ಕೋಟಿ ಕೊಟ್ರೂ ಮಾಡಲ್ಲ: ಅಯ್ಯೋ!! ರೌಡಿ ಹೀರೋ ಮರ್ಯಾದೆ ತೆಗೆದ್ರಾ ನಟಿ ಸಾಯಿ ಪಲ್ಲವಿ??

0 3

ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕಿಯರ ಸಂಖ್ಯೆಗೆ ಕೊರತೆಯಿಲ್ಲವಾದರೂ, ಅವರಲ್ಲಿ ಕೆಲವರು ಮಾತ್ರವೇ ಮನಸ್ಸಿಗೆ ಇಷ್ಟವಾಗುವಂತಹ ಪಾತ್ರಗಳನ್ನು ಮಾಡುತ್ತಾರೆ. ಉಳಿದವರು ಮನಸ್ಸಿಲ್ಲವಾದರೂ, ಕೇವಲ ಹಣ ಮಾಡಲು ಸುಮ್ಮನೆ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವಂತಹ ಪಾತ್ರಗಳನ್ನು, ಕೇವಲ ಗ್ಲಾಮರ್ ಗೊಂಬೆಗಳ ಹಾಗೆ ಕಾಣುವ ಪಾತ್ರಗಳನ್ನು ಮಾಡುತ್ತಾರೆ. ಆದರೆ ನಟಿ ಸಾಯಿ ಪಲ್ಲವಿ ಮಾತ್ರ ಇದಕ್ಕೆ ಸಂಪೂರ್ಣವಾಗಿ ತದ್ವಿರುದ್ಧ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನೋಡೋಕೆ ಹೇಗೆ ಅಂದವಾಗಿದ್ದಾರೋ, ಹಾಗೆ ಡಾನ್ಸ್ ಕೂಡಾ ಮಾಡ್ತಾರೆ ಸಾಯಿ ಪಲ್ಲವಿ.

ತೆಲುಗು ನಿರ್ದೇಶಕ ಶೇಖರ್ ತುಮ್ಮಲ ನಿರ್ದೇಶನದ ಫಿದಾ ಸಿನಿಮಾ ಮೂಲಕ ತೆಲುಗಿನ ಸಿನಿ ರಂಗಕ್ಕೆ ಎಂಟ್ರಿ ನೀಡಿದ ನಟಿ ಸಾಯಿ ಪಲ್ಲವಿ ಮೊದಲ ಸಿನಿಮಾದಲ್ಲಿ ತನ್ನ ಅದ್ಭುತ ನಟನೆಯ ಮೂಲಕವೇ ಪ್ರೇಕ್ಷಕರ ಹೃದಯದಲ್ಲಿ ಒಂದು ಅಚ್ಚಳಿಯದ ಮುದ್ರೆಯನ್ನು ಒತ್ತಿದ್ದಾರೆ. ಅನ್ಯ ನಟಿಯರ ಹಾಗೆ ಗ್ಲಾಮರ್, ತುಂಡು ಉಡುಗೆ ಅಲ್ಲದೇ ಕೇವಲ ನಟನೆಯಿಂದ ಮಾತ್ರವೇ ಯುವಜನರ ಮನಸ್ಸನ್ನು ಗೆದ್ದರು ಸಾಯಿ ಪಲ್ಲವಿ. ಎಕ್ಸ್ ಪೋಸಿಂಗ್ ಅಂದ್ರೆ ಮಾರು ದೂರು ಹೋಗುವ ನಟಿ, ತನ್ನ ಪಾತ್ರದ ವಿಷಯದಲ್ಲೂ ಮಾತ್ರ ಸಿಕ್ಕಾಪಟ್ಟೆ ಶಿಸ್ತು ಬದ್ಧ.

ತನ್ನ ಜೊತೆಗೆ ನಟಿಸುವವರು ಮೆಗಾಸ್ಟಾರ್ ಆಗಲೀ, ಪವರ್ ಸ್ಟಾರ್ ಆಗಲೀ, ತನ್ನ ಪಾತ್ರ ಹಿಡಿಸಲಿಲ್ಲ ಎಂದರೆ ಹಿಂದು ಮುಂದು ನೋಡದೇ ರಿಜೆಕ್ಟ್ ಮಾಡುವ ಧೈರ್ಯವಂತ ನಟಿಯಾಗಿದ್ದಾರೆ ಸಾಯಿ ಪಲ್ಲವಿ. ಇಂತಹ ನಟಿಯರು ಸಿನಿಮಾ ರಂಗದಲ್ಲಿ ಬಹಳ ಅಪರೂಪ. ಆದ್ದರಿಂದಲೇ ನಟಿ ಸಾಯಿ ಪಲ್ಲವಿ ಎಂದರೆ ಸಿನಿಮಾ ರಂಗದಲ್ಲಿ ಒಂದು ವಿಶೇಷವಾದ ಗೌರವದ ಸ್ಥಾನ ಮಾನ ಇದೆ ಹಾಗೂ ಹೀರೋ ಗಳಿಗೆ ಇದ್ದಂತೆ ಫ್ಯಾನ್ ಫಾಲೋಯಿಂಗ್ ಸಹಾ ಇದೆ ಎನ್ನುವುದು ಸಹಾ ಸತ್ಯವಾದ ವಿಷಯವಾಗಿದೆ.

ಸಿನಿಮಾ ಇಂಡಸ್ಟ್ರಿ ಗೆ ಬಂದು ವರ್ಷಗಳು ಕಳೆದರೂ ಸಹಾ ಸಾಯಿ ಪಲ್ಲವಿ ನಟಿಸಿರುವುದು ಮಾತ್ರ ಬೆರಳೆಣಿಕೆಯಷ್ಟು ಸಿನಿಮಾಗಳು. ಆದರೆ ನಟಿಸಿದ ಪ್ರತಿ ಸಿನಿಮಾದಲ್ಲಿ ತನ್ನ ನಟನೆಯ ಮೂಲಕ ಜನರ ನೆನಪಿನಲ್ಲಿ ಇಡುವಂತೆ ಮಾಡಿದ್ದಾರೆ. ಇನ್ನು ಸಾಯಿ ಪಲ್ಲವಿ ಅವರು ನಟಿಸಿದ ಸಿನಿಮಾಗಳ ಸಂಖ್ಯೆಗಿಂತ ತಿರಸ್ಕೃತ ಮಾಡಿದ ಸಿನಿಮಾಗಳ ಸಂಖ್ಯೆಯೇ ಹೆಚ್ಚು ಎಂದರೆ ಅಚ್ಚರಿಯಾದರೂ ಸಹಾ ನಿಜವಾದ ವಿಷಯವಾಗಿದೆ.

ಸಾಯಿ ಪಲ್ಲವಿ ರಿಜೆಕ್ಟ್ ಮಾಡಿದ ಸಿನಿಮಾಗಳಲ್ಲಿ ರೌಡಿ ಹೀರೋ ಖ್ಯಾತಿಯ ನಟ ವಿಜಯ್ ದೇವರಕೊಂಡ ಸಿನಿಮಾ ಕೂಡಾ ಇದೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಹೌದು, ವಿಜಯ್ ದೇವರಕೊಂಡ ನಾಯಕನಾಗಿ ಕಾಣಿಸಿಕೊಂಡಿದ್ದ ಡಿಯರ್ ಕಾಮ್ರೇಡ್ ಸಿನಿಮಾಕ್ಕೆ ಮೊದಲು ಸಾಯಿ ಪಲ್ಲವಿ ಯನ್ನು ನಾಯಕಿ ಎಂದು ಕೊಂಡಿದ್ದರು. ಆದರೆ ನಟಿ ಸಾಯಿ ಪಲ್ಲವಿ ಮಾತ್ರ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶವನ್ನು ರಿಜೆಕ್ಟ್ ಮಾಡಿದ್ದರು.

ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ಕೆಲವೊಂದು ರೋಮ್ಯಾಂಟಿಕ್ ದೃಶ್ಯಗಳು ಇದ್ದವು. ಇದೇ ಕಾರಣದಿಂದ ಸಾಯಿ ಪಲ್ಲವಿ ಆ ಪಾತ್ರಕ್ಕೆ ನೋ ಹೇಳಿದ್ದರು. ಸಿನಿಮಾ ಬಗ್ಗೆ ಮಾತುಕತೆ ಪ್ರಾರಂಭವಾದ ಕೂಡಲೇ ನಟಿ ಯಾವುದೇ ನಿರ್ಮಾಪಕರು ಅಥವಾ ನಿರ್ದೇಶಕರೇ ಆದರೂ ತಾನು ರೋಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಹೇಳುತ್ತಾರೆ ಎನ್ನಲಾಗಿದೆ. ಅಲ್ಲದೇ ಕೋಟಿ ಕೊಟ್ಟರೂ ಸಹಾ ಇಷ್ಟವಾಗದ ಕೆಲಸವನ್ನು ಮಾಡೋಲ್ಲ ಎಂದು ಬಹಳ ನೇರವಾಗಿ ಹೇಳುತ್ತಾರೆ ಸಾಯಿ ಪಲ್ಲವಿ.

Leave A Reply

Your email address will not be published.