ಕೊನೇ ಹಂತದಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ದಿವ್ಯ ಸುರೇಶ್ ಅವರಿಗೆ ಸಿಕ್ತು ಉತ್ತಮ ಸಂಭಾವನೆ
ಬಿಗ್ ಬಾಸ್ ಸೀಸನ್ 8 ಇನ್ನೇನು ಇನ್ನು ಕೆಲವೇ ದಿನಗಳಲ್ಲಿ ಮತ್ತೊಂದು ಯಶಸ್ವಿ ಸೀಸನ್ ಒಂದು ಮುಗಿಯಲಿದೆ. ಹೌದು ಬಿಗ್ ಬಾಸ್ ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಪ್ರತಿ ಸೀಸನ್ ಸಹಾ ಒಂದಲ್ಲಾ ಒಂದು ಹೊಸತನದಿಂದ ಮೂಡಿ ಬರುತ್ತೆ. ಬಿಗ್ ಬಾಸ್ ನ ಒಂದು ಹೊಸ ಸೀಸನ್ ಆರಂಭ ಆಗುತ್ತೆ ಅನ್ನೋ ವಿಷಯ ಘೋಷಣೆ ಆದ ಕೂಡಲೇ ಸಾಮಾಜಿಕ ಮಾದ್ಯಮಗಳಲ್ಲಿ ಅದರ ಚರ್ಚೆ ಸಹಾ ಆರಂಭ ಆಗಿ ಬಿಡುತ್ತೆ, ಈ ಸಲ ಸ್ಪರ್ಧಿಗಳು ಯಾರು ಯಾರು? ಹೀಗೆ ಹತ್ತು ಹಲವು ವಿಚಾರಗಳು ಮಾದ್ಯಮಗಳಲ್ಲಿ ಸದ್ದು ಮಾಡುತ್ತವೆ. ಆಗೆಲ್ಲಾ ಬಿಗ್ ಬಾಸ್ ಕ್ರೇಜ್ ಹೇಗೆ ಇದೆ ಅನ್ನೋದು ನಮಗೆ ಗೊತ್ತಾಗುತ್ತೆ. ಈ ಸಾರಿ ಸೀಸನ್ ಎಂಟರ ಆರಂಭದ ಘೋಷಣೆ ಆದಾಗಲೂ ವಾತಾವರಣ ಹೀಗೆ ಇತ್ತು. ಹಲವು ಸೆಲೆಬ್ರಿಟಿಗಳ ಹೆಸರು ಮಾದ್ಯಮಗಳಲ್ಲಿ ಗಿರಿಕಿ ಹೊಡೆದಿತ್ತು. ಈ ಎಲ್ಲವುಗಳ ನಡುವೆ ಆರಂಭವಾದ ಸೀಸನ್ ಎಂಟು ಈಗ ಮುಕ್ತಾಯದ ಘಟ್ಟವನ್ನು ತಲುಪಿದೆ.
ಫಿನಾಲೆ ವಾರ ನಡೀತಾ ಇರೋ ಈ ಹೊತ್ತಲ್ಲಿ ಬಿಗ್ ಬಾಸ್ ನ ಮನೆಯಲ್ಲಿ ಇರೋದು ಟಾಪ್ ಐದು ಜನ ಸದಸ್ಯರು ಮಾತ್ರ. ಏಕೆಂದರೆ ನಿನ್ನೆ ಕೊನೆಯ ಎಲಿಮಿನೇಷನ್ ನಡೆದಿದೆ. ಮಿಡ್ ವೀಕ್ ಎವಿಕ್ಷನ್ ಮೂಲಕ ದಿವ್ಯ ಸುರೇಶ್ ಅವರು ಹೊರಗೆ ಬಂದಿದ್ದಾರೆ. ಇನ್ನು ಪ್ರಶಾಂತ್ ಸಂಬರ್ಗಿ, ಅರವಿಂದ್, ಮಂಜು ಪಾವಗಡ, ದಿವ್ಯ ಉರುಡಗ ಮತ್ತು ವೈಷ್ಣವಿ ಸೀಸನ್ ಎಂಟರ ಟಾಪ್ ಐದು ಜನ ಸದಸ್ಯರಾಗಿ ಹೊರ ಹೊಮ್ಮಿದ್ದಾರೆ. ಬಿಗ್ ಬಾಸ್ ನಲ್ಲಿ ಫಿನಾಲೆ ವಾರದ ಮಧ್ಯದವರೆಗೂ ಬಂದು ಟ್ರೋಫೀಗೆ ಇನ್ನು ಮೂರು ದಿನ ಇರೋವಾಗ ಮನೆಯಿಂದ ಹೊರಗೆ ಬಂದಿದ್ದಾರೆ ದಿವ್ಯ ಸುರೇಶ್.
ದಿವ್ಯ ಸುರೇಶ್ ಅವರು ಬಿಗ್ ಬಾಸ್ ಗೆ ಬರುವ ಮುನ್ನ ಸಿನಿಮಾ, ಸೀರಿಯಲ್ ಅಂತ ಕೆಲಸವನ್ನು ಮಾಡಿದ್ದರೆ, ಆದರೆ ಅವರಿಗೆ ಒಂದು ಜನಪ್ರಿಯತೆ ಅಥವಾ ಒಂದು ನಿರ್ದಿಷ್ಟವಾದ ಗುರುತು ಎನ್ನುವುದು ಸಿಕ್ಕಿರಲಿಲ್ಲ. ಆದರೆ ಬಿಗ್ ಬಾಸ್ ಗೆ ಬಂದ ಮೇಲೆ ದಿವ್ಯ ಸುರೇಶ್ ಅವರ ಜನಪ್ರಿಯತೆ ಇನ್ನೊಂದು ಹಂತಕ್ಕೆ ಸೇರಿದೆ. ಬಿಗ್ ಬಾಸ್ ಮನೆಯಲ್ಲಿ ಅವರಿಗೆ ತನ್ನನ್ನು ತಾನು ಜನರ ಮುಂದೆ ಪ್ರತಿಬಿಂಬಿಸಲು ಒಂದು ಅದ್ಭುತವಾದ ವೇದಿಕೆ ದೊರೆಯಿತು. ಅಲ್ಲದೇ ಮನೆಯೊಳಗೆ ದಿವ್ಯ ಆಡಿದಂತಹ ಕೆಲವು ಮಾತುಗಳು ಹೊರ ಜಗತ್ತಿನಲ್ಲಿ ಟ್ರೋಲ್ ಗೆ ಗುರಿಯಾಗಿದ್ದು ಉಂಟು. ಮಂಜು ಪಾವಗಡ ಜೊತೆಗಿನ ಸ್ನೇಹದ ವಿಚಾರವಾಗಿ ಕೂಡಾ ಸಾಕಷ್ಟು ಸುದ್ದಿಗಳಾದವು.
ಇದೀಗ ಎಲ್ಲಾ ಸಿಹಿ ಕಹಿ ಅನುಭವಗಳನ್ನು ತನ್ನ ಜೊತೆಯಲ್ಲಿ ಹೊತ್ತು ಬಿಗ್ ಹೌಸ್ ನಿಂದ ಹೊರಗೆ ಬಂದಿದ್ದಾರೆ ದಿವ್ಯ ಸುರೇಶ್. ಇನ್ನು ಎಲ್ಲಾ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಸಂಭಾವನೆ ನಿಗಧಿಯಾದಂತೆ ದಿವ್ಯ ಸುರೇಶ್ ಅವರಿಗೂ ಸಂಭಾವನೆ ನಿಗಧಿಯಾಗಿರುತ್ತದೆ ಎನ್ನುವ ವಿಷಯ ವಾಸ್ತವ. ಹಾಗಿದ್ದರೆ ದಿವ್ಯ ಸುರೇಶ್ ಅವರಿಗೆ ಬಿಗ್ ಬಾಸ್ ನ ತಮ್ಮ ಜರ್ನಿಗೆ ಸಿಕ್ಕ ಸಂಭಾವನೆ ಎಷ್ಟು ? ಎನ್ನುವ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಇರುತ್ತದೆ. ಹಾಗಿದ್ದರೆ ನಿಮ್ಮ ಆ ಕುತೂಹಲಕ್ಕೆ ಉತ್ತರ ಇಲ್ಲಿದೆ. ದಿವ್ಯ ಸುರೇಶ್ ಅವರು ತಮ್ಮ ಬಿಗ್ ಬಾಸ್ ಜರ್ನಿ ಗೆ ಪಡೆದ ಸಂಭಾವನೆಯ ವಿವರ ಇಲ್ಲಿದೆ.
ಬಿಗ್ ಬಾಸ್ ಮನೆಯ ದಿವ್ಯ ಸುರೇಶ್ ಅವರ ಜರ್ನಿಗೆ ವಾರಕ್ಕೆ 25 ಸಾವಿರ ರೂಪಾಯಿಗಳ ಸಂಭಾವನೆಯನ್ನು ನಿಗಧಿ ಮಾಡಲಾಗಿತ್ತು ಎನ್ನಲಾಗಿದೆ. ವಾರಕ್ಕೆ 25 ,ಸಾವಿರ ಲೆಕ್ಕದಲ್ಲಿ ದಿವ್ಯ ಸುರೇಶ್ ಬಿಗ್ ಬಾಸ್ ಮನೆಯಲ್ಲಿ ಇದ್ದ 17 ವಾರಗಳ ಅವಧಿಗೆ ನಾಲ್ಕು ಲಕ್ಷ, ಎಪ್ಪತ್ತೈದು ಸಾವಿರ ರೂ.ಗಳನ್ನು ಅವರು ಸಂಭಾವನೆಯಾಗಿ ಪಡೆದಿದ್ದಾರೆ. ಒಟ್ಟಾರೆ ಫಿನಾಲೆ ಹಂತದವರೆಗೂ ಬಂದಿದ್ದ ದಿವ್ಯ ಸುರೇಶ್ ಅವರು ಬಹಳ ಬೇಸರದಿಂದಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಹೊರಗೆ ಅವರು ಇನ್ನಷ್ಟು ಜನಪ್ರಿಯತೆಯ ಹಾಗೂ ಯಶಸ್ಸು ಪಡೆಯಲಿ ಎಂದು ನಾವು ಸಹಾ ಹಾರೈಸೋಣ..