದ್ದ ಸನ್ನಿ ಲಿಯೋನಿ, ವ್ಯಕ್ತಿಯೊಬ್ಬನಿಗೆ ಚಪ್ಪಲಿಯಿಂದ ಹೊಡೆದಿದ್ದೇಕೆ??

Entertainment Featured-Articles Movies News Viral Video

ಬಾಲಿವುಡ್ ನ ಸುಂದರಾಂಗಿ, ಮೋಹಕ ನಟಿ ಸನ್ನಿ ಲಿಯೋನಿ ಕೇವಲ ಬಾಲಿವುಡ್ ಸಿನಿಮಾಗಳು ಮಾತ್ರವೇ ಅಲ್ಲದೇ ಅನ್ಯ ಭಾಷೆಗಳಲ್ಲಿ ಸಹಾ ನಟಿಸುವ ಮೂಲಕ ಬಹುಭಾಷಾ ನಟಿಯಾಗಿ ಅವರು ಹೆಸರನ್ನು ಪಡೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿರುವ ನಟ ಸನ್ನಿ ಆಗಾಗ ಒಳ್ಳೊಳ್ಳೆ ಫೋಟೋಗಳು ಹಾಗೂ ವೀಡಿಯೋಗಳನ್ನು ಶೇರ್ ಮಾಡಿಕೊಂಡು ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ನೀಡುವ ಮೂಲಕ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿ ಇರುತ್ತಾರೆ. ಸನ್ನಿ ಅವರ ಫೋಟೋ ಹಾಗೂ ವೀಡಿಯೋಗಳು ಬಹು ಬೇಗ ವೈರಲ್ ಸಹಾ ಆಗುತ್ತವೆ.

ಇದೀಗ ಸನ್ನಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡುವಂತಹ ಒಂದು ವೀಡಿಯೋ ಶೇರ್ ಮಾಡಿಕೊಂಡಿದ್ದು, ಈ ವೀಡಿಯೋ ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ಸಹಾ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ ಹಾಗೂ ವೀಡಿಯೋ ನೋಡಿದ ನಂತರ ವೈವಿದ್ಯಮಯ ಕಾಮೆಂಟ್ ಗಳ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ಸಹಾ ನೀಡಿದ್ದಾರೆ ಸನ್ನಿ ಲಿಯೋನಿ. ಹಾಗಾದರೆ ಇಷ್ಟಕ್ಕೂ ಆ ವೀಡಿಯೋ ಏನು, ಅಂತದ್ದೇನಿದೆ ಆ ವೀಡಿಯೋದಲ್ಲಿ ಅನ್ನೋದಕ್ಕೆ ಉತ್ತರ ಇಲ್ಲಿದೆ.

ವೈರಲ್ ವೀಡಿಯೋದಲ್ಲಿನ ದೃಶ್ಯವನ್ನು ನೋಡಿದಾಗ ಸನ್ನಿ ಸ್ವಿಮ್ಮಿಂಗ್ ಪೂಲ್ ನ ಕಟ್ಟೆಯ ಮೇಲೆ ನಡೆದುಕೊಂಡು ಬರುತ್ತಾ, ಕಾಲಿನಲ್ಲಿ ನೀರಿನ ಆನಂದವನ್ನು ಅನುಭವಿಸುತ್ತಾ ಹೆಜ್ಜೆ ಹಾಕುವಾಗ, ಅವರ ಸಹಾಯಕನೊಬ್ಬನು ಸನ್ನಿಗೆ ಬಿಸಿಲು ತಾಕದಂತೆ ಛತ್ರಿಯನ್ನು ಹಿಡಿದು ಸನ್ನಿ ಹಿಂದೆ ನಡೆದು ಬರುತ್ತಿರುತ್ತಾನೆ. ಈ ವೇಳೆಯೇ ನಡೆಯುತ್ತದೆ ಒಂದು ತಮಾಷೆಯ ಘಟನೆ. ಆದರೆ ಅದರಿಂದ ಸನ್ನಿಗೆ ಸಿಕ್ಕಾಪಟ್ಟೆ ಕೋಪ ಬಂದಿರುವುದನ್ನು ಸಹಾ ನಾವು ನೋಡಬಹುದು.

ಸನ್ನಿ ನಡೆದು ಬರುವಾಗಲೇ ಹಿಂದಿನಿಂದ ಬಂದ ಮತ್ತೋರ್ವ ವ್ಯಕ್ತಿ ಸನ್ನಿಯನ್ನು ಸ್ವಿಮ್ಮಿಂಗ್ ಪೂಲ್ ನೊಳಗೆ ನೂಕುತ್ತಾರೆ. ಸನ್ನಿ ನೀರಿಗೆ ಬಿದ್ದಿದ್ದನ್ನು ನೋಡಿ ಮಜಾ ಪಡೆಯುತ್ತಾರೆ. ಆಗಲೇ ಗಾಬರಿಯಿಂದ ಸನ್ನಿ ಜೋರಾಗಿ ಅರಚುತ್ತಾ,‌ ಆತನನ್ನು ಬೈಯ್ಯುತ್ತಾ, ಕೋಪದಿಂದ ಚಪ್ಪಲಿಗಳನ್ನು ತೆಗೆದು ಆತನ ಕಡೆಗೆ ಎಸೆಯುತ್ತಾರೆ. ಸದ್ಯಕ್ಕೆ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಾ‌ ಸಾಗಿದ್ದು, ಎಲ್ಲರ ಗಮನವನ್ನು ಸೆಳೆಯುತ್ತಿದೆ.

Leave a Reply

Your email address will not be published.