ಕೊರೊನಾ ಸೋಂಕಿನ ಸಮಸ್ಯೆ ಆರಂಭವಾಗಿ ಈಗಾಗಲೇ ಎರಡು ವರ್ಷಗಳು ಕಳೆದಿವೆ. ಆದರೂ ಈ ಸೋಂಕಿನ ಭೀ ತಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಕೊರೊನಾ ತಗ್ಗಿತು ಎಂದು ಜನ ಜೀವನ ಸಾಮಾನ್ಯ ಹಂತಕ್ಕೆ ಬರುವ ವೇಳೆಗೆ ಅದರ ಹೊಸ ತಳಿ ಬಂದು, ಮತ್ತೆ ಅ ಲ್ಲೋ ಲ, ಕಲ್ಲೋಲ ಸೃಷ್ಟಿಸುತ್ತಿದೆ. ಇನ್ನು ಕೊರೊನಾ ಹೀಗೆ ವಿಶ್ವದಾದ್ಯಂತ ತನ್ನ ಭೀ ತಿಯನ್ನು ಹುಟ್ಟಿಸಿರುವ ಕೊರೊನಾ ಎನ್ನುವ ಕಾಯಿಲೆಯೇ ಇಲ್ಲ ಎಂದು ವಾದಿಸುವ ಜನರು ಅನೇಕರು ಇದ್ದಾರೆ. ವಿಶ್ವದಾದ್ಯಂತ ಕೊರೊನಾ ಒಂದು ಸುಳ್ಳು ಎಂದು ವಾದಿಸುವ ಜನರು ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ.
ಹೀಗೆ ಕೊರೊನಾ ಎಂದರೆ ನಂಬದ ಝೆಕ್ ಗಣರಾಜ್ಯದ ಜಾನಪದ ಗಾಯಕಿ ಹನಾ ಹೋರ್ಕಾ ಸಹಾ ಕೊರೊನಾ ಎನ್ನುವುದು ಇಲ್ಲ ಎನ್ನುವ ಮಾತನ್ನು ಹೇಳಿದ್ದರು. ಅಲ್ಲದೇ ಅದನ್ನು ಸಾಬೀತು ಮಾಡುವ ಸಲುವಾಗಿ ತಾನು ಬೇಕಂತಲೇ ಕೋವಿಡ್ ಸೋಂಕನ್ನು ಅಂಟಿಸಿಕೊಂಡಿದ್ದು, ಈಗ ಕೋವಿಡ್ ನ ತೀವ್ರತೆಯಿಂದಾಗಿ ಕೊನೆಯುಸಿರೆಳೆದಿದ್ದಾರೆ. ಝೆಕ್ ಗಣರಾಜ್ಯದ ಹನ ಹೋಕ್ರಾ ಜನಪದ ಗಾಯಕಿ ಆಗಿದ್ದು, ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದಿರುವ ಗಾಯಕಿಯಾಗಿದ್ದರು.
ಕೋವಿಡ್ ಕಾಲದಿಂದಲೂ ಅದನ್ನು ವಿ ರೋ ಧಿಸುತ್ತಾ ಬಂದಿದ್ದ ಈ ಗಾಯಕಿಯು, ಕೋವಿಡ್ ವ್ಯಾಕ್ಸಿನ್ ಅನ್ನು ಕೂಡಾ ವಿ ರೋ ಧ ಮಾಡಿದ್ದರು. ಅವರು ಲಸಿಕೆಯನ್ನು ಪಡೆದಿರಲಿಲ್ಲ. 57 ವರ್ಷದ ಈ ಗಾಯಕಿಯ ಪತಿ ಹಾಗೂ ಮಗನಿಗೆ ಸಹಾ ಕ್ರಿಸ್ಮಸ್ ಗೆ ಮುನ್ನ ಕೋವಿಡ್ ಸೋಂಕು ತಗುಲಿತ್ತು. ಆದರೆ ಇದ್ಯಾವುದನ್ನು ಲೆಕ್ಕಿಸದೇ ಗಾಯಕಿ ಎಲ್ಲರೊಡನೆ ಬೆರೆತು, ಪಾರ್ಟಿ, ಡಿನ್ನರ್ ಎಂದು ಕೋವಿಡ್ ನಿಯಮಗಳನ್ನು ಮುರಿದಿದ್ದರು. ಈಗ ಇಹಲೋಕವನ್ನು ತ್ಯಜಿಸಿದ್ದಾರೆ.
ಝೆಕ್ ಗಣರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿದ ಕಾರಣದಿಂದ ಅಲ್ಲಿನ ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡಿತ್ತು. ಅಲ್ಲದೇ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಕೋವಿಡ್ ಲಸಿಕೆ ಕಡ್ಡಾಯ ಎಂದು ಸೂಚನೆ ನೀಡಲಾಗಿತ್ತು. ಜನಪದ ತಂಡವನ್ನು ಕಟ್ಟಿಕೊಂಡು, ಹಾಡುಗಳ ಕಾರ್ಯಕ್ರಮ ನೀಡಲು ಹೋಗುತ್ತಿದ್ದ ಹನಾ ಅಸಮಾಧಾನಗೊಂಡಿದ್ದರು. ಅಲ್ಲದೇ ವ್ಯಾಕ್ಸಿನೇಷನ್ ಅನ್ನು ವಿ ರೋ ಧಿ ಸಿದ್ದರು.