HomeEntertainmentಕೊನೆಗೂ ಕಾನೂನಿಗೆ ತಲೆ ಬಾಗಿದ ದಳಪತಿ ವಿಜಯ್: ಕಾರಿನ ಸಂಪೂರ್ಣ ತೆರಿಗೆ ಪಾವತಿಸಿದ ನಟ

ಕೊನೆಗೂ ಕಾನೂನಿಗೆ ತಲೆ ಬಾಗಿದ ದಳಪತಿ ವಿಜಯ್: ಕಾರಿನ ಸಂಪೂರ್ಣ ತೆರಿಗೆ ಪಾವತಿಸಿದ ನಟ

ತಮಿಳಿನ ಸ್ಟಾರ್ ನಟ ವಿಜಯ್ ಅವರ ಸಿನಿಮಾಗಳು ಬರುತ್ತಿವೆ ಎಂದರೆ ಎಲ್ಲೆಲ್ಲೂ ಅದೇ ಸುದ್ದಿಗಳು ರಾರಾಜಿಸಲು ತೊಡಗುತ್ತವೆ. ಆದರೆ ಇತ್ತೀಚಿಗೆ ಅವರ ಸಿನಿಮಾಗಳ ಬದಲಾಗಿ ಅವರ ದುಬಾರಿ ಕಾರಿನ ಕಾರಣದಿಂದಾಗಿ ಸಾಕಷ್ಟು ಸದ್ದು , ಸುದ್ದಿ ಮಾಡಿದ್ದು, ಮಾದ್ಯಮಗಳಲ್ಲಿ ಈ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆದಿದ್ದು ಮಾತ್ರವೇ ಅಲ್ಲದೇ, ನಟನ ನಡತೆಯನ್ನು ಪ್ರಶ್ನಿಸಿದ್ದರು ಅನೇಕರು, ಇನ್ನೂ ಕೆಲವರು ನಟ ವಿಜಯ್ ಅವರನ್ನು ಟ್ರೋಲ್ ಸಹಿತ ಮಾಡಿದ್ದು ಈಗ ಹಳೆಯ ಸುದ್ದಿ. ಕೆಲವು ವರ್ಷಗಳ ಹಿಂದೆ ನಟ ವಿಜಯ್ ಅವರು ವಿದೇಶದಿಂದ ಒಂದು ದುಬಾರಿ ರೋಲ್ಸ್ ರಾಯ್ ಘೋಸ್ಟ್ ಕಾರನ್ನು ಖರೀದಿಸಿ ಆಮದು ಮಾಡಿಕೊಂಡಿದ್ದಾರೆ. ಕಾರನ್ನು ಖರೀದಿಸಿದ ನಟ ಅದರ ತೆರಿಗೆಯನ್ನು ಮನ್ನಾ ಮಾಡುವಂತೆ ನ್ಯಾಯಾಲಯಕ್ಕೆ ಅರ್ಜಿಯನ್ನು ಹಾಕಿಕೊಂಡು ಮನವಿಯನ್ನು ಮಾಡಿದ್ದರು. ಆದರೆ ಕೋರ್ಟ್ ನಲ್ಲಿ ನಡೆದಿದ್ದು ಮಾತ್ರ ರಾಷ್ಟ್ರವ್ಯಾಪಿ ಸುದ್ದಿಯಾಗಿ ಹೋಯಿತು.

ಹೌದು ನಟ ವಿಜಯ್ ಅವರು ತಮ್ಮ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿಗೆ ಆಮದು ತೆರಿಗೆಯಲ್ಲಿ ವಿನಾಯತಿ ಕೋರಿದ ಅರ್ಜಿಯನ್ನು ವಿಚಾರಣೆ‌ ಮಾಡಿದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಗಳು ಸಿಟ್ಟು ಹಾಗೂ ಅಸಮಾಧಾನವನ್ನು ಹೊರಹಾಕಿದ್ದರು, ಅಲ್ಲದೇ ನ್ಯಾಯಾಧೀಶರು ದಂಡವನ್ನು ಸಹಾ ವಿಧಿಸಿದ್ದರು. ಈ ವಿಚಾರವಾಗಿ ನಟ ವಿಜಯ್ ಅವರ ಪರ ವಕೀಲರು ಅ ಸಮಾಧಾನವನ್ನು ಹೊರ ಹಾಕಿದ್ದರು. ಆದರೆ ಈಗ ನಟ ವಿಜಯ್ ಅವರು ತಮ್ಮ ತಪ್ಪನ್ನು ತಿದ್ದುಕೊಂಡಿದ್ದು ಸಂಪೂರ್ಣ ತೆರಿಗೆಯನ್ನು ಪಾವತಿ ಮಾಡಿದ್ದಾರೆ ಎನ್ನಲಾಗಿದೆ. ನಟ ವಿಜಯ್ 2012 ರಲ್ಲಿ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಲಂಡನ್ ನಿಂದ ತರಿಸಿಕೊಂಡಿದ್ದರು.

ಕಾರನ್ನು ವಿದೇಶದಿಂದ ತರಿಸಿದ ನಂತರ ಅವರು ಎಂಟ್ರಿ ಟ್ಯಾಕ್ಸ್ ಅಥವಾ ತೆರಿಗೆಯಲ್ಲಿ ವಿನಾಯಿತಿಯನ್ನು ನೀಡುವಂತೆ ಕೋರಿ ಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಕೆಲವೇ ದಿನಗಳ ಹಿಂದೆ ಈ ಅರ್ಜಿಯನ್ನು ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ ನ್ಯಾಯಾಧೀಶರು, ರೀಲ್ ಹೀರೋಗಳು ರಿಯಲ್ ಹೀರೋಗಳಂತೆ ವರ್ತಿಸಬೇಕು ಎಂದಿದ್ದು ಮಾತ್ರವೇ ಅಲ್ಲದೇ ತಮಿಳು ನಾಡಿನಲ್ಲಿ ಸಿನಿಮಾ ಹೀರೋಗಳು ಜನರನ್ನು ಆಳುವ ನಾಯಕರಾಗಿ ಹೊರ ಹೊಮ್ಮಿದ್ದು ಜನರು ಅವರನ್ನು ಅನುಸರಿಸುತ್ತಾರೆ. ಹಾಗಾಗಿ ಅವರು ರೀಲ್ ಹೀರೋಗಳಾಗಿರದೆ, ರಿಯಲ್ ಲೈಫ್ ಹೀರೋಗಳಾಗಿರಬೇಕು ಎಂದು ಹೇಳಿ, ವಿಜಯ್ ಅವರಿಗೆ ಒಂದು ಲಕ್ಷ ದಂಡವನ್ನು ಸಹಾ ವಿಧಿಸಿದ್ದರು.

- Advertisment -