ಕೋಟೆ ಮನೆ ಸೊಸೆಯಾದ ಸತ್ಯಳಿಗೆ ಕಾದಿದೆ ದಿನಕ್ಕೊಂದು ಅಗ್ನಿ ಪರೀಕ್ಷೆ: ರೋಚಕ ತಿರುವುಗಳು ಮುಂದಿವೆ

0 1

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ವಿಭಿನ್ನವಾದ ಕಥೆ ಹಾಗೂ ಕಥಾನಕದ ಮೂಲಕ ಜನರನ್ನು ರಂಜಿಸುತ್ತಿರುವ ಧಾರಾವಾಹಿ ಸತ್ಯ. ಗಂಡಿಗಿಂತ ತಾನು ಯಾವುದರಲ್ಲೂ ಕಡಿಮೆಯಿಲ್ಲ ಎನ್ನುವಂತೆ ಬದುಕುತ್ತಿದ್ದ ಸತ್ಯಳ ಬದುಕಿನಲ್ಲೊಂದು ಹೊಸ ಅಧ್ಯಾಯ ಆರಂಭವಾಗಿದೆ. ಹೌದು, ಸತ್ಯ ಸೀರಿಯಲ್ ನಲ್ಲಿ ಹೊಸ ಹೊಸ ತಿರುವುಗಳು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಕುತೂಹಲವನ್ನು ಮೂಡಿಸುತ್ತಿದೆ. ಇಷ್ಟು ದಿನ ತನ್ನದೇ ಸ್ಟೈಲ್ ಹಾಗೂ ತನ್ನದೇ ಸ್ಮೈಲ್ ಎಂದು ಬದುಕುತ್ತಿದ್ದ ಸತ್ಯ ಇದೀಗ ಕೋಟೆ ಮನೆಯ ಸೊಸೆಯಾಗಿ ಬಂದಿದ್ದಾಳೆ.

ಒಂದು ಕಡೆ ಸತ್ಯಳ ಅಕ್ಕ ದಿವ್ಯ ಬಾಲನ ಕುತಂತ್ರದಲ್ಲಿ ಸಿಲುಕಿ, ಅವನು ಶ್ರೀಮಂತನೆಂದು ಭಾವಿಸಿ ಅವನ ಬೀಸಿದ ಬಲೆಗೆ ಬಿದ್ದು, ಅವನೊಡನೆ ಮದುವೆ ಮನೆಯಿಂದ ಓಡಿ ಹೋಗಿದ್ದಾಳೆ. ನಿನ್ನೆಯ ಎಪಿಸೋಡ್ ನಲ್ಲಿ ಬಾಲ ದಿವ್ಯಳ ಕೊರಳಿಗೆ ತಾಳಿ ಕಟ್ಟಿದ್ದಾನೆ. ಅವಳ ಮುಂದೆ ಸುಳ್ಳಿನ ಸರಮಾಲೆಯನ್ನೇ ಕಟ್ಟಿದ್ದಾನೆ. ಮುಂದಿನ ದಿನಗಳಲ್ಲಿ ಬಾಲನ ಅಸಲಿಯತ್ತು ಹೊರ ಬಂದರೆ ದಿವ್ಯ ಯಾವ ನಿರ್ಧಾರ ಮಾಡುವಳೋ ಅದಂತೂ ನಾವು ಈಗ ಊಹೆ ಮಾಡಲು ಸಾಧ್ಯವಿಲ್ಲ.

ಇನ್ನೊಂದು ಕಡೆ ಅಕ್ಕ ಮಾಡಿದ ತಪ್ಪಿನಿಂದ ಸೀತಮ್ಮ ನಿಗೆ ಇಷ್ಟವಿಲ್ಲದೇ ಹೋದರೂ ರಾಮಚಂದ್ರ ರಾಯರು ಮತ್ತು ಗುರುಗಳ ಅಣತಿಯಂತೆ ಸತ್ಯಳಿಗೆ ಕಾರ್ತಿಕ್ ಜೊತೆ ಮದುವೆ ಮಾಡಿಸಿ ಆಗಿದೆ. ಆದರೆ ಅಮುಲ್ ಬೇಬಿ ಕಾರ್ತಿಕ್ ಗೆ ಸತ್ಯ ಎಂದರೆ ಇದ್ದ ಪ್ರೀತಿ ಈಗ ದ್ವೇ ಷ ಕ್ಕೆ ಬದಲಾಗಿದೆ. ಅವಳನ್ನು ನೋಡಿದರೆ ಉರಿದು ಬೀಳುವಂತೆ ಆಡುತ್ತಿದ್ದಾನೆ. ಇವೆಲ್ಲವುಗಳ ನಡುವೆಯೇ ಸತ್ಯ ಬೈಕ್ ಏರಿ ಅತ್ತೆ ಮನೆಗೆ ಬಂದಿದ್ದು ಎಲ್ಲರಿಗೂ ಶಾ ಕ್ ನೀಡಿದೆ. ಇನ್ನು ಕಾರ್ತಿಕ್ ಅಕ್ಕ ಕೀರ್ತನಳಿಗೆ ಸತ್ಯ ಎಂದರೆ ಅಲರ್ಜಿ ಎನ್ನುವಷ್ಟು ದ್ವೇ ಷ ಇದೆ‌.

ಮನೆಗೆ ಬಂದ ಮಹಾಲಕ್ಷ್ಮಿ ಸತ್ಯಳಿಗೆ ಸೇರು ಒದ್ದು ಒಳಗೆ ಬಾ ಎಂದಾಗ ಅವಳು ಅದನ್ನು ತನ್ನ ಸ್ಟೈಲ್ ನಲ್ಲಿ ಒದ್ದ ರೀತಿ, ಪೂಜಾ ಮಂದಿರದಲ್ಲಿ ಬೆಂಕಿ ಕಡ್ಡಿಯನ್ನು ತನ್ನದೇ ಸ್ಟೈಲ್ ನಲ್ಲಿ ಗೀರಿದ್ದು, ಅರಿಶಿಣ ಕುಂಕುಮ ಹಚ್ಚಿಕೊಳ್ಳುವ ವಿಧಾನ ತಿಳಿಯದೇ ಇರುವುದು, ಅನಂತರ ಒಡೆದ ತೆ‌ಂಗಿನ ಕಾಯಿ ಎಲ್ಲವನ್ನೂ ನೋಡಿ ಸೀತಮ್ಮನ ಕೋಪ ತಾರಕಕ್ಕೆ ಏರಿದೆ. ಅಲ್ಲದೇ ಒದ್ದ ಸೇರು, ಒಡೆದ ತೆಂಗಿನಕಾಯಿ ಚೂರು ಎರಡೂ ಕೀರ್ತನ ಗಂಡ ಸುಹಾಸ್ ತಲೆಗೆ ತಗುಲಿ ಗಾಯವಾಗಿದ್ದು ಸೀತಮ್ಮನಿಗೆ ಇನ್ನಷ್ಟು ಕೋಪ ತರಿಸಿದೆ.

ಸೀತಮ್ಮನಿಗೆ ತಾನು ಬಯಸಿದ್ದ ಸೊಸೆಯ ಗುಣಗಳ ತದ್ವಿರುದ್ಧವಾದ ಗುಣಗಳ ಸೊಸೆಯನ್ನು ನೋಡಿ ತಡೆದುಕೊಳ್ಳಲಾಗುತ್ತಿಲ್ಲ. ಆದರೂ ಏನೂ ಮಾಡಲಾಗದ ಪರಿಸ್ಥಿತಿ ಅವರದ್ದು. ಇನ್ನು ಸಂಪ್ರದಾಯ, ಆಚಾರ ವಿಚಾರ ಎನ್ನುವ ಅತ್ತೆ ಸೀತಾ , ತನ್ನನ್ನು ದ್ವೇಷಿಸುವ ಕೀರ್ತನಾ ಅವರ ನಡುವೆ ಸತ್ಯಳಿಗೆ ಏನೆಲ್ಲಾ ಸಮಸ್ಯೆಗಳು ಎದುರಾಗಲಿದೆಯೋ ಗೊತ್ತಿಲ್ಲ. ಅಂತೂ ದಿನದಿನವೂ ಹೊಸ ಹೊಸ ಪರೀಕ್ಷೆಗಳನ್ನು ಸತ್ಯ ಎದುರಿಸಬೇಕಾಗುತ್ತದೆ ಎನ್ನುವುದು ಸತ್ಯ. ಸತ್ಯ ಎಲ್ಲವನ್ನೂ ಹೇಗೆ ನಿಭಾಯಿಸ್ತಾಳೆ ಅಂತ ನೋಡೋ ಕುತೂಹಲ ಈಗ ಪ್ರೇಕ್ಷಕರದ್ದು.

Leave A Reply

Your email address will not be published.