ಕೋಟಿಗಳಿಗೆ ಬೆಲೇನೇ ಇಲ್ವಾ?? ಸ್ಟಾರ್ ನಟರು ಏರಿಸಿಕೊಳ್ತಿದ್ದಾರೆ ತಮ್ಮ ಸಂಭಾವನೆ, ಈ ನಟನ ಸಂಭಾವನೆ ಖಂಡಿತ ಶಾಕಿಂಗ್!!
ಭಾರತೀಯ ಸಿನಿಮಾ ರಂಗದಲ್ಲಿ ಕೆಲವು ನಟರ ಬಹಳ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ನಟರಾಗಿ ಗುರುತಿಸಿಕೊಂಡಿದ್ದಾರೆ. ಅಂತಹ ನಟರಲ್ಲಿ ತಮಿಳು ಸಿನಿಮಾ ರಂಗದ ಜನಪ್ರಿಯ ಹಾಗೂ ಸ್ಟಾರ್ ನಟ ಎನಿಸಿಕೊಂಡಿರುವ ವಿಜಯ್ ಕೂಡಾ ಇದ್ದಾರೆ. ನಟ ವಿಜಯ್ ತಮಿಳು ಸಿನಿಮಾ ರಂಗದಲ್ಲಿ ಎಷ್ಟು ದೊಡ್ಡ ಮಟ್ಟದ ಜನಪ್ರಿಯತೆ ಹಾಗೂ ಸ್ಟಾರ್ ಗಿರಿ ಪಡೆದಿದ್ದಾರೆ ಎನ್ನುವುದಕ್ಕೆ ಅವರ ಸಿನಿಮಾಗಳು ಪಡೆದುಕೊಳ್ಳುವ ಯಶಸ್ಸು, ಅಭಿಮಾನಿಗಳು ಸಿನಿಮಾವನ್ನು ಸಂಭ್ರಮಿಸುವ ಪರಿ ಸಾಕ್ಷಿಯಾಗಿದೆ ಎಂದು ಹೇಳಬಹುದು.
ನಟ ವಿಜಯ್ ಅವರ ಹೊಸ ಸಿನಿಮಾವೊಂದು ಸೆಟ್ಟೇರಿದೆ ಎಂದು ಸುದ್ದಿಯಾಗುತ್ತಲೇ ಅದೊಂದು ಕ್ರೇಜನ್ನು ಹುಟ್ಟು ಹಾಕುತ್ತದೆ. ಸಿನಿಮಾ ಬಿಡುಗಡೆ ಆಗೋವರೆಗೆ ಅಭಿಮಾನಿಗಳಲ್ಲಿ ನೂರಾರು ನಿರೀಕ್ಷೆಗಳನ್ನು ಹುಟ್ಟು ಹಾಕುತ್ತದೆ. ಇನ್ನು ಸಿನಿಮಾ ಬಿಡುಗಡೆಯ ನಂತರ ಕೆಲವೇ ದಿನಗಳಲ್ಲಿ ನೂರು, ಇನ್ನೂರು ಕೋಟಿಗಳ ಗಳಿಕೆಯನ್ನು ಸಿನಿಮಾ ಮಾಡುತ್ತದೆ. ವಿಜಯ್ ಅವರ ಸಿನಿಮಾ ಇಂತಹ ವಿಜಯ ಸಾಧಿಸುವ ಕಾರಣದಿಂದಲೇ ಅನೇಕ ಸ್ಟಾರ್ ನಿರ್ಮಾಪಕರು ಹಾಗೂ ನಿರ್ದೇಶಕರು ಈ ನಟನ ಕಾಲ್ ಶೀಟ್ ಗಾಗಿ ಕಾಯುತ್ತಾರೆ.
ಕಳೆದ ವರ್ಷ ಕೊರೊನಾ ಸಮಯದಲ್ಲಿ ಥಿಯೇಟರ್ ಗಳಿಗೆ ಕೊಂಚ ರಿಲೀಫ್ ನೀಡಿದ ಸಮಯದಲ್ಲಿ ಮೊದಲು ಬಿಡುಗಡೆಯಾದ ಸಿನಿಮಾ ಮಾಸ್ಟರ್ ಬಿಡುಗಡೆ ಗೊಂಡಿತ್ತು. ವಿಶೇಷ ಏನೆಂದರೆ ಆಗ ಥಿಯೇಟರ್ ಗಳಲ್ಲಿ 50% ಸೀಟ್ ಗಳಿಗೆ ಅವಕಾಶವನ್ನು ನೀಡಲಾಗಿತ್ತು, ಆದ್ರೂ ಕೂಡಾ ಸಿನಿಮಾ ಅದರಲ್ಲೇ ನೂರಾರು ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಹೊಸ ದಾಖಲೆಯನ್ನು ಬರೆದಿತ್ತು. ಮತ್ತೊಮ್ಮೆ ಅಭಿಮಾನಿಗಳು ಸಿನಿಮಾವನ್ನು ಗೆಲ್ಲಿಸಿದ್ದರು.
ಇದಾದ ನಂತರ ಸಹಜವಾಗಿಯೇ ನಟ ವಿಜಯ್ ಕೂಡಾ ಬೇರೆ ನಟರ ಹಾಗೆ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ವಿಜಯ್ ಇತ್ತೀಚಿಗಷ್ಟೇ ತಮ್ಮ 66 ನೇ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ತೆಲುಗಿನಲ್ಲಿ ದೊಡ್ಡ ಸಿನಿಮಾಗಳ ನಿರ್ಮಾಪಕರ ಎನಿಸಿರುವ ದಿಲ್ ರಾಜು ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದು, ತೆಲುಗಿನ ಜನಪ್ರಿಯ ನಿರ್ದೇಶಕ ವಂಶಿ ಪೈಡಿಪಲ್ಲಿ ಸಿನಿಮಾದ ನಿರ್ದೇಶನವನ್ನು ಮಾಡುತ್ತಿದ್ದಾರೆಂದು ಈಗಾಗಲೇ ಘೋಷಣೆ ಕೂಡಾ ಆಗಿದ್ದು, ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.
ಇನ್ನು ಈ ಹೊಸ ಸಿನಿಮಾಕ್ಕಾಗಿ ನಟ ವಿಜಯ್ 100 ಕೋಟಿಗೂ ಅಧಿಕ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎನ್ನುವುದು ಟಾಕ್ ಆಫ್ ದಿ ಟೌನ್ ಆಗಿದೆ. ಇಷ್ಟು ದಿನ ಸಿನಿಮಾ ಒಂದಕ್ಕೆ 70, 80 ಕೋಟಿ ಸಂಭಾವನೆಯನ್ನು ಪಡೆಯುತ್ತಿದ್ದ ಈ ನಟ ಇದೀಗ ತಮ್ಮ ಹೊಸ ಸಿನಿಮಾಕ್ಕಾಗಿ ಬರೋಬ್ಬರಿ 120 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಮೂಲಕ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಸಾಲಿಗೆ ವಿಜಯ್ ಸೇರ್ಪಡೆಯಾಗಿದ್ದಾರೆ.