ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾದ್ಯಮಗಳಲ್ಲಿ ದಕ್ಷಿಣ ಸಿನಿರಂಗದ ಕ್ಯೂಟ್ ಕಪಲ್ ಎನಿಸಿಕೊಂಡಿದ್ದ ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನದ ವಿಷಯವೇ ತುಂಬಿದ್ದು, ಈ ಬಗ್ಗೆ ನಟನಾಗಲೀ, ನಟಿಯಾಗಲೀ ಮಾದ್ಯಮದ ಎದುರು ವಿಷಯ ಏನು ಎನ್ನುವುದನ್ನು ನೇರವಾಗಿ ಮಾತನಾಡಿಲ್ಲ. ಆದರೆ ನಾಗಚೈತನ್ಯ ಮಾತ್ರ ಕಡೆಗೂ ಮೌನ ಮುರಿದಿದ್ದಾರೆ. ಅವರು ಮಾದ್ಯಮಗಳ ಸುದ್ದಿಗಳ ಬಗೆಗೆ ತಮ್ಮ ಮೌನವನ್ನು ಮುರಿದಿದ್ದಾರೆ. ಹರಡಿರುವ ಸುದ್ದಿಗಳ ಕುರಿತಾಗಿ ನಾಗ ಚೈತನ್ಯ ತಮ್ಮ ಅಸಮಾಧಾನವನ್ನು ಹೊರ ಹಾಕಿತ್ತಾ, ಇಂದಿನ ಸುದ್ದಿಗಳು ಕೇವಲ ಟಿ ಆರ್ ಪಿ ಗಾಗಿ ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ನಾಗ ಚೈತನ್ಯ ಅವರನ್ನು ಇಂತಹ ಸಂದಿಗ್ಧತೆಯಲ್ಲೂ ಹೇಗೆ ಕೆಲಸವನ್ನು ನಿರ್ವಹಣೆ ಮಾಡುತ್ತಿದ್ದೀರಿ ಎಂದು ಕೇಳಿದ ವಿಚಾರಕ್ಕೆ ನಾಗಚೈತನ್ಯ ಮುಕ್ತವಾಗಿ ಮಾತನಾಡಿದ್ದಾರೆ. ಇದಕ್ಕೆ ಉತ್ತರಿಸಿದ ನಾಗಚೈತನ್ಯ ನಾನು ಮೊದಲಿನಿಂದಲೂ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನವನ್ನು ಪ್ರತ್ಯೇಕವಾಗಿ ನೋಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದೇನೆ ಎಂದು ಉತ್ತರಿಸಿದ್ದಾರೆ.
ಈ ಗುಣವನ್ನು ನಾನು ತಂದೆ ತಾಯಿಯಿಂದಲೇ ಕಲಿತಿದ್ದು, ಅವರು ಮನೆಯಲ್ಲಿ ಇದ್ದಾಗ ವೃತ್ತಿಯ ಕುರಿತಾಗಿ ಮಾತನಾಡುತ್ತಿರಲಿಲ್ಲ. ಅದೇ ರೀತಿ ವೃತ್ತಿಯ ಸ್ಥಳದಲ್ಲಿ ವೈಯಕ್ತಿಕ ಜೀವನ ಅವರಿಗೆ ಅಡ್ಡಿಯಾಗುತ್ತಿರಲಿಲ್ಲ. ಎರಡನ್ನೂ ಅವರು ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು ಎನ್ನುತ್ತಾ ಇನ್ನು ಮುಂದೆ ತಾನು ಸಾಮಾಜಿಕ ಜಾಲತಾಣಗಳ ಬಗ್ಗೆ ಆಸಕ್ತಿಯನ್ನು ತೋರುವುದಿಲ್ಲ ಎಂದಿದ್ದಾರೆ.
ಕ್ಷಣ ಕ್ಷಣವೂ ನಮ್ಮದೇ ಸುದ್ದಿ ಪ್ರಸಾರ ಮಾಡುವುದನ್ನು ನೋಡಿ ಮನಸ್ಸಿಗೆ ಬೇಸರವಾಯಿತು. ಇದೊಂದು ಸುದ್ದಿ, ನಾಳೆ ಇನ್ನೊಂದು, ನಾಡಿದ್ದು ಮತ್ತೊಂದು. ಆದರೆ ನಮ್ಮ ತಾತ ನ ಕಾಲದಲ್ಲಿ ಹೀಗಿರಲಿಲ್ಲ. ಆಗ ಮ್ಯಾಗಜೀನ್ ಗಳು ತಿಂಗಳಿಗೊಮ್ಮೆ ಬರುತ್ತಿತ್ತು. ಆಗ ಹೊಸ ಮ್ಯಾಗಜೀನ್ ಬರುವವರೆಗೆ ಸುದ್ದಿಗಳು ಹಾಗೇ ಉಳಿದಿರುತ್ತಿದ್ದವು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ಕ್ಷಣ ಕ್ಷಣಕ್ಕೂ ತಿದ್ದಿದ ಸುದ್ದಿಗಳು ಬರುತ್ತವೆ.
ಹೀಗಿರುವುದರಿಂದ ಜನರ ಮನಸ್ಸಿನಲ್ಲಿ ಸುದ್ದಿಗಳು ಹೆಚ್ಚು ಹೊತ್ತು ಉಳಿಯುವುದಿಲ್ಲ. ನಿಜವಾದ ಸುದ್ದಿ ಉಳಿದರೆ, ಹುರುಳಿಲ್ಲದ ಸುದ್ದಿಯನ್ನು ಜನರು ಮರೆತು ಬಿಡುತ್ತಾರೆ. ಟಿ ಆರ್ ಪಿ ಗಾಗಿ ಮಾಡುವ ವದಂತಿಗಳ ಸುದ್ದಿಗಳು ನನ್ನ ಮೇಲೆ ಪರಿಣಾಮ ಬೀರುವುದನ್ನು ನಿಲ್ಲಿಸಿದೆ ಎಂದು ನಾಗಚೈತನ್ಯ ಅವರು ಹೇಳುವ ಮೂಲಕ ತನ್ನ ಹಾಗೂ ಸಮಂತಾ ವಿಚ್ಚೇದನದ ಕುರಿತು ಮಾದ್ಯಮಗಳ ಸುದ್ದಿಗಳ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.