ಕೊನೆಗೂ ಮುಗಿದ ಚುಂಬನ ಕಾಂಡ: 14 ವರ್ಷಗಳ ಬಳ ಶಿಲ್ಪಾ ಶೆಟ್ಟಿಯನ್ನು ಸಂತ್ರಸ್ತೆ, ಬಲಿಪಶು ಎಂದ ಕೋರ್ಟ್!!

Entertainment Featured-Articles News
55 Views

2007 ರಲ್ಲಿ ರಾಜಸ್ಥಾನದಲ್ಲಿ ಏಡ್ಸ್ ಕುರಿತಾಗಿ ಜಾಗೃತಿಯನ್ನು ಮೂಡಿಸುವ ಸಾರ್ವಜನಿಕ ಕಾರ್ಯಕ್ರಮವೊಂದನ್ನು ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಿಂದಿ ಚಿತ್ರರಂಗದ ಪ್ರಖ್ಯಾತ ನಟಿ ಶಿಲ್ಪಾ ಶೆಟ್ಟಿ ಹಾಗೂ ಹಾಲಿವುಡ್ ನಟ ರಿಚರ್ಡ್ ಗಿಯರ್ ಭಾಗಿಯಾಗಿದ್ದರು. ದೊಡ್ಡ ಮಟ್ಟದಲ್ಲಿ ನಡೆದಂತಹ ಸಾರ್ವಜನಿಕ ಕಾರ್ಯಕ್ರಮ ಅದಾಗಿತ್ತು. ಆದರೆ ಈ ಕಾರ್ಯಕ್ರಮ ನಡೆಯುವ ವೇಳೆಯಲ್ಲಿ ನಟ ರಿಚರ್ಡ್ ಅವರು ಸಾರ್ವಜನಿಕವಾಗಿ ಶಿಲ್ಪಾ ಶೆಟ್ಟಿ ಕೆನ್ನೆಗೆ ಮುತ್ತನ್ನು ನೀಡಿದ್ದರು. ಈ ಘಟನೆಯು ದೇಶವ್ಯಾಪಿ ದೊಡ್ಡಮಟ್ಟದಲ್ಲಿ ಚರ್ಚೆಯನ್ನು ಹುಟ್ಟುಹಾಕಿತ್ತು.

ಈ ಘಟನೆಯ ಬೆನ್ನಲ್ಲೇ ರಾಜಸ್ಥಾನದಲ್ಲಿ ಭಾರತೀಯ ದಂ ಡ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ನಟಿ ಶಿಲ್ಪಾ ಶೆಟ್ಟಿ ಹಾಗೂ ನಟ ರಿಚರ್ಡ್ ಗಿಯರ್ ಇಬ್ಬರ ಮೇಲೂ ದೂರನ್ನು ದಾಖಲು ಮಾಡಲಾಗಿತ್ತು. ಅಲ್ಲದೇ ಮಾದ್ಯಮಗಳಲ್ಲಿ ಈ ವಿಷಯ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಅದಾದ ಮೇಲೆ ಹತ್ತು ವರ್ಷಗಳ ನಂತರ ಅಂದರೆ 2017ರಲ್ಲಿ ಈ ಪ್ರಕರಣವನ್ನು ರಾಜಸ್ಥಾನದ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯವು ಮುಂಬೈ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು.

ಇದರ ಬೆನ್ನಲ್ಲೇ ನಟಿ ಶಿಲ್ಪಾಶೆಟ್ಟಿ ಪ್ರಕರಣವನ್ನು ಕೈಬಿಡುವಂತೆ ಮುಂಬೈ ನ್ಯಾಯಾಲಯದಲ್ಲಿ ಮನವಿಯನ್ನು ಮಾಡಿಕೊಂಡು ಅರ್ಜಿಯನ್ನು ನೀಡಿದ್ದರು. ಜನವರಿ 18 ರಂದು ಈ ಪ್ರಕರಣದ ವಿಚಾರಣೆಯನ್ನು ನಡೆಸಲಾಗಿದ್ದು, ಮುಂಬೈ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೇತ್ಕಿ ಚೌಹಾಣ್ ಅವರು ಈ ಘಟನೆ ನಡೆದ ಸಂದರ್ಭದಲ್ಲಿಯೇ ನಟಿ ಶಿಲ್ಪಾ ಶೆಟ್ಟಿ ಅವರು ಇದರ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ನಟಿಯ ವಿರುದ್ಧ ದಾಖಲಾಗಿರುವ ದೂರು ಆಧಾರ ರಹಿತವಾಗಿದೆ ಎ‌ಂದು ಹೇಳಿದ್ದಾರೆ.

ಅಲ್ಲದೇ ಅವರು, ಅಂದು ನಟ ರಿಚರ್ಡ್ ಗಿಯರ್ ಅವರು ಮಾಡಿದ ಕೃತ್ಯಕ್ಕೆ ಶಿಲ್ಪಾ ಶೆಟ್ಟಿ ಕೇವಲ ಬ ಲಿ ಪ ಶು ವಾಗಿದ್ದಾರೆ. ಆದ್ದರಿಂದಲೇ ಆಧಾರ ರಹಿತವಾದ ಈ ಪ್ರಕರಣವನ್ನು ಕೈ ಬಿಡಲಾಗುತ್ತಿದೆ ಎಂದು ಹೇಳುವ ಮೂಲಕ ಈ ಪ್ರಕರಣಕ್ಕೆ ಸುಖಾಂತ್ಯವನ್ನು ಹಾಡಿದ್ದಾರೆ. ಈ ಮೂಲಕ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಒಂದು ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಇತ್ತೀಚಿನ ದಿನಗಳಲ್ಲಿ ಶಿಲ್ಪಾ ಶೆಟ್ಟಿ ತಮ್ಮ ಪತಿಯ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದರು. ಬಹುದಿನಗಳ ನಂತರ ಅವರಿಗೆ ಖುಷಿ ನೀಡುವಂತಹ ಘಟನೆ ನಡೆದಿದೆ.

Leave a Reply

Your email address will not be published. Required fields are marked *