ಕೋಟಿಗೊಬ್ಬ 3 ಟ್ರೈಲರ್ ನೋಡಿ ಸುದೀಪ್ ವಯಸ್ಸನ್ನು ಅನುಮಾನಿಸಿದ ಮೋಹಕ ತಾರೆ ರಮ್ಯ
ಸ್ಯಾಂಡಲ್ವುಡ್ ನ ಮೋಹಕ ತಾರೆ ನಟಿ ರಮ್ಯಾ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ರಾಜಕೀಯದಿಂದ ಕೂಡಾ ಸಾಕಷ್ಟು ಅಂತರವನ್ನು ಕಾಯ್ದುಕೊಂಡಿರುವ ನಟಿ ರಮ್ಯಾ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಆ್ಯಕ್ಟೀವ್ ಆಗಿದ್ದಾರೆ. ತಾನು ಸಿನಿಮಾ ಸಮಾರಂಭ ಅಥವಾ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಆದರೆ ಸಿನಿಮಾ ಗಳ ಬಗ್ಗೆ ಹಾಗೂ ಸಿನಿಮಾ ಆಗು ಹೋಗುಗಳನ್ನು ಗಮನಿಸುತ್ತಲೇ ಇರುತ್ತಾರೆ. ಸಿನಿಮಾಗಳ ಬಗ್ಗೆ ಮಾಹಿತಿಯನ್ನು ಸೋಶಿಯಲ್ ಮೀಡಿಯಾಗಳಲ್ಲಿ ಗಮನಿಸುತ್ತಾ ಇರುತ್ತಾರೆ.
ರಮ್ಯ ಅವರು ತಮಗೆ ಇಷ್ಟವಾಗುವ ಸಿನಿಮಾ ಗಳು, ಸಿನಿಮಾ ಪೋಸ್ಟರ್ ಗಳ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ನಟಿ ರಮ್ಯಾ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಸಿನಿಮಾದ ಟ್ರೈಲರ್ ನೋಡಿ, ಸಿನಿಮಾದಲ್ಲಿ ಸುದೀಪ್ ಪಾತ್ರವನ್ನು ಹಾಲಿವುಡ್ ಸಿನಿಮಾದಲ್ಲಿ ಬರುವಂತಹ ಬೆಂಜಮಿನ್ ಬಟನ್ ಪಾತ್ರಕ್ಕೆ ಹೋಲಿಕೆಯನ್ನು ಮಾಡುವ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ರಮ್ಯಾ, “ನಮ್ಮ ಹೊಸ ಬೆಂಜಮಿನ್ ಬಟನ್ ಕಿಚ್ಚ ಸುದೀಪ್, ನಿಮಗೆ ವಯಸ್ಸೇ ಆಗಲ್ವೇ?? ವಾವ್ ಅದ್ಭುತವಾದ ಟ್ರೈಲರ್” ಎಂದು ರಮ್ಯಾ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಾಕಿಕೊಂಡು ಖುಷಿ ಪಟ್ಟಿದ್ದಾರೆ, ಸಿನಿಮಾ ಟ್ರೈಲರ್ ನ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ರಮ್ಯ ಬೆಂಜಮಿನ್ ಬಟನ್ ಪಾತ್ರವನ್ನು ಸುದೀಪ್ ಅವರಿಗೆ ಹೋಲಿಕೆ ಮಾಡಿರುವ ಹಿಂದೆ ಒಂದು ಕಾರಣವಿದೆ. ಹೌದು ಈ ಪಾತ್ರಕ್ಕೆ ಒಂದು ವಿಶೇಷತೆ ಖಂಡಿತ ಇದೆ.
ಬೆಂಜಮಿನ್ ಬಟನ್ ಮುದುಕನಾಗಿ ಹುಟ್ಟಿ, ಮಗುವಾಗಿ ಕೊನೆಯಾಗುವ ಕಥೆ. ಅಂದರೆ ಇಲ್ಲಿ ಪಾತ್ರಕ್ಕೆ ದಿನ ಕಳೆದಂತೆ ವಯಸ್ಸು ಕಡಿಮೆಯಾಗುತ್ತಾ ಹೋಗುತ್ತದೆ. ಅದನ್ನೇ ಸುದೀಪ್ ಅವರಿಗೆ ಹೋಲಿಕೆ ಮಾಡಿರುವ ರಮ್ಯಾ ಸುದೀಪ್ ದಿನಕಳೆದಂತೆ ಚಿರಯುವಕ ನಂತೆ ಕಾಣುತ್ತಿದ್ದಾರೆ ಎನ್ನುವ ಹೊಗಳಿಕೆಯನ್ನು ನೀಡಿದ್ದಾರೆ. ರಮ್ಯ ಅವರು ಕೋಟಿಗೊಬ್ಬ 3 ಟ್ರೈಲರ್ ನೋಡಿ ಬಹಳ ಖುಷಿ ಪಟ್ಟಿರುವುದು ಅವರ ಈ ಪೋಸ್ಟ್ ನಿಂದ ತಿಳಿಯುತ್ತಿದೆ.