ಕೋಟ್ಯಾಧಿಪತಿಗಳು ಇಲ್ಲಿನ ಪಾರಿವಾಳಗಳು: ಇವುಗಳ ಹೆಸರಿನಲ್ಲಿದೆ ಜಮೀನು,ಲಕ್ಷ ಲಕ್ಷ ಬ್ಯಾಂಕ್ ಬ್ಯಾಲೆನ್ಸ್
ಸಾಮಾನ್ಯವಾಗಿ ಮನುಷ್ಯರ ಹೆಸರಿನಲ್ಲಿ ಕೋಟಿ ಕೋಟಿಗಳ ಆಸ್ತಿಯನ್ನು ಹೊಂದಿರುವುದನ್ನು ನಾವು ನೋಡಿದ್ದೇವೆ. ಆದರೆ ಯಾವುದಾದರೂ ಕೋಟ್ಯಾಧಿಪತಿ ಪ್ರಾಣಿ ಅಥವಾ ಪಕ್ಷಿಯ ಬಗ್ಗೆ ನೀವು ವಿಚಾರವನ್ನು ಕೇಳಿದ್ದೀರಾ?? ಬಹುಶಃ ಈ ವಿಷಯ ಓದಿದಾಗ ಬಹಳ ಆಶ್ಚರ್ಯ ಕೂಡಾ ಆಗಬಹುದು. ಹೌದು ನಾವಿಂದು ನಿಮಗೆ ಕೋಟ್ಯಾಧಿಪತಿ ಪಾರಿವಾಳಗಳ ಬಗ್ಗೆ ಹೇಳಲು ಹೊರಟಿದ್ದೇವೆ. ಕೇಳಲು ಇದು ವಿಚಿತ್ರ ಎನಿಸಬಹುದು ಆದರೆ ಇದು ನಿಜ ಎನ್ನುವುದನ್ನು ನೀವು ನಂಬಲೇಬೇಕು. ಝೀ ರಾಜಸ್ಥಾನ್ ಮಾಡಿರುವ ವರದಿಯ ಪ್ರಕಾರ ಇಂತಹ ಕೋಟ್ಯಾಧಿಪತಿ ಪಾರಿವಾಳಗಳು ಇವೆ ಎನ್ನಲಾಗಿದೆ.
ರಾಜಸ್ಥಾನದ ನಾಗೌರ್ ಜಿಲ್ಲೆಯ ಜಸ್ ನಗರ್ ಎನ್ನುವ ಗ್ರಾಮದಲ್ಲಿ ಪಾರಿವಾಳಗಳ ಹೆಸರಿನಲ್ಲಿ ಕೋಟಿಗಳ ಆಸ್ತಿಯಿದೆ ಎನ್ನಲಾಗಿದೆ. ಅದರಲ್ಲಿ ಪಾರಿವಾಳ ಹೆಸರಿನಲ್ಲಿ ಅಂಗಡಿಗಳು, ನೀರಾವರಿ ಜಮೀನು ಮತ್ತು ನಗದು ಹಣ ಕೂಡಾ ಇದೆ ಎನ್ನಲಾಗಿದೆ. ವಿವರಗಳಿಗೆ ಹೋದರೆ ಪಾರಿವಾಳಗಳ ಹೆಸರಿನಲ್ಲಿ 27 ಅಂಗಡಿಗಳು, 126 ನೀರಾವರಿ ಜಮೀನು ಮತ್ತು ಸುಮಾರು 30 ಲಕ್ಷ ನಗದು ಹಣ ಇದೆ ಎನ್ನಲಾಗಿದೆ. ಪಾರಿವಾಳಗಳ ಹೆಸರಿನಲ್ಲಿ ಇರುವ ಜಮೀನಿನಲ್ಲಿ 470 ಹಸುಗಳ ಗೋಶಾಲೆಯೊಂದನ್ನು ನಡೆಸಲಾಗುತ್ತಿದೆ.
40 ವರ್ಷಗಳ ಹಿಂದೆ ಮಾಜಿ ಸರಪಂಚರಾದ ರಾಮ್ ದೀನ್ ಚೋಟಿಯಾ ಅವರ ಸಲಹೆ ಹಾಗೂ ಸೂಚನೆಯಂತೆ ಅವರು ಗುರು ಮರುಧರ್ ಕೇಸರಿ ಅವರಿಂದ ಸ್ಪೂರ್ತಿ ಪಡೆದು, ಗ್ರಾಮಸ್ಥರ ಸಹಕಾರದೊಂದಿಗೆ ವಲಸೆ ಬಂದ ಕೈಗಾರಿಕೋದ್ಯಮಿ ದಿವಂಗತ ಸಜ್ಜನ್ ರಾವ್ ಜೈನ್ ಹಾಗೂ ಪ್ರಭುಸಿಂಹ ರಾಜಪುರೋಹಿತ್ ಅವರು ಪಾರಿವಾಳಗಳ ಒಂದು ಟ್ರಸ್ಟ್ ಆರಂಭಿಸಿದರು. ಅನಂತರ ಭಾಮಾ ಶಾಹರು ಪಾರಿವಾಳಗಳ ರಕ್ಷಣೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡು ಎಂದು ಹೇಳಲಾಗುತ್ತದೆ.
ಭಾಮಾಶಾಹರು ಪಾರಿವಾಳಗಳ ರಕ್ಷಣೆ ಮತ್ತು ಅವುಗಳಿಗೆ ನಿತ್ಯ ಧಾನ್ಯ, ನೀರು ಪೂರೈಕೆಗಾಗಿ ಟ್ರಸ್ಟ್ ನ ಮೂಲಕ 27 ಅಂಗಡಿಗಳನ್ನು ನಿರ್ಮಾಣ ಮಾಡಿ ಅವುಗಳಿಗೆ ಪಾರಿವಾಳಗಳ ಹೆಸರನ್ನು ಇಡಲಾಗಿದೆ. ಇಲ್ಲಿನ ಗಳಿಕೆಯ ಜೊತೆಗೆ ಟ್ರಸ್ಟ್ ಕಳೆದ 30 ವರ್ಷಗಳಿಂದ ಪಾರಿವಾಳಗಳಿಗಾಗಿ ದಿನಕ್ಕೆ ಮೂರು ಚೀಲ ಧಾನ್ಯಗಳನ್ನು ನೀಡಲಾಗುತ್ತಿದೆ. ಮಾದ್ಯಮದ ವರದಿಯ ಪ್ರಕಾರ ಪಾರಿವಾಳಗಳ ಟ್ರಸ್ಟ್ ನ ಮೂಲಕ ಪ್ರತಿದಿನ ನಾಲ್ಕು ಸಾವಿರ ರೂ. ವೆಚ್ಚದಲ್ಲಿ ಮೂರು ಚೀಲಗಳ ಧಾನ್ಯವನ್ನು ವ್ಯವಸ್ಥೆ ಮಾಡಲಾಗುತ್ತದೆ.
ಅವಶ್ಯಕತೆಯ ಅನುಸಾರವಾಗಿ ಗೋಶಾಲೆಯಲ್ಲಿ ಇರುವ 470 ಹಸುಗಳಿಗೆ ಅಗತ್ಯವಿರುವ ಆಹಾರವನ್ನು ಸಹಾ ಪೂರೈಕೆ ಮಾಡಲಾಗುತ್ತಿದೆ. ಅಂಗಡಿಗಳಿಂದ ಟ್ರಸ್ಟ್ ಗೆ ಮಾಸಿಕ 80 ಸಾವಿರ ರೂ. ಆದಾಯವಿದೆ ಅಲ್ಲದೇ ಇದರ ಜೊತೆಗೆ ಚಿರಾಸ್ತಿಯಾಗಿ ಕೃಷಿ ಭೂಮಿಯಿದೆ. ಪಾರಿವಾಳಗಳು, ಹಸುಗಳ ಪೋಷಣೆಯ ನಂತರ ಉಳಿದ ಹಣವನ್ನು ಸ್ಥಳೀಯ ಬ್ಯಾಂಕಿನಲ್ಲಿ ಜಮೆ ಮಾಡಲಾಗುತ್ತದೆ. ಪ್ರಸ್ತುತ ಬ್ಯಾಂಕ್ ನಲ್ಲಿ ಪಾರಿವಾಳಗಳ ಹೆಸರಿನಲ್ಲಿ ಮೂವತ್ತು ಲಕ್ಷ ರೂ. ಜಮೆಯಾಗಿದೆ ಎನ್ನಲಾಗಿದೆ.
ಟ್ರಸ್ಟ್ ನ ಸಚಿವರಾದ ಪ್ರಭು ಸಿಂಹ ರಾಜಪುರೋಹಿತ ಅವರು ಮಾತನಾಡುತ್ತಾ ಭಾಮಾಶಾಹರು ಪಾರಿವಾಳಗಳ ಸಂರಕ್ಷಣೆಗೆ ತಮ್ಮ ದೊಡ್ಡ ಮನಸ್ಸಿನಿಂದ ನೆರವನ್ನು ನೀಡುತ್ತಾ ಬಂದಿದ್ದಾರೆ. ಅವುಗಳ ಆಹಾರಕ್ಕೆ ಯಾವುದೇ ತೊಂದರೆ ಆಗದಂತೆ ಎಚ್ಚರವನ್ನು ವಹಿಸುತ್ತಾರೆ. ಗ್ರಾಮಸ್ಥರು ಹಾಗೂ ಟ್ರಸ್ಟ್ ಸೇರಿ ಅಂಗಡಿಗಳನ್ನು ನಿರ್ಮಾಣ ಮಾಡಿದ್ದು, ವರ್ಷಕ್ಕೆ ಇದರಿಂದ ಸುಮಾರು ಒಂಬತ್ತು ಲಕ್ಷ ಆದಾಯವಿದ್ದು, ಪಾರಿವಾಳಗಳ ಪೋಷಣೆಗೆ ಯಾವುದೇ ತೊಂದರೆಯಿಲ್ಲ ಎನ್ನುತ್ತಾರೆ.