ಕೊರೊನಾ ಬಗ್ಗೆ ಬ್ರಹ್ಮಾಂಡ ಗುರೂಜಿಗಳ ಹೊಸ ಭವಿಷ್ಯವಾಣಿ: 2 ವರ್ಷ ತಪ್ಪದೇ ಜಾಗೃತಿ ಪಾಲಿಸಿ

0 5

ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೋವಿಡ್ ನಿಂದ ಜಗತ್ತಿನ ವಿವಿಧ ಭಾಗಗಳಲ್ಲಿ ಜನರು ತೀವ್ರವಾಗಿ ಬಳಲುತ್ತಿದ್ದಾರೆ. ಇಂದು ಇಡೀ ಜಗತ್ತಿನ ಮುಂದೆ ಕೊರೊನಾ ಎನ್ನುವುದು ಒಂದು ಬಹುದೊಡ್ಡ ಸಮಸ್ಯೆಯಾಗಿದೆ. ಈ ಕೊರೊನಾ ಎನ್ನುವ ಮಹಾಮಾರಿಯಿಂದ ರಕ್ಷಣೆಗಾಗಿ ಅದೆಷ್ಟೋ ಮಾರ್ಗಸೂಚಿ ಗಳನ್ನು ಪಾಲನೆ ಮಾಡಲಾಗುತ್ತಿದೆ. ಜನರ ಮುಂಜಾಗ್ರತೆ ಹಾಗೂ ಎಚ್ಚರಿಕೆಯೇ ಕೊರೊನಾ ನಿಯಂತ್ರಣದ ಮೊದಲನೇ ಹೆಜ್ಜೆ ಎನ್ನುವುದು ಬಹಳಷ್ಟು ಜನರಿಗೆ ಅರಿವಾಗಿದೆ. ಅಲ್ಲದೇ ವ್ಯಾಕ್ಸಿನೇಷನ್‌ ಅಭಿಯಾನ ಸಹಾ ನಡೆಯುತ್ತಿದೆ. ಈಗ ಇವೆಲ್ಲವುಗಳ ನಡುವೆ ಕೊರೊನಾ ಕುರಿತಾಗಿ ಬ್ರಹ್ಮಾಂಡ ಗುರೂಜಿ ಎಂದೇ ಹೆಸರಾಗಿರುವ ನರೇಂದ್ರ ಬಾಲಾಜಿ ಶರ್ಮಾ ಅವರು ಭವಿಷ್ಯ ವಾಣಿಯೊಂದನ್ನು ನುಡಿದು, ಕೊರೊನಾ ಇನ್ನೂ 30 ವರ್ಷಗಳ ಕಾಲ ಇರುತ್ತದೆ ಎಂದು ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ವಿಶ್ವೇಶ್ವರ ಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದ ಬ್ರಹ್ಮಾಂಡ ಗುರೂಜಿಗಳು ಬಳಿಕ ಪುರೋಹಿತರಾದ ರಾಘವೇಂದ್ರರಾವ್ ಅವರ ಮನೆಗೆ ತೆರಳಿ ಅಲ್ಲಿ ಅವರಿಂದ ಆಥಿತ್ಯವನ್ನು ಪಡೆದುಕೊಂಡ ನಂತರ, ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಈ ವೇಳೆ ಅವರು ಮುಂದಿನ ಎರಡು ವರ್ಷಗಳ ಕಾಲ ಪ್ರತಿಯೊಬ್ಬರೂ ಕೊರೋನ ಜಾಗೃತಿಯನ್ನು ಪಾಲಿಸಬೇಕಾಗಿದೆ ಎಂದು ಹೇಳುತ್ತಾ, ಮುಂದಿನ ದಿನಗಳಲ್ಲಿ ಕೊರೊನಾ ಒಂದು ಸಾಮಾನ್ಯ ಜ್ವರದಂತೆ ಸುಮಾರು 30 ವರ್ಷಗಳ ಕಾಲ ನಮ್ಮೊಂದಿಗೆ ಇರುತ್ತದೆ ಎನ್ನುವ ಭವಿಷ್ಯವಾಣಿಯನ್ನು ನುಡಿದಿದ್ದಾರೆ.

ಗುರೂಜಿಗಳು ಇದೇ ವೇಳೆಯಲ್ಲಿ ಕೆಲವು ಸಲಹೆಗಳನ್ನು ನೀಡುತ್ತಾ, ಮನುಷ್ಯ ತನ್ನಲ್ಲಿರುವ ದುರಹಂಕಾರ, ದುರಾಸೆ ಹಾಗೂ ಸ್ವಾರ್ಥವನ್ನು ಬಿಟ್ಟು ಒಳ್ಳೆಯ ಕೆಲಸವನ್ನು ಮಾಡಲು ಮುಂದಾಗಬೇಕಾಗಿದೆ. ಬಹಳ ಭಕ್ತಿ ಶ್ರದ್ಧೆಯಿಂದ ದೇವರನ್ನು ಪೂಜಿಸಿದಾಗ ಮಾತ್ರವೇ ಎಲ್ಲರಿಗೂ ಒಳ್ಳೆಯದಾಗುತ್ತದೆ. ಆಗ ಈ ಮಹಾಮಾರಿ ನಿರ್ನಾಮವಾಗುತ್ತದೆ. ಎಂದು ಬ್ರಹ್ಮಾಂಡ ಗುರೂಜಿಗಳು ಹೇಳಿದ್ದಾರೆ. ಅವರು ಹೇಳಿರುವ ಭವಿಷ್ಯವಾಣಿ ಪ್ರಕಾರ ಕೊರೊನಾ ಮಹಾಮಾರಿಯು ಇನ್ನೂ ಮೂವತ್ತು ವರ್ಷಗಳ ಕಾಲ ಇರಲಿದೆ ಎನ್ನಲಾಗಿದೆ.

Leave A Reply

Your email address will not be published.