ಕೊರೆವ ಚಳಿಯಲಿ ಅನಾಥವಾಗಿದ್ದ ನಾಯಿಮರಿಗಳನ್ನು ಕಂಡು ಪೋಲಿಸರು ಮಾಡಿದ್ದೇನು?? ಮಾನವೀಯತೆ ಅಂದ್ರೆ ಇದು

Written by Soma Shekar

Published on:

---Join Our Channel---

ಪ್ರಾಣಿಗಳ ವಿಚಾರ ಬಂದಾಗ ಅದರಲ್ಲೂ ವಿಶೇಷವಾಗಿ ಸಾಕು ಪ್ರಾಣಿಗಳು ಎನ್ನುವ ವಿಚಾರದಲ್ಲಿ ಬಹಳಷ್ಟು ಜನರು ಭಾವನಾತ್ಮಕತೆಯನ್ನು ಮೆರೆಯುತ್ತಾರೆ. ಅವರು ತಮ್ಮ ಮನೆಗಳಲ್ಲಿ ಸಾಕುಪ್ರಾಣಿಗಳನ್ನು ಬಹಳ ಪ್ರೀತಿಯಿಂದ ಆರೈಕೆ ಮಾಡುತ್ತಾರೆ. ಆದರೆ ಕೆಲವರು ಮಾನವೀಯತೆಯನ್ನು ಮರೆತು ಸಾಕುಪ್ರಾಣಿಗಳನ್ನು ತಮ್ಮಿಂದ ದೂರ ಮಾಡುವ ಸಲುವಾಗಿ ಅವುಗಳಿಗೆ ಹಿಂ ಸೆ ಕೊಡುವುದು ಅಥವಾ ದೂರ ತೆಗೆದುಕೊಂಡು ಹೋಗಿ ಬಿಟ್ಟು ಬರುವ ಕೆಲಸವನ್ನು ಮಾಡುತ್ತಾರೆ. ಪ್ರಾಣಿಗಳ ಬಗ್ಗೆ ಬಹಳ ಕ್ರೂ ರವಾಗಿದೆ ವರ್ತಿಸುತ್ತಾರೆ.

ಆದರೆ ಇಂಥವರ ಮಧ್ಯೆ ಕೆಲವರು ದಯನೀಯ ಸ್ಥಿತಿಯಲ್ಲಿರುವ ಸಾಕುಪ್ರಾಣಿಗಳಿಗೆ ಆಶ್ರಯ ನೀಡಲು ಮುಂದಾಗುತ್ತಾರೆ, ಮಾನವೀಯತೆ ಮೆರೆಯುತ್ತಾರೆ. ಅಮೇರಿಕಾದ ಟುಲ್ಸಾ ಓಕ್ಲಾದಲ್ಲಿ ಇಂತಹುದೇ ಒಂದು ಮಾನವೀಯ ಕಾರ್ಯ ನಡೆದಿದೆ. ಇಲ್ಲಿ ಮುದ್ದಾದ ಐದು ನಾಯಿಮರಿಗಳನ್ನು ಜಿಪ್ ಇರುವ ಬ್ಯಾಗಿನಲ್ಲಿ ಇಟ್ಟು, ಯಾರೋ ಅಂಗಡಿಯೊಂದರ ಮುಂದೆ ಬಿಟ್ಟು ಹೋಗಿದ್ದಾರೆ. ರಸ್ತೆ ಬದಿಯಲ್ಲಿ ಅಂಗಡಿಯೊಂದರ ಮುಂದೆ ಅಸಹಾಯಕವಾಗಿ ಇದ್ದವು ಐದು ನಾಯಿ ಮರಿಗಳು.

ಈ ಐದು ನಾಯಿಮರಿಗಳಲ್ಲಿ ನಾಲ್ಕು ನಾಯಿಮರಿಗಳನ್ನು ಸ್ಥಳೀಯ ಪೋಲಿಸರು ದತ್ತು ಪಡೆದುಕೊಂಡಿದ್ದಾರೆ. ಇನ್ನೊಂದು ಮರಿಯನ್ನು ನಾಯಿ ಮರಿಗಳನ್ನು ಯಾವ ಅಂಗಡಿಯ ಮುಂದೆ ಬಿಟ್ಟು ಹೋಗಲಾಗಿತ್ತೋ ಆ ಅಂಗಡಿಯ ಮಾಲೀಕರು ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ರಸ್ತೆ ಬದಿಯಲ್ಲಿ ಅಸಹಾಯಕನಾಗಿದ್ದ 5 ನಾಯಿ ಮರಿಗಳಿಗೆ ಪೊಲೀಸರು ಮತ್ತು ಅಂಗಡಿ ಮಾಲೀಕ ಆಶ್ರಯವನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕ್ರಿಸ್ಮಸ್ ದಿನದಂದು ದೊರೆತ ನಾಯಿಮರಿಗಳನ್ನು ದತ್ತು ಪಡೆದ ಪೊಲೀಸರು ಅವುಗಳ ಜೊತೆ ಫೋಟೋ ತೆಗೆದುಕೊಂಡು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಅವರು ತಮ್ಮ ಪೋಸ್ಟ್ ನಲ್ಲಿ ನಿಮಗೆ ಸಾಕು ಪ್ರಾಣಿಗಳು ಬೇಕಾದರೆ ಅದನ್ನು ಕೊಂಡುಕೊಳ್ಳಬೇಡಿ, ಬದಲಿಗೆ ದತ್ತು ಪಡೆಯಿರಿ ಎಂದು ಹೇಳಿದ್ದಾರೆ. ಈಗಾಗಲೇ ಹಲವು ಸಾಕು ಪ್ರಾಣಿಗಳ ಪುನರ್ವಸತಿ ಕೇಂದ್ರಗಳು ಸಂಪೂರ್ಣವಾಗಿ ಭರ್ತಿಯಾಗಿದೆ ಎಂದು ಹೇಳಲಾಗಿದ್ದು,‌ ದತ್ತು ಪಡೆದರೆ ಅನುಕೂಲವಾಗುತ್ತದೆ ಎನ್ನಲಾಗಿದೆ.

Leave a Comment