ನಟಿ ರಮ್ಯಾ ಕೇಳಿದ ಆ ಒಂದು ಪ್ರಶ್ನೆಗೆ, ಕಿಚ್ಚ ಸುದೀಪ್ ಕೊಟ್ರು ನೋಡಿ ಸೂಪರ್ ಡೂಪರ್ ಉತ್ತರ

Written by Soma Shekar

Published on:

---Join Our Channel---

ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 3 ಸಿನಿಮಾ ಬೆಳ್ಳಿ ತೆರೆ ಮೇಲೆ ಮೂಡಲು ಸಜ್ಜಾಗಿದೆ. ಅದಕ್ಕಿಂತಲೂ ಮೊದಲು ಕೆಲವು ದಿನಗಳ ಹಿಂದೆ ಅಭಿಮಾನಿಗಳ ನಿರೀಕ್ಷೆ ಹಾಗೂ ಕುತೂಹಲವನ್ನು ದುಪ್ಪಟ್ಟು ಮಾಡುವ ಹಾಗೆ ಕೋಟಿಗೊಬ್ಬ 3 ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ಬಿಡುಗಡೆ ನಂತರ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಕೂಡಾ ಹೆಚ್ಚಿದೆ. ಇನ್ನು ಕೋಟಿಗೊಬ್ಬ ಸಿನಿಮಾ ಟ್ರೈಲರ್ ನೋಡಿದ ಸ್ಯಾಂಡಲ್ವುಡ್ ನ ಮೋಹಕ ತಾರೆ ನಟಿ ರಮ್ಯ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಅಲ್ಲದೇ ಸುದೀಪ್ ಅವರನ್ನು ಒಂದು ಪ್ರಶ್ನೆ ಸಹಾ ಕೇಳಿದ್ದರು.

ಹೌದು, ರಮ್ಯ ಅವರು ಕೋಟಿಗೊಬ್ಬ 3 ಸಿನಿಮಾ ಟ್ರೈಲರ್ ನೋಡಿದ ನಂತರ ಹಾಲಿವುಡ್ ಸಿನಿಮಾದಲ್ಲಿ ಬರುವ ಬೆಂಜಮಿನ್ ಬಟನ್ ಎನ್ನುವ ಪಾತ್ರಕ್ಕೆ ಹೋಲಿಕೆ ಮಾಡಿದ್ದರು. ಅಂದರೆ ಆ ಪಾತ್ರದಂತೆ ಸುದೀಪ್ ಅವರಿಗೆ ದಿನದಿಂದ ದಿನಕ್ಕೆ ವಯಸ್ಸು ಕಡಿಮೆಯಾಗುತ್ತಿದೆ ಎನ್ನುವ ಅರ್ಥದಲ್ಲಿ ಸುದೀಪ್ ಅವರೇ ನಿಮಗೆ ವಯಸ್ಸೇ ಆಗುವುದಿಲ್ಲವೇ ಎಂದು ರಮ್ಯ ಅವರು ಪ್ರಶ್ನೆ ಮಾಡಿ, ಕೋಟಿಗೊಬ್ಬ 3 ಸಿನಿಮಾದ ಪೋಸ್ಟರ್ ಅನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದರು.

ನಟಿ ರಮ್ಯ ಅವರು ನೀಡಿದ ಮೆಚ್ಚುಗೆಗೆ ಹಾಗೂ ಕೇಳಿದ ಪ್ರಶ್ನೆಗೆ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯೆಯನ್ನು ನೀಡಿದ್ದಾರೆ.‌ ರಮ್ಯ ಅವರ ಪೋಸ್ಟ್ ಬಗ್ಗೆ ಪ್ರೆಸ್ ಮೀಟ್ ನಲ್ಲಿ ಸುದೀಪ್ ಅವರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅವರು, “ಸಿನಿಮಾದಿಂದ ದೂರವಿದ್ದು ರಾಜಕೀಯದಲ್ಲಿ ಇದ್ದರೂ ನಮ್ಮ ಬಗ್ಗೆ ಮಾತನಾಡಿರುವುದು ನಮಗೆ ಖುಷಿ ತಂದಿದೆ” ಎನ್ನುವ ಮಾತನ್ನು ನಟ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಹಾಗೆ ಅವರು ತಮ್ಮ ವಯಸ್ಸಿನ ಬಗ್ಗೆ ಕೇಳಿದ ಪ್ರಶ್ನೆಗೂ ಉತ್ತರ ನೀಡಿದ್ದಾರೆ.

ವಯಸ್ಸಿನ ರಮ್ಯಾರ ಪ್ರಶ್ನೆಗೆ ಬಗ್ಗೆ ಉತ್ತರ ನೀಡಿದ ಸುದೀಪ್ ಅವರು, ಕೆಲವು ನಟರು 50 ದಾಟಿದರೂ ಸಹಾ ಫಿಟ್ ಆಗಿದ್ದಾರೆ. ಅವರು ನಮಗೆ ಸ್ಪೂರ್ತಿ. ಅದೇ ರೀತಿ ಕೆಲವರು 30 ವರ್ಷ ವಯಸ್ಸಾಗಿದ್ದರೂ ಸಹಾ 50 ಆಗಿರೋತರ ಇರ್ತಾರೆ. ಎರಡೂ ಕೂಡಾ ನಮಗೆ ಒಂದು ರೀತಿ ಸ್ಪೂರ್ತಿಯಾಗಿದೆ ಎಂದು ಉತ್ತರ ವನ್ನು ನೀಡಿದ್ದಾರೆ. ಸುದೀಪ್ ಅವರ ಈ ಉತ್ತರ ನಟಿ ರಮ್ಯ ಅವರಿಗೆ ಖಂಡಿತ ಅವರ ಪ್ರಶ್ನೆಗೆ ಸೂಕ್ತ ಉತ್ತರವಾಗುವುದರಲ್ಲಿ ಅನುಮಾನವೇ ಇಲ್ಲ.

Leave a Comment