ಕೋಪದಿಂದ ಮೈಕ್ ತೆಗೆದು ಬಿಸಾಕಿ ಹೊರಟ ರೂಪೇಶ್ ರಾಜಣ್ಣನ ಸಿಟ್ಟಿಗೆ ಬೆಚ್ಚಿ ಬಿದ್ದ ಬಿಗ್ ಬಾಸ್ ಮನೆ!!

Entertainment Featured-Articles Movies News

ಕನ್ನಡ ಬಿಗ್ ಬಾಸ್ ಸೀಸನ್ 9 ಆರಂಭವಾಗಿ ಐದು ದಿನಗಳು ಕಳೆದಾಗಿದೆ. ಇಷ್ಟು ದಿನ ಮನೆಯಲ್ಲಿ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡು ಹಾಡುತ್ತಾ ಕುಣಿಯುತ್ತಾ ಟಾಸ್ಕ್ ಗಳನ್ನು ಮಾಡಿಕೊಂಡು ಸಂತೋಷವಾಗಿ ಇದ್ದ ಮನೆಯ ಸದಸ್ಯರ ನಡುವೆ ಇದೀಗ ಚರ್ಚೆ ಹಾಕು ವಿಮರ್ಶೆಗಳು ಆರಂಭವಾಗುವ ಸನ್ನಿವೇಶ ನಿರ್ಮಾಣವಾಗಿದೆ. ಇದಕ್ಕೆ ಕಾರಣವಾಗಿದ್ದು ಈ ವಾರದ ಕಳಪೆ ಸದಸ್ಯ ಯಾರು ಎನ್ನುವುದರ ಆಯ್ಕೆ ಮಾಡುವ ವಿಚಾರವಾಗಿ. ಮನೆಯ ಸದಸ್ಯರಲ್ಲಿ ಒಬ್ಬ ಸದಸ್ಯರನ್ನು ಕಳಪೆ ಹಾಗೂ ಮತ್ತೊಬ್ಬರನ್ನು ಅತ್ಯುತ್ತಮ ಸದಸ್ಯ ಎಂದು ಆಯ್ಕೆ ಮಾಡಲಾಗುತ್ತದೆ. ಅದರ ಹಿನ್ನೆಲೆಯಲ್ಲಿ ಮನೆಯ ಸದಸ್ಯರು ಕಳಪೆ ಸದಸ್ಯರನ್ನು ಆಯ್ಕೆ ಮಾಡುವಾಗ ಒಂದಷ್ಟು ಜನ ಮನೆಯ ಸದಸ್ಯರು ರೂಪೇಶ್ ರಾಜಣ್ಣ ಅವರ ಹೆಸರನ್ನ ಹೇಳಿದ್ದಾರೆ.

ಅನುಪಮಾ ಗೌಡ, ನೇಹ ರಮಕೃಷ್ಣ ಮತ್ತಿತರರು ರೂಪೇಶ್ ರಾಜಣ್ಣ ಅವರನ್ನು ಕಳಪೆ ಸದಸ್ಯ ಎನ್ನುವ ಮಾತನ್ನು ಹೇಳಿದ್ದು, ಅವರು ನಮಗೆ ಪ್ರಾಮಾಣಿಕ ಎನಿಸುತ್ತಿಲ್ಲ, ಅವರು ಆಡುವ ಮಾತುಗಳು ಫೇಕ್ ಎನಿಸುತ್ತದೆ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿ ರೂಪೇಶ್ ರಾಜಣ್ಣ ಅವರಿಗೆ ಸಿಟ್ಟು ಮತ್ತು ಅಸಮಾಧಾನ ಎರಡು ಉಂಟಾಗಿದೆ. ನಂತರ ಅವರು ತಮ್ಮ ಸರದಿ ಬಂದಾಗ ಎದ್ದು ನಿಂತು ಮಾತನಾಡುವ ವೇಳೆಯಲ್ಲಿ ತಮ್ಮನ್ನು ಕಳಪೆ ಸದಸ್ಯ ಎಂದು ಹೇಳಿದವರ ಮೇಲೆ ತಮ್ಮ ಸಿಟ್ಟನ್ನು ವ್ಯಕ್ತಪಡಿಸುತ್ತಾ, ಸಿಟ್ಟಿನಿಂದಲೇ ಅವರು ಮಾತನಾಡಿದ್ದಾರೆ.

ರೂಪೇಶ್ ರಾಜಣ್ಣ ಮಾತನಾಡುತ್ತಾ, ಒರಿಜಿನಲ್ ಆಗಿ ನಾನು ಇರುವುದು ಹೀಗೆ, ನಾನೊಬ್ಬ ಹೋರಾಟಗಾರ ಯಾರು ಯಾರು ನಾಟಕ ಆಡುತ್ತಿದ್ದೀರಿ ಎನ್ನುವುದು ನನಗೆ ಗೊತ್ತು ಎಂದು ಹೇಳುವಾಗಲೇ, ಮಧ್ಯೆ ಮಾತನಾಡಿದ ದೀಪಿಕಾ ದಾಸ್ ಅವರು ಇಲ್ಲಿ ಹೋರಾಟ ಮಾಡುವ ವಿಷಯ ಅಲ್ಲ ಎಂದಿದ್ದಾರೆ. ಆಗ ರೂಪೇಶ್ ರಾಜಣ್ಣ ಅವರು ಮಾತನಾಡುವಾಗ ದೀಪಿಕಾ ಅವರು ಮಧ್ಯ ಮಾತನಾಡಿದ್ದು ಕಂಡು ಮತ್ತಷ್ಟು ಸಿಟ್ಟಾದರು. ಅವರು ನಾನು ಮಾತನಾಡುವಾಗ ದೀಪಿಕಾ ಅವರು ಮಧ್ಯೆ ಮಾತನಾಡಬಾರದು ಎಂದು ಹೇಳಿದ್ದಾರೆ. ದೀಪಿಕಾ ದಾಸ್ ಅವರ ಮನೆಯ ಸದಸ್ಯರ ಜೊತೆಗೆ ರೂಪೇಶ್ ರಾಜಣ್ಣ ವಿಷಯ ಬಿಟ್ಟು ಬೇರೆ ಎಲ್ಲಾ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲಿನವರ ಮಾತುಗಳನ್ನು ಕೇಳಿ ಅಸಮಾಧಾನಗೊಂಡ ರೂಪೇಶ್ ರಾಜಣ್ಣ ಅವರ ತಾಳ್ಮೆ ಎಲ್ಲೆ ಮೀರಿದ್ದು, ಅವರು ತಾವು ಧರಿಸಿದ್ದ ಮೈಕ್ ತೆಗೆದು ಅಲ್ಲೇ ಎಸೆದು, ನನಗೆ ಬೇಕಾಗಿಲ್ಲ, ನಾನಿಲ್ಲಿ ಯಾರ ಮಾತನ್ನು ಕೇಳಬೇಕಾಗಿಲ್ಲ ಎಂದು ಕೋಪದಿಂದ ಬೆಡ್ರೂಮ್ ಏರಿಯಾಗೆ ಹೋಗಿದ್ದಾರೆ. ಅವರಿಗೆ ಹೋದ ಕೂಡಲೇ ಕೆಲವು ಸದಸ್ಯರು ಕೂಡ ಹಿಂದೆ ಓಡಿ, ರೂಪೇಶ್ ರಾಜಣ್ಣ ಅವರನ್ನು ಸಮಾಧಾನ ಮಾಡುವ ಕೆಲಸವನ್ನು ಮಾಡಿದ್ದಾರೆ. ಇಷ್ಟು ದಿನ ಶಾಂತವಾಗಿದ್ದ, ಕೆಲವೊಂದು ವಿಚಾರಗಳಿಗೆ ಜಗಳ ನಡೆದಿದ್ದ ಮನೆಯಲ್ಲಿ ಈಗ ಕಳಪೆ ಸ್ಪರ್ಧಿಯಾರು ಎಂದು ತಿಳಿಸುವ ವಿಚಾರದಿಂದಾಗಿ ಅವರವರ ನಡುವೆ ವೈಮನಸ್ಸು ಮೂಡುವಂತೆ ಕಾಣುತ್ತಿದೆ.

Leave a Reply

Your email address will not be published.