ಕೊನೆಗೂ ನಮ್ಮ ಕನಸು ನನಸಾಗೇ ಹೋಯ್ತು: ಆಲಿಯಾ ಭಟ್ ಯಾವ ಕನಸೀಗ ನನಸಾಯ್ತು? ಎಕ್ಸೈಟ್ ಆದ್ರು ಅಭಿಮಾನಿಗಳು!!

Written by Soma Shekar

Updated on:

---Join Our Channel---

ಬಾಲಿವುಡ್ ನ ಸ್ಟಾರ್ ನಟಿಯರಲ್ಲಿ ನಟಿ ಆಲಿಯಾ ಭಟ್ ಕೂಡಾ ಒಬ್ಬರು. ಬಾಲಿವುಡ್ ಚಿತ್ರ ಸೀಮೆಯಲ್ಲಿ ತನ್ನದೇ ಆದ ಸ್ಥಾನ, ಸ್ಟಾರ್ ಡಂ ಹೊಂದಿರುವ ಆಲಿಯಾ ಈಗಾಗಲೇ ಹಲವು ಸ್ಟಾರ್ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದಾರೆ. ಇದಲ್ಲದೇ ಆಲಿಯಾ ನಟನೆಗೆ ಅಭಿಮಾನಿಗಳು ಕೂಡಾ ಫಿದಾ ಆಗಿದ್ದಾರೆ. ಎಷ್ಟೆಲ್ಲಾ ಸ್ಟಾರ್ ಡಂ‌ ಇದ್ದಾಗ್ಯೂ ಆಗಾಗ ಸ್ಟಾರ್ ಕಿಡ್ ಎನ್ನುವ ಟೀಕೆ ಕೇಳಿ ಬರುವುದು ಸಹಾ ಉಂಟು. ಆಲಿಯಾ ಬಾಲಿವುಡ್ ನ ಬ್ಯುಸಿ ನಟಿಯರಲ್ಲಿ ಒಬ್ಬರು. ಆರ್ ಆರ್ ಆರ್ ಸಿನಿಮಾ ಮೂಲಕ ದಕ್ಷಿದ ಚಿತ್ರ ರಂಗಕ್ಕೂ ಆಲಿಯಾ ಅಡಿಯಿರಿಸಿದ್ದಾರೆ.

ನಟಿ ಆಲಿಯಾ ಭಟ್ ಅಭಿನಯದ ಎರಡು ದೊಡ್ಡ ಸಿನಿಮಾಗಳು ಸದ್ಯಕ್ಕೆ ಬಿಡುಗಡೆಯ ಹಾದಿಯಲ್ಲಿವೆ. ಒಂದು ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ನಿರ್ದೇಶನ ತ್ರಿಬಲ್ ಆರ್ ಆದರೆ ಇನ್ನೊಂದು ಅದಕ್ಕಿಂತ ಮೊದಲೇ ಆಲಿಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದ, ಬಾಲಿವುಡ್ ನ ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಥಿಯಾವಾಡಿ ಸಿನಿಮಾ ಕೂಡಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆಗಳು ಸಹಾ ಇವೆ.

ಇನ್ನು ಗಂಗೂಬಾಯಿ ಕಥಿಯಾವಾಡಿ ಸಿನಿಮಾ ಮುಂಬೈನ ಕಾಮಾಟಿಪುರದಲ್ಲಿ ಲೈಂ ಗಿ ಕ ಕಾರ್ಯಕರ್ತೆ ಆಗಿದ್ದ ಗಂಗೂಬಾಯಿ ಅವರ ನಿಜ ಜೀವನದ ಕಥೆಯನ್ನಾಧರಿಸಿದ ಸಿನಿಮಾ ಆಗಿದೆ. ಬಹಳ ಚಿಕ್ಕ ವಯಸ್ಸಿನಲ್ಲೇ ವೇ ಶ್ಯಾ ವಾ ಟಿ ಕೆ ಕೂಪಕ್ಕೆ ತಳ್ಳಲ್ಪಟ್ಟ ಗಂಗೂಬಾಯಿ ಕಥಿಯಾವಾಡಿಯ ಜೀವನದ ಕಥೆಗೆ ಸಿನಿಮಾ ರೂಪ ನೀಡಲಾಗಿದೆ. ಇನ್ನು ಈ ಸಿನಿಮಾದ ಧೋಲಿಡಾ ಹಾಡು ಒಂದು ಬಿಡುಗಡೆಯಾಗಿದೆ. ಈ ವೇಳೆ ಆಲಿಯಾ ಬಹಳ ಖುಷಿಯಿಂದ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ಅವರ ಸಿನಿಮಾಗಳಲ್ಲಿ ಹಾಡು, ಡಾನ್ಸ್ ಗಳಿಗೆ ವಿಶೇಷ ಪ್ರಾಧಾನ್ಯತೆ ಇದ್ದೇ ಇರುತ್ತದೆ. ಈಗ ದೋಲಿಡಾ ಹಾಡಿನಲ್ಲಿ ಕೂಡಾ ಡ್ಯಾನ್ಸ್ ಭರ್ಜರಿಯಾಗಿದ್ದು, ಆಲಿಯಾ ಸಹಾ ಬಹಳ ಉತ್ಸುಕತೆಯಿಂದ ಕುಣಿದಿರುವುದು ಕಂಡು ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಆಲಿಯಾ ಶೇರ್ ಮಾಡಿದ ವೀಡಿಯೋ ನೋಡಿ ಹೊಗಳುತ್ತಿದ್ದಾರೆ. ಕಾಮೆಂಟ್ ಗಳ ಮೂಲಕ ನಟಿಗೆ ತಮ್ಮ ಮೆಚ್ಚುಗೆಯನ್ನು ಸೂಚಿಸುತ್ತಿದ್ದು, ವೀಡಿಯೋ ವೈರಲ್ ಆಗುತ್ತಿದೆ.

https://www.instagram.com/tv/CZyQRJlgyS7/?utm_medium=copy_link

ಹಾಡಿನ ತುಣುಕಿನ ವೀಡಿಯೋ ಶೇರ್ ಮಾಡಿಕೊಂಡ ಆಲಿಯಾ, ಕೊನೆಗೂ ನಮ್ಮ ಕನಸು ನನಸಾಗಿದೆ. ಸಂಜಯ್ ಲೀಲಾ ಬನ್ಸಾಲಿ ಅವರು ಸಂಯೋಜನೆ ಮಾಡಿದ ಡ್ಯಾನ್ಸ್ ಕೊನೆಗೂ ಇಂದು ಬಿಡುಗಡೆ ಆಗಿದೆ. ನನ್ನ ಹೃದಯವು ಸದಾ ಧೋಲಿಡಾ ಹಾಡಿಗಾಗಿ ಮಿಡಿಯುತ್ತಿರುತ್ತದೆ ಎಂದು ಬರೆದುಕೊಂಡು ಖುಷಿ ಪಟ್ಟಿದ್ದಾರೆ. ಬಿಳಿ ಸೀರೆಯುಟ್ಟು ಆಲಿಯಾ ಜೋಶ್ ನಿಂದ ಹೆಜ್ಜೆ ಹಾಕಿರುವುದನ್ನು ಕಂಡು ಅಭಿಮಾನಿಗಳು ಸಹಾ ಖುಷಿಯಾಗಿದ್ದಾರೆ.

Leave a Comment