ಕೋಚ್ ಹುದ್ದೆಗೆ ರಾಜೀನಾಮೆ ನೀಡಿ ಹನಿಮೂನ್ ಗೆ ಹೊರಟ 66 ವಯಸ್ಸಿನ ಮಾಜಿ ಕ್ರಿಕೆಟ್ ಆಟಗಾರ

Entertainment Featured-Articles Movies News

ಭಾರತದ ಮಾಜಿ ಕ್ರಿಕೆಟ್ ಆಟಗಾರ ಅರುಣ್ ಲಾಲ್ ಅವರು ಇತ್ತೀಚಿಗೆ ಅವರ ಮದುವೆಯ ವಿಚಾರವಾಗಿ ಸಾಕಷ್ಟು ಸದ್ದು ಸುದ್ದಿಯಾಗಿದ್ದರು. ಈಗ ಅದರ ಬೆನ್ನಲ್ಲೇ ಅವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಹೌದು ಅರುಣ್ ಲಾಲ್ ಅವರು ತಮ್ಮ ಬಂಗಾಳ ರಣಜಿ ತಂಡದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಬಾರಿ ಅರುಣ್ ಲಾಲ್ ಅವರು ಬೆಂಗಾಲ್ ರಣಜಿ ತಂಡವನ್ನು ಸೆಮಿಫೈನಲ್‌ ಗೆ ನಡೆಸಿದ್ದರು. ತಂಡದೊಂದಿಗೆ ಅವರ ಒಡನಾಟ ಬಹಳ ಆತ್ಮೀಯವಾಗಿದ್ದರೂ, ಈಗ ವಯಸ್ಸಾದ ಕಾರಣ ಆಯಾಸದಿಂದ ರಾಜೀನಾಮೆ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.

ರಾಜೀನಾಮೆ ಬಗ್ಗೆ ಮಾತನಾಡುತ್ತಾ ಅವರು, ನಾನು ಸಂತೋಷದಿಂದಲೇ ಈ ನಿರ್ಧಾರ ಮಾಡಿದ್ದೇನೆ. ಆದ್ದರಿಂದ ಅತೃಪ್ತಿಯೆನ್ನುವುದು ಖಂಡಿತ ಇಲ್ಲ. ಬಂಗಾಳ ತಂಡ ಈಗ ಮೊದಲಿಗಿಂತ ಉತ್ತಮವಾಗಿದೆ, ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಅವರು ಸಹಾ ಮೇಲುಗೈ ಸಾಧಿಸಲಿದ್ದಾರೆ ಎಂದು ಹೇಳಿದ್ದಾರೆ. ಅರುಣ್ ಲಾಲ್ ಅವರು ತಾವು ಕುಟುಂಬದೊಂದಿಗೆ ಸಮಯವನ್ನು ಕಳೆಯಲು ಬಯಸುತ್ತಿರುವುದಾಗಿಯೂ ಹೇಳಿದ್ದಾರೆ.

ಕೆಲವೇ ದಿನಗಳ ಹಿಂದೆಯಷ್ಟೇ ಅವರು ತಮಗಿಂತ 28 ವರ್ಷ ಕಿರಿಯವರಾದ ಬುಲ್ ಬುಲ್ ಅವರ ಜೊತೆ ಮದುವೆ ಮಾಡಿಕೊಂಡಿದ್ದಾರೆ. ಅವರ ಮದುವೆಯ ಫೋಟೋಗಳು ವೈರಲ್ ಆಗಿದ್ದವು. ಈಗ ರಾಜೀನಾಮೆಯ ಬೆನ್ನಲ್ಲೇ ಅವರು ಪತ್ನಿಯೊಡನೆ ಹನಿಮೂನ್ ಗೆ ತೆರಳಲು ಸಿದ್ಧತೆಗಳನ್ನು ನಡೆಸಿದ್ದಾರೆ. ತಮ್ಮ ನವ ವಧುವಿನ ಜೊತೆಗೆ ಟರ್ಕಿಗೆ ತೆರಳಲು ಅರುಣ್ ಲಾಲ್ ಪ್ಲಾನ್ ಮಾಡಿದ್ದು, ಅದಕ್ಕೂ ಮೊದಲು ಭಾರತದ ಕೆಲವು ಗಿರಿಧಾಮಗಳಲ್ಲಿ ಸ್ವಲ್ಪ ದಿನ ಕಳೆಯಲಿದ್ದಾರೆ ಎನ್ನಲಾಗಿದೆ.

66 ವರ್ಷ ವಯಸ್ಸಿನ ಅರುಣ್ ಲಾಲ್ ಅವರು ಬುಲ್ ಬುಲ್ ಅವರನ್ನು ಮೇ 2 ರಂದು ವಿವಾಹವಾದರು. ಮೊದಲ ಪತ್ನಿಯ ಒಪ್ಪಿಗೆಯನ್ನು ಪಡೆದೇ ಅವರು ಈ ಮದುವೆ ಮಾಡಿಕೊಂಡಿದ್ದಾರೆ. ಅರುಣ್ ಲಾಲ್ ಮತ್ತು ಬುಲ್ ಬುಲ್‌ ಅವರಿಗೆ ಮೊದಲೇ ಪರಿಚಯವಿದ್ದು, ಅವರ ನಡುವೆ ಸ್ನೇಹ ಸಂಬಂಧವಿತ್ತು ಎನ್ನಲಾಗಿದೆ. ಇವರ ಮದುವೆಯ ಫೋಟೊ ಹಾಗೂ ವೀಡಿಯೋಗಳು ವೈರಲ್ ಆಗಿ ಜನರಿಂದ ಈ ಬಗ್ಗೆ ವೈವಿದ್ಯಮಯ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಂದಿದ್ದವು.

Leave a Reply

Your email address will not be published.