ಕೋಟಿ ಕೊಟ್ರೂ ನಾನು ತುಂಡು ಡ್ರೆಸ್ ಹಾಕಲ್ಲ: ನಟಿ ಕೀರ್ತಿ ಸುರೇಶ್ ಖಡಕ್ ನಿರ್ಧಾರ
ಸಿನಿಮಾರಂಗದಲ್ಲಿ ನಾಯಕಿಯರ ಹೆಸರು ಬಂದ ಕೂಡಲೇ ಅಲ್ಲಿ ಗ್ಲಾಮರ್ ಎನ್ನುವುದು ಇಣುಕಿ ನೋಡುತ್ತದೆ. ಇಂದಿನ ದಿನಗಳಲ್ಲಿ ಬಹುತೇಕ ನಟಿಯರು ಗ್ಲಾಮರ್ ನಿಂದಾಗಿ ಹೆಚ್ಚು ಸದ್ದು, ಸುದ್ದಿಯನ್ನು ಮಾಡುತ್ತಿದ್ದಾರೆ. ಅದು ಸಾಲದು ಎನ್ನುವಂತೆ ಗ್ಲಾಮರಸ್ ಉಡುಗೆಗಳನ್ನು ತೊಡುವುದು ಸಾಮಾನ್ಯ ಎನ್ನುವಂತಾಗಿದೆ, ಅಲ್ಲದೇ ನಟಿಯರು ಅನೇಕ ಸಕ ಅವರು ತೊಡುವ ಉಡುಗೆಯಿಂದಲೇ ಟ್ರೋಲ್ ಆಗುತ್ತಿದ್ದಾರೆ. ಇಂತಹ ಬಟ್ಟೆ ತೊಡುವುದು ಸಹಾ ಅನಿವಾರ್ಯ ಎನ್ನುವ ಹಾಗೆ ನಟಿಯರ ನಡುವೆ ಒಂದು ಸ್ಪರ್ಧೆ ಏರ್ಪಟ್ಟಿದೆಯೇನೋ ಎನ್ನುವಂತೆ ಇದೆ.
ನಟಿಯರು ಧರಿಸುವ ಧಿರಿಸುಗಳನ್ನು ನೋಡಿದಾಗ ಪ್ರತಿಯೊಬ್ಬರಿಗೂ ಸಹಾ ಏನಿದು ಅನಿಸದೇ ಇರದು. ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೇ ಕೆಲವು ನಟಿಯರು ಸಾರ್ವಜನಿಕ ವಾಗಿ ಹೊರಗೆ ಬಂದಾಗಲೂ ಇಂತಹ ಉಡುಗೆಗಳಲ್ಲಿ ಕಾಣಿಸಿಕೊಂಡು ದೊಡ್ಡ ಸಂಚಲನಕ್ಕೆ, ಕೆಲವೊಮ್ಮೆ ವಿ ವಾ ದಗಳಿಗೆ ಕಾರಣವಾಗಿ ಬಿಡುತ್ತಾರೆ. ಆದರೆ ಕೆಲವೊಬ್ಬ ನಟಿಯರು ಮಾತ್ರವೇ ತಾವು ಸಿನಿಮಾಗಳಲ್ಲಿ ಹೆಚ್ಚು ಗ್ಲಾಮರಸ್ ಬಟ್ಟೆಗಳನ್ನು ತೊಡುವುದಿಲ್ಲ ಎಂದು ಹೇಳುವ ಧೈರ್ಯವನ್ನು ಮಾಡುತ್ತಾರೆ.
ದಕ್ಷಿಣ ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿದ್ದಾರೆ ನಟಿ ಕೀರ್ತಿ ಸುರೇಶ್, ಈಗಾಗಲೇ ಮಲೆಯಾಳಂ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿ ಪ್ರಶಸ್ತಿ ಗೆದ್ದಿರುವ ಕೀರ್ತಿ ಸುರೇಶ್ ಅವರು ತೆಲುಗಿನ ಸ್ಟಾರ್ ನಟಿ, ಮಹಾನಟಿ ಸಿನಿಮಾ ಮೂಲಕ ನಟನೆಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದು ಮಾತ್ರವೇ ಅಲ್ಲದೇ, ಮಹಾನಟಿ ಸಿನಿಮಾದಲ್ಲಿ ಹಿರಿಯ ನಟಿ ಸಾವಿತ್ರಿ ಅವರ ಪಾತ್ರಕ್ಕೆ ಜೀವ ತುಂಬಿ ನಟಿಸಿದ ಮೇಲೆ ದಕ್ಷಿಣ ಸಿನಿ ರಂಗ ಕೀರ್ತಿ ಸುರೇಶ್ ಅವರನ್ನು ಅಚ್ಚರಿಯ ಕಣ್ಣುಗಳಿಂದ ನೋಡುವಂತಾಗಿದೆ.
ಇಷ್ಟೊಂದು ದೊಡ್ಡ ಹೆಸರನ್ನು ಪಡೆದರೂ ಸಹಾ ಕೀರ್ತಿ ಸುರೇಶ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಅನ್ಯ ನಟಿಯರಂತೆ ಬ್ಯುಸಿಯಾಗಿಲ್ಲ. ಹೌದು, ನಟಿಯ ಒಂದು ನಿರ್ಧಾರದಿಂದಾಗಿ ಅವರು ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ. ನಟಿ ಕೀರ್ತಿ ಸುರೇಶ್ ಅವರು ಸಿನಿಮಾ ಯಾವುದೇ ಆಗಿರಲಿ, ಎಷ್ಟೇ ಪ್ರಮುಖ ಪಾತ್ರವಾಗಲೀ ತುಂಡು ಬಟ್ಟೆಯನ್ನು ಹಾಕುವುದಾದರೆ ಆ ಪಾತ್ರ ಮಾಡುವುದಿಲ್ಲವೆಂದು ಹೇಳಿದ್ದಾರೆ ಎನ್ನುವ ಸುದ್ದಿಯಾಗಿದೆ.
ನಟಿಯ ಈ ನಿರ್ಧಾರದಿಂದಾಗಿಯೇ ಅವರು ಈಗಾಗಲೇ ಹಲವು ಪ್ರಮುಖ ಸಿನಿಮಾಗಳನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಕೋಟಿ ಕೊಟ್ಟರೂ ಸಹಾ ತಾನು ತುಂಡುಡುಗೆ ತೊಡುವುದಿಲ್ಲ ಎನ್ನುವ ಮಾತನ್ನು ಕೀರ್ತಿ ಸುರೇಶ್ ಅವರು ಹೇಳಿರುವ ಕಾರಣದಿಂದಲೇ ಕೀರ್ತಿ ಅವರ ಸಿನಿಮಾಗಳು ಬೇರೆ ನಟಿಯರ ಪಾಲಾಗುತ್ತಿದೆ. ಕಳೆದ ವರ್ಷ ಕೀರ್ತಿ ಅವರು ರಜನೀಕಾಂತ್ ನಟನೆಯ ಅಣ್ಣಾತ್ತೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷ ಗುಡ್ ಲಕ್ ಸಖಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಮಹೇಶ್ ಬಾಬು ಜೊತೆಗಿನ ಸರ್ಕಾರಿ ವಾರು ಪಾಟ ಬಿಡುಗಡೆ ಆಗಬೇಕಿದೆ.