ಕೋಟ್ಯಾಧಿಪತಿಗೆ ಮಾಸ್ಕ್ ಧರಿಸಲು ಹೇಳಿದ ಬ್ಯಾಂಕ್: ಕೋಪದಿಂದ ಆತ ಬ್ಯಾಂಕ್ ಗೆ ನೀಡಿದ ವಿಚಿತ್ರ ಶಿಕ್ಷೆ!!!

Written by Soma Shekar

Published on:

---Join Our Channel---

ಕೊರೊನಾ ಸಾಂಕ್ರಾಮಿಕದ ನಂತರದ ದಿನಗಳಲ್ಲಿ ವಿಶ್ವದ ಬಹುತೇಕ ಎಲ್ಲಾ ದೇಶಗಳಲ್ಲಿ ಕೂಡಾ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಕೊರೊನಾ ಎನ್ನುವುದು ಇನ್ನೂ ಸಹಾ ಸಂಪೂರ್ಣವಾಗಿ ವಿಶ್ವದಿಂದ ದೂರವಾಗಿಲ್ಲ. ಆದ್ದರಿಂದಲೇ ಕೆಲವು ದೇಶಗಳಲ್ಲಿ ಮಾಸ್ಕ್ ಧರಿಸದೇ ಬರುವವರಿಗೆ ದಂಡವನ್ನು ವಿಧಿಸಲಾಗುವುದು. ಆದರೆ ಕೆಲವು ವ್ಯಕ್ತಿಗಳಲ್ಲಿ ಮಾತ್ರ ಇನ್ನೂ ಯಾವುದೇ ರೀತಿಯ ಜಾಗೃತಿ ಮಾತ್ರ ಮೂಡಿಲ್ಲ. ಮಾಸ್ಕ್ ಧರಿಸದೇ ಓಡಾಡುವುದು ಇವರ ಚಾಳಿಯಾಗಿದೆ. ಒಂದು ವೇಳೆ ಇಂತಹವರಿಗೆ ಮಾಸ್ಕ್ ಧರಿಸಿ ಎಂದರೆ ಜಗಳ, ಗಲಾಟೆಗಳ ವರೆಗೆ ವಿಷಯ ತಲುಪುತ್ತದೆ.

ಇಂತಹ ಒಂದು ಘಟನೆಯಲ್ಲಿ ಓರ್ವ ಶ್ರೀಮಂತನಿಗೆ ಬ್ಯಾಂಕ್ ಒಂದು ಮಾಸ್ಕ್ ಧರಿಸಿ ಎಂದು ಹೇಳಿದ್ದಕ್ಕೆ ಆತ ಅದಕ್ಕೆ ತಗಾದೆಯೊಂದನ್ನು ತೆಗೆದು ಬ್ಯಾಂಕ್ ಗೆ ಶಿಕ್ಷೆಯನ್ನು ನೀಡಿದಂತಹ ಘಟನೆ ನಡೆದಿದೆ. ಬ್ಯಾಂಕ್ ನಲ್ಲಿ ಮಾಸ್ಕ್ ಧರಿಸಿ ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದ್ದಕ್ಕೆ ಕುಪಿತನಾದ ಕೋಟ್ಯಾಧೀಶನೊಬ್ಬನು ಬ್ಯಾಂಕ್ ನ ತನ್ನ ಖಾತೆಯಲ್ಲಿದ್ದ ಎಲ್ಲಾ ಹಣವನ್ನು ವಿತ್ ಡ್ರಾ ಮಾಡಿದ್ದಾನೆ.

ಅಲ್ಲದೇ ಪ್ರತಿಯೊಂದು ಕರೆನ್ಸಿ ನೋಟನ್ನು ಖುದ್ದು ಎಣಿಸಿ ಕೊಡಬೇಕು ಎಂದು ಆತ ಬ್ಯಾಂಕ್ ಗೆ ವಿಚಿತ್ರ ವಾದ ಶಿ ಕ್ಷೆ ಯನ್ನು ನೀಡಿದ್ದಾ‌ನೆ‌. ಚೀನಾದ ಸಾಮಾಜಿಕ ಮಾದ್ಯಮ ವೇದಿಕೆಯಾಗಿರುವ ವಿಬೋದಲ್ಲಿ ಸನ್ ವೇರ್ ಎಂದು ಹೆಸರಾಗಿರುವ ಕೋಟ್ಯಾಧಿಪತಿಯು ಬ್ಯಾಂಕ್ ಆಫ್ ಶಾಂಘೈ ನ ಒಂದು ಶಾಖೆಯೊಂದರಲ್ಲಿ ಐದು ಮಿಲಿಯನ್ ಯುವಾನ್ ಅಂದರೆ ಸುಮಾರು 5.8 ಕೋಟಿ ರೂ.ಗಳನ್ನು ವಿತ್ ಡ್ರಾ ಮಾಡಿಕೊಂಡಿದ್ದಾನೆ.

ಚೀನಾದಲ್ಲಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಒಂದೇ ಸಾರಿಗೆ ಡ್ರಾ ಮಾಡಿಕೊಳ್ಳುವ ಅವಕಾಶವಿದೆ ಎನ್ನಲಾಗಿದೆ. ಇನ್ನು ಈತ ತನ್ನ ಖಾತೆಯಲ್ಲಿರುವ ಎಲ್ಲಾ ಹಣ ಡ್ರಾ ಮಾಡಲು ಪ್ರತಿದಿನ ಬ್ಯಾಂಕ್ ಗೆ ಹೋಗುವುದಾಗಿ ಹೇಳಿದ್ದಾನೆ. ಆತ ಬ್ಯಾ‌ಂಕ್ ನಲ್ಲಿ ವಿತ್ ಡ್ರಾ ಮಾಡಿದ ಹಣವನ್ನು ಬ್ಯಾಂಕ ಸಿಬ್ಬಂದಿ ಎಣಿಸಿಕೊಡಬೇಕು ಎಂದು ಸಹಾ ಹೇಳಿದ್ದಾನೆ. ಬ್ಯಾಂಕ್ ತನ್ನೊಡನೆ ಅನುಚಿತವಾಗಿ ವರ್ತಿಸಿದ್ದರಿಂದ ಇಂತಹ ಕ್ರಮಕ್ಕೆ ಮುಂದಾಗಿದ್ದೇನೆ ಎಂದಿದ್ದಾನೆ.

ತಾನು ಹಣವನ್ನು ಬೇರೆ ಬ್ಯಾಂಕ್ ಗಳಲ್ಲಿ ಠೇವಣಿ ಮಾಡುತ್ತೇನೆ ಎಂದಿದ್ದಾನೆ. ಆದರೆ ಬ್ಯಾಂಕ್ ತನ್ನ ಸಿಬ್ಬಂದಿ ಯಾರೂ ಕೂಡಾ ಅನುಚಿತ ವರ್ತನೆ ತೋರಿಸಿಲ್ಲ, ಸಿಬ್ಬಂದಿಯು ತಮ್ಮ ಮಾರ್ಗಸೂಚಿಗಳನ್ನು ಯಾವುದೇ ಕಾರಣಕ್ಕೂ ಸಹಾ ಉಲ್ಲಂಘನೆ ಮಾಡಿಲ್ಲ ಎಂದು ಹೇಳಿದ್ದು, ಭದ್ರತಾ ಸಿಬ್ಬಂದಿ ಅವರಿಗೆ ಮಾಸ್ಕ್ ಧರಿಸಲು ಸೂಚನೆ ನೀಡಿತ್ತು ಅಷ್ಟೇ ಎಂದು ತಿಳಿಸಿದೆ.

Leave a Comment