ಕೊಹ್ಲಿ ಒಂದು ಇನ್ಸ್ಟಾಗ್ರಾಂ ಪೋಸ್ಟ್ ಗೆ ಪಡೆಯೋ ಸಂಭಾವನೆ ಇಷ್ಟೊಂದಾ? ಸ್ಟಾರ್ ನಟರಿಗೂ ಸಿಗ್ತಿಲ್ಲ ಇಷ್ಟು ಹಣ!!

Entertainment Featured-Articles Movies News

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಇತ್ತೀಚಿನ ವರ್ಷಗಳಲ್ಲಿ ಒಳ್ಳೆಯ ಫಾರ್ಮ್ ನಲ್ಲಿ ಇಲ್ಲ. ತಮ್ಮ ಅಭಿಮಾನ ಕ್ರಿಕೆಟ್ ಹೀರೋ ಯಾವಾಗ ಶತಕ ಬಾರಿಸಲಿದ್ದಾರೆ ಎಂದು ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಕಾಯುತ್ತಿದ್ದಾರೆ. ಇತ್ತೀಚಿನ ಇಂಗ್ಲೆಂಡ್ ಪ್ರವಾಸದಲ್ಲೂ ವಿರಾಟ್ ಕೊಹ್ಲಿ ಅವರ ಪ್ರದರ್ಶನ ತೃಪ್ತಿಕರವಾಗಿಲ್ಲ. ಆದರೂ ಸಹಾ ಈ ಕ್ರಿಕೆಟ್ ಆಟಗಾರನಿಗೆ ಸೋಶಿಯಲ್ ಮೀಡಿಯಾಗಳಲ್ಲಿನ‌ ಕ್ರೇಜ್ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ. ಇನ್ಸ್ಟಾಗ್ರಾಂ ನಲ್ಲಿ ಅವರ ಫಾಲೋಯಿಂಗ್ ಹೆಚ್ಚುತ್ತಲೇ ಇದೆ.

ಇದು ಇನ್ಸ್ಟಾಗ್ರಾಂ ಕೂಡಾ ದೊಡ್ಡ ಮಟ್ಟದ ಹಿಂಬಾಲಕರನ್ನು ಪಡೆದಿರುವ ಸೆಲೆಬ್ರಿಟಿಗಳ ಪಾಲಿಗೆ ಗಳಿಕೆಯ ಒಂದು ಪ್ರಮುಖ ಮೂಲವಾಗಿದೆ. ಇಲ್ಲಿ ಸೆಲೆಬ್ರಿಟಿಗಳು ಶೇರ್ ಮಾಡುವ ಪೋಸ್ಟ್ ಗೆ ಅವರು ಇಂತಿಷ್ಟು ಎಂದು ಹಣವನ್ನು ಪಡೆಯುವುದು ತೀರಾ ಸಾಮಾನ್ಯವಾಗಿದೆ. ಲಕ್ಷಗಳು, ಕೋಟಿಗಳ ಸಂಖ್ಯೆಯಲ್ಲಿ ಹಿಂಬಾಲಕರನ್ನು ಹೊಂದಿರುವ ಸೆಲೆಬ್ರಿಟಿಗಳು ಹಂಚಿಕೊಳ್ಳುವ ಪೋಸ್ಟ್ ಗಳಿಗೆ ಅಂದರೆ ಪ್ರಾಯೋಜಿತ ಪೋಸ್ಟ್ ಗಳಿಗೆ ಅವರು ಲಕ್ಷಗಳು ಅಥವಾ ಕೋಟಿಗಳ ಮೊತ್ತದಲ್ಲಿಯೇ ಹಣವನ್ನು ಸಹಾ ಪಡೆಯುತ್ತಾರೆ.

ಕ್ರಿಕೆಟ್ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಅವರ ವಿಚಾರಕ್ಕೆ ಬಂದಾಗ ಅವರು ಇನ್ಸ್ಟಾಗ್ರಾಂ ನಲ್ಲಿ ಹಾಕುವ ಒಂದು ಪೋಸ್ಟ್ ಗೆ ಬರೋಬ್ಬರಿ 8 ಕೋಟಿ 70 ಲಕ್ಷ ರೂ.ಗಳನ್ನು ಪಡೆಯುತ್ತಾರೆ. ಅವರ ಈ ಗಳಿಕೆಯ ಮೂಲಕ ಏಷ್ಯಾದಲ್ಲಿ ಒಂದೇ ಒಂದು ಪೋಸ್ಟ್ ಮೂಲಕ ಅತಿ ಹೆಚ್ಚು ಹಣವನ್ನು ಗಳಿಸಿದ ಸೆಲೆಬ್ರಿಟಿ ಎನ್ನುವ ಹೆಗ್ಗಳಿಕೆಯನ್ನು ಅವರು ಪಡೆದುಕೊಂಡಿದ್ದಾರೆ. ಕಳೆದ ವರ್ಷ ಅವರು ಇನ್ಸ್ಟಾಗ್ರಾಂ ಪೋಸ್ಟ್ ಗೆ 5 ಕೋಟಿ ಚಾರ್ಚ್ ಮಾಡುತ್ತಿದ್ದರು. ಅಲ್ಲದೇ ವಿಶ್ವ ರ್ಯಾಂಕಿಂಗ್ ನಲ್ಲಿ 18 ನೇ ಸ್ಥಾನವನ್ನು ಪಡೆದುಕೊಂಡಿದ್ದರು.

ಒಂದು ವರ್ಷದ ಅವಧಿಯಲ್ಲಿ ವಿರಾಟ್ ಕೊಹ್ಲಿ ಅವರು ಇನ್ಸ್ಟಾಗ್ರಾಂ ನಲ್ಲಿ ತಾವು ಪಡೆಯುವ ಶುಲ್ಕದಲ್ಲಿ 3 ಕೋಟಿ 70 ಲಕ್ಷ ರೂ. ಹೆಚ್ಚಿಸಿಕೊಂಡಿದ್ದಾರೆ. ಅವರ ಸ್ಥಾನ ಕೂಡಾ ಈಗ 18 ರಿಂದ 14 ಕ್ಕೆ ಏರಿಕೆಯಾಗಿದೆ. ಇದು ವಿರಾಟ್ ಕೊಹ್ಲಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಇರುವ ಕ್ರೇಜ್ ಗೆ ಸಾಕ್ಷಿಯಾಗಿದೆ. ವಿರಾಟ್ ಕೊಹ್ಲಿ ನಂತರದ ಸ್ಥಾನದಲ್ಲಿ ಬಾಲಿವುಡ್ ನಟಿ ಸದ್ಯಕ್ಕೆ ಹಾಲಿವುಡ್ ನಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಚೋಪ್ರಾ ಇದ್ದಾರೆ.

Leave a Reply

Your email address will not be published.