ಕೋಟಿ ಕೋಟಿ ಆಸ್ತಿ ದಾನ ನೀಡಿ, ಸನ್ಯಾಸ ಸ್ವೀಕರಿಸಲು ಸಜ್ಜಾದ ಶ್ರೀಮಂತನ ಕುಟುಂಬ

Entertainment Featured-Articles News

ಆಧುನಿಕ ಕಾಲದಲ್ಲಿ ಸುಖವಾದ ಜೀವನವನ್ನು ನಡೆಸುವುದಕ್ಕಾಗಿ ಅನೇಕ ಸೌಲಭ್ಯಗಳನ್ನು ಬಯಸುತ್ತಾರೆ ಜನರು. ಅದಕ್ಕಾಗಿ ಹೆಚ್ಚು ಹಣವನ್ನು ಗಳಿಸಿಕೊಳ್ಳಲು ದಾರಿಗಳನ್ನು ಹುಡುಕುತ್ತಾರೆ.  ಐಷಾರಾಮಿ ಬದುಕಿನ ಕನಸನ್ನು ಕಾಣುತ್ತಾರೆ. ಆದರೆ ಇಲ್ಲೊಂದು ಕುಟುಂಬವು ತಮ್ಮ ಕೋಟಿ ಕೋಟಿ ಮೌಲ್ಯದ ಆಸ್ತಿಯನ್ನು ದಾನ ಮಾಡಿ, ಸನ್ಯಾಸವನ್ನು ಸ್ವೀಕರಿಸಲು ಸಜ್ಜಾಗಿದೆ‌. ಹೌದು ಬಾಲಘಾಟ್ ನ ಬುಲಿಯನ್ ವ್ಯಾಪಾರಿ ರಾಕೇಶ್ ಸುರಾನಾ ತಮ್ಮ ಆಸ್ತಿಪಾಸ್ತಿಗಳನ್ನು, ತೊರೆದು ಪತ್ನಿ ಹಾಗೂ ಪುತ್ರನ ಸಮೇತ ಮೇ 22 ರಂದು ಜೈಪುರದಲ್ಲಿ ವಿಧಿವತ್ತಾಗಿ ಸನ್ಯಾಸವನ್ನು ಸ್ವೀಕಾರ ಮಾಡಲು ಸಜ್ಜಾಗಿದ್ದಾರೆ.

ರಾಕೇಶ್ ಸುರಾನ ಅವರು ತಮ್ಮ ಆಸ್ತಿಯನ್ನು ಗೋಶಾಲೆ ಮತ್ತು ಇತರೆ ಧಾರ್ಮಿಕ ಸಂಸ್ಥೆಗಳಿಗೆ ದಾನವಾಗಿ ನೀಡಿದ್ದಾರೆ. ಗುರು ಮಹೇಂದ್ರ ಸಾಗರ್ ಜೀ ಅವರಿಂದ ಸ್ಪೂರ್ತಿಯನ್ನು ಪಡೆದಿರುವ ಕುಟುಂಬವು ಲೌಕಿಕ ಜೀವನವನ್ನು ತೊರೆದು ಇದೀಗ ಸಂಯಮ ಮತ್ತು ಆಧ್ಯಾತ್ಮಿಕ ಹಾದಿಯಲ್ಲಿ ನಡೆಯಲು ಸಜ್ಜಾಗುತ್ತಿದೆ. ರಾಕೇಶ್ ಅವರ ಪತ್ನಿ ಲೀನಾ ಸುರಾನಾ ಅವರು ಕೂಡಾ ಚಿಕ್ಕ ವಯಸ್ಸಿನಲ್ಲಿಯೇ ಸಂಯಮದ ಹಾದಿಯಲ್ಲಿ ನಡೆಯುವ ಇಚ್ಚೆಯನ್ನು ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಅಮೆರಿಕದಲ್ಲಿ ಪಡೆದಿದ್ದು, ನಂತರ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ. ಈ ದಂಪತಿಯ ಮಗ ಅಮೇಯ್ ಕೂಡಟ ತನ್ನ ನಾಲ್ಕನೇ ವಯಸ್ಸಿನಲ್ಲಿಯೇ ಸಂಯಮದ ಹಾದಿಯಲ್ಲಿ ನಡೆಯುವ ಮನಸ್ಸನ್ನು ಮಾಡಿದ್ದರು, ಆದರೆ ಆತನ ವಯಸ್ಸು ಕಡಿಮೆ ಇದ್ದುದರಿಂದ ಸನ್ಯಾಸ ಸ್ವೀಕಾರ ತಡವಾಯಿತು ಎಂದು ಹೇಳಲಾಗಿದೆ. ರಾಕೇಶ್ ಸುರಾನಾ ಅವರ ತಾಯಿ ಹಾಗೂ ತಂಗಿ ಕೂಡಾ ಈಗಾಗಲೇ ದೀಕ್ಷೆಯನ್ನು ಪಡೆದು ಕೊಂಡಿದ್ದಾರೆ.

ರಾಕೇಶ್ ಸುರಾನಾ ಅವರು ತಮ್ಮ ಹನ್ನೊಂದು ಕೋಟಿಯ ಬೆಲೆಯ ಆಸ್ತಿಯನ್ನು ದಾನವಾಗಿ ನೀಡುತ್ತಿದ್ದಾರೆ. ಸುರಾನಾ ಕುಟುಂಬವು ತಾವು ಗಳಿಸಿದ ಸಂಪತ್ತನ್ನು ದಾನ ಮಾಡುವ ಮೂಲಕ ಆಧ್ಯಾತ್ಮಿಕತೆಯ ಕಡೆಗೆ ಮುಖ ಮಾಡಲು ನಿರ್ಧರಿಸಿದೆ. ತಮ್ಮ ಆಸ್ತಿಯನ್ನು ಅವರು ಬಡವರು ಮತ್ತು ಗೋಶಾಲೆಗಳಿಗೆ ದಾನವಾಗಿ ನೀಡಿರುವುದಾಗಿ ಹೇಳಿದ್ದಾರೆ. ಒಂದು ಕಾಲದಲ್ಲಿ ಚಿಕ್ಕ ಆಭರಣ ಅಂಗಡಿ ಹೊಂದಿದ್ದ ರಾಕೇಶ್ ಅವರು ಬುಲಿಯನ್ ಏರಿಯಾದಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *